ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪುರಾತತ್ವ ಇಲಾಖೆಯ ಮಾಹಿತಿ
ವಾರಾಣಸಿ (ಉತ್ತರ ಪ್ರದೇಶ) – ಜ್ಞಾನವಾಪಿ ಪರಿಸರದಲ್ಲಿ ಪತ್ತೆಯಾದ ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
ज्ञानवापी: ‘शिव लिंग’ का वैज्ञानिक सर्वेक्षण उसे नुकसान पहुंचाए बिना किया जा सकता है’ : एएसआई ने इलाहाबाद हाईकोर्ट को बताया, वाराणसी कोर्ट सर्वेक्षण की निगरानी करेगा #AllahabadHighCourt #Gyanvapi https://t.co/CuWrGcmLow
— Live Law Hindi (@LivelawH) May 14, 2023
ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಶಿವಲಿಂಗದ ವೈಜ್ಞಾನಿಕ ತನಿಖೆಯ ಸಂಭವನೀಯ ಪರಿಣಾಮಗಳೊಂದಿಗೆ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳಲು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಅಲ್ಲಿ ವಿವರಿಸಲಾಗಿದೆ. ನ್ಯಾಯಾಲಯದಲ್ಲಿ ಪುರಾತತ್ವ ಇಲಾಖೆಯ ಪರವಾಗಿ ವಾದ ಮಂಡಿಸಿದ ಭಾರತದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಶಿ ಪ್ರಕಾಶ ಸಿಂಗ್ ಮತ್ತು ಮನೋಜ ಕುಮಾರ ಸಿಂಗ್ ಅವರು, ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಪರೀಕ್ಷಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನ್ಯಾಯಾಲಯವೂ ಅದನ್ನು ಅನುಮೋದಿಸಬೇಕು ಎಂದು ಹೇಳಿದರು. ಇದರಿಂದ ಶಿವಲಿಂಗದ ನಿಜವಾದ ವಯಸ್ಸು ತಿಳಿಯಬಹುದು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲಾಗುವುದು.