ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪೋಸ್ಟರ್ ಮೇಲೆ ಮಸಿ ಬಳಿದು `ಚೋರ 420’ ಎಂದು ಬರೆದರು !

ಬಿಹಾರದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ

ಪಾಟಲಿಪುತ್ರ (ಬಿಹಾರ) – ಇಲ್ಲಿ ಕಳೆದ 5 ದಿನಗಳಿಂದ ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹನುಮಂತ ಕಥಾವಾಚನ ನಡೆದಿದೆ. ಆ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಪೋಸ್ಟರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಕೆಲವು ಪೋಸ್ಟರಗಳ ಮೇಲೆ ಕಪ್ಪು ಮಸಿಯನ್ನು ಬಳಿದು `ಚೋರ 420’ ಎಂದು ಬರೆದಿದ್ದು ಕಂಡು ಬಂದಿದೆ. ಈ ಹಿಂದೆ ಕೆಲವು ಸ್ಥಳಗಳಳ್ಲಿ ಅವರ ಪೋಸ್ಟರಗಳನ್ನು ಕಿತ್ತು ಎಸೆಯಲಾಗಿತ್ತು. ಈ ಘಟನೆಯಿಂದ ಅವರ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸುತ್ತುದ್ದಾರೆ.