ಶ್ರೀನಗರದಲ್ಲಿ ಜಿ೨೦ ಸಭೆಗೆ ಬರಲು ಚೀನಾದಿಂದ ನಿರಾಕರಣೆ !

  • ‘ವಿವಾದಿತ ಪ್ರದೇಶದಲ್ಲಿ ಸಭೆ ನಡೆಸಲು ನಮ್ಮ ವಿರೋಧವಂತೆ !’

  • ಪ್ರತ್ಯುತ್ತರ ನೀಡಿದ ಭಾರತ

ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್

ಬೀಜಿಂಗ್ (ಚೀನಾ) – ‘ಜಿ ೨೦’ ಪ್ರವಾಸೋದ್ಯಮ ಕಾರ್ಯ ಗುಂಪಿನ ಮೂರನೇ ಸಭೆಯನ್ನು ಮೇ ೨೨ ರಿಂದ ೨೪ ರವರೆಗೆ ಶ್ರೀನಗರದಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹಾಜರಾಗಲು ಚೀನಾ ನಿರಾಕರಿಸಿದೆ. ಇದರೊಂದಿಗೆ ತುರ್ಕಿ ಮತ್ತು ಸೌದಿ ಅರೇಬಿಯಾ ಈ ದೇಶಗಳು ಈ ಸಭೆಗೆ ನೋಂದಾಯಿಸಲಿಲ್ಲ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ ವೆನಬಿನ ಇವರು, ವಿವಾದಿತ ಪ್ರದೇಶದಲ್ಲಿ ಯಾವುದೇ ರೀತಿಯ ಜಿ೨೦ ಸಭೆಗೆ ಚೀನಾವು ಬಲವಾಗಿ ವಿರೋಧಿಸುತ್ತದೆ ನಾವು ಇಂತಹ ಸಭೆಗಳಿಗೆ ಹಾಜರಾಗುವುದಿಲ್ಲ. ಇದಕ್ಕೆ ಭಾರತವು ‘ತನ್ನ ಗಡಿಯೊಳಗೆ ಸಭೆಗಳನ್ನು ನಡೆಸಲು ಸ್ವತಂತ್ರವಾಗಿದೆ’ ಎಂದು ಹೇಳುತ್ತಾ ಚೀನಾಕ್ಕೆ ಬಾರತವು ಪ್ರತ್ಯುತ್ತರ ನೀಡಿದೆ

ಶ್ರೀನಗರದಲ್ಲಿ ನಡೆಯಲಿರುವ ಈ ಸಭೆಗೆ ಜಿ೨೦ ರಾಷ್ಟ್ರಗಳ ಸುಮಾರು ೬೦ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಮೊದಲು ೧೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಗೆ ಬರುತ್ತಾರೆ ಎಂದು ಅಂದಾಜಿಸಲಾಗಿತ್ತು.

ಸಂಪಾದಕರ ನಿಲುವು

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ. ಚೀನಾ ಹೇಗೆ ಟಿಬೆಟ್ ಅನ್ನು ಕಬಳಿಸಿದೆ ಹಾಗೇ ಭಾರತ ಕಾಶ್ಮೀರವನ್ನು ಕಬಳಿಸಲಿಲ್ಲ. ನಾಳೆ ಟಿಬೆಟ್ ನಲ್ಲಿ ಜಿ೨೦ ಸಭೆ ನಡೆದರೆ ಭಾರತವೂ ಸಭೆಗೆ ಹಾಜರಾಗದೆ ಚೀನಾಕ್ಕೆ ಅದಕ್ಕೆ ತಕ್ಕ ಉತ್ತರ ನೀಡಬೇಕು !