ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗುವ ನಿರ್ಣಯವು ನನ್ನ ಅಜ್ಜ-ಅಜ್ಜಿಯವರು ಮಾಡಿದ ದೊಡ್ಡ ತಪ್ಪು ! – ಶಯಾನ ಅಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧವಾಗಿರುವ ಪಾಕಿಸ್ತಾನಿ ನಾಗರೀಕ

ನ್ಯೂಯಾರ್ಕ್ – ಪಾಕಿಸ್ತಾನದಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯಾವಾಗಿರುವ ಶಯಾನ ಅಲಿಯವರಿಗೆ ಪಾಕಿಸ್ತಾನ ಬಿಡಬೇಕಾಯಿತು. `ನಾನು ಪಾಕಿಸ್ತಾನದ ಐ.ಎಸ್.ಐ.ನ ತಾಳಕ್ಕೆ ಕುಣಿಯಲಾರೆನು. ನನಗೆ ನನ್ನ ಹತ್ಯೆಯಾಗಬಹುದು ಎಂಬ ಭಯವಿತ್ತು. ಆದುದರಿಂದ ನಾನು ಪಾಕಿಸ್ತಾನವನ್ನು ಬಿಟ್ಟೆ. ವಿಭಜನೆಯ ಸಮಯದಲ್ಲಿ ನನ್ನ ಅಜ್ಜ-ಅಜ್ಜಿಯವರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಲು ಮಾಡಿದ ನಿರ್ಣಯವು ಘೋರ ತಪ್ಪಾಗಿತ್ತು’ ಎಂದು ಶಯಾನ ಅಲಿಯವರು ಟ್ವೀಟ್ ಮಾಡಿದ್ದಾರೆ. ಸದ್ಯ ಅವರು ಅಮೇರಿಕದಲ್ಲಿ ವಾಸ್ತವ್ಯದಲ್ಲಿದ್ದಾರೆ.

1. ಈ ಟ್ವೀಟ್ ನಲ್ಲಿ `ಪಾಕಿಸ್ತಾನವು ಧರ್ಮದ ಆಧಾರದಲ್ಲಿ ನಿರ್ಮಾಣವಾಗಿತ್ತು. ಜಗತ್ತಿಗೆ ಅದರ ಯಾವುದೇ ಅವಶ್ಯಕತೆ ಇರಲಿಲ್ಲ. ಪಾಕಿಸ್ತಾನ ಎಂಬ ಹೆಸರಿನ ಅರ್ಥವೇ ಉಳಿದಿಲ್ಲ’ ಎಂದು ಹೇಳಿದ್ದಾರೆ. ಈ ಟ್ವೀಟ್ ನಲ್ಲಿ ಅವರು ಭಾರತದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದಿರುವುದು ಕಂಡುಬರುತ್ತದೆ.

2. ಹಿಂದೂ ಮತ್ತು ಮುಸಲ್ಮಾನರು ಯಾವಾಗಲೂ ಶತ್ರುಗಳಾಗಿರಲಿಲ್ಲ. ಕೆಲವು ಸಮಾಜವಿಘಾತಕ ಶಕ್ತಿಗಳಿಗೆ ಈ ಎರಡೂ ಸಮೂಹಗಳನ್ನು ಬೇರ್ಪಡಿಸಬೇಕಿತ್ತು. (ಹೀಗೆ ಎಷ್ಟು ಮುಸಲ್ಮಾನರಿಗೆ ಅನಿಸುತ್ತದೆ ? ಹೆಚ್ಚಿನ ಮತಾಂಧ ವೃತ್ತಿಯ ಮುಸಲ್ಮಾನರು ಹಿಂದೂಗಳನ್ನು ದ್ವೇಷಿಸುತ್ತಾರೆ ಮತ್ತು ಇದರಿಂದಾಗಿ ಹಿಂದೂದ್ವೇಷಿ ಕಾರ್ಯಚರಣೆಗಳನ್ನು ಮಾಡುತ್ತಾರೆ, ಇದು ಸತ್ಯವಿದೆ ! – ಸಂಪಾದಕರು) ಕೆಲವು ಹೊರಗಿನ ಶಕ್ತಿಗಳು `ಅಖಂಡ ಭಾರತವನ್ನು ಹೆದರಿತ್ತು’ ಎಂದೂ ಹೇಳಿದೆ.

3. ಶಯಾನ ಅಲಿಯವರು ಪ್ರಧಾನಮಂತ್ರಿ ಮೋದಿಯವರ ಪ್ರಶಂಸಕರಾಗಿದ್ದಾರೆ. ಅವರಿಗೆ ಹನುಮಾನ ಚಾಲೀಸ ಬಾಯಿಪಾಠವಿದೆ. ಅವರು ಈ ಹಿಂದೆಯೂ ಪಾಕಿಸ್ತಾನದ ಆಸ್ತಿತ್ವವನ್ನು ನಿರಾಕರಿಸಿದ್ದರು.

4. 1947 ರ ನಂತರ ಪಾಕಿಸ್ತಾನದ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ನಕಲಾಗಿತ್ತು. ವಿಭಜನೆ ಮಾಡಿ ಸ್ವತಂತ್ರ ಪಾಕಿಸ್ತಾನವನ್ನು ನಿರ್ಮಿಸಿದವರಲ್ಲಿ ತಮ್ಮದೇ, ವಿಭಿನ್ನವಾದ ಸಂಸ್ಕೃತಿಯನ್ನು ನಿರ್ಮಿಸುವ ಕ್ಷಮತೆಯಿರಲಿಲ್ಲ’ ಎಂದು ಅವರು ಈ ಹಿಂದೆ ಹೇಳಿದ್ದರು.

5. ಈ ಹಿಂದೆಯೂ ಪಾಕಿಸ್ತಾನದಲ್ಲಿನ ಪತ್ರಕರ್ತೆ ಆರಜೂ ಕಾಝಮಿಯವರು `ವಿಭಜನೆಯ ಸಮಯದಲ್ಲಿ ಅಜ್ಜಿ-ಅಜ್ಜಂದಿರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗುವ ನಿರ್ಣಯವನ್ನು ತೆಗೆದುಕೊಂಡು ನಮ್ಮ ಭವಿಷ್ಯವನ್ನು ಹಾಳುಮಾಡಿದ್ದಾರೆ’, ಎಂಬ ಅಶಯವಿರುವ ಟ್ವೀಟ್ ಮಾಡಿದ್ದರು.

ಸಂಪಾದಕರ ನಿಲುವು

ಭಾರತದಲ್ಲಿನ ಪಾಕಿಸ್ತಾನಪ್ರೇಮಿಗಳಿಗೆ ಈ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?