ಕ್ರೈಸ್ತರ ಮೌಢ್ಯತನ !

ಕೆನ್ಯಾದಿಂದ ಕೆಲವು ದಿನಗಳ ಹಿಂದೆ ಬಂದ ಒಂದು ವಾರ್ತೆಗನುಸಾರ, ಅಲ್ಲಿನ ಸ್ಥಳೀಯರು ಪಾದ್ರಿ ಹೇಳಿದರೆಂದು ಯೇಸುವನ್ನು ಭೇಟಿಯಾಗಲು ಅನೇಕ ದಿನಗಳ ವರೆಗೆ ಉಪವಾಸ ಮಾಡಿ ತಮ್ಮನ್ನು ಭೂಮಿಯಲ್ಲಿ ಹೂಳಿಕೊಂಡರು. ಇದರಲ್ಲಿ ೪೭ ಜನರ ಪ್ರಾಣ ಹೋಗಿದೆ. ನೈರೋಬಿಯಲ್ಲಿನ ಒಂದು ಅರಣ್ಯದಲ್ಲಿ ಇವೆಲ್ಲ ಘಟನೆಗಳಾಗಿವೆ. ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆಯೆಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ೪೭ ಜನರು ಸಾವನ್ನಪ್ಪಿದರೂ ಸಂಬಂಧಪಟ್ಟ ಪಾದ್ರಿ ಪಾಲ್ ಇವನು ಮಾತನ್ನು ಹಾರಿಸುತ್ತಾ ‘ನಾನು ಯಾರಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೋತ್ಸಾಹಿಸಲಿಲ್ಲ. ನಾನು ಚರ್ಚ್ ಮುಚ್ಚಿದ್ದೇನೆ’, ಎಂದು ಹೇಳಿದನು. ನಿಜವಾಗಿ ನೋಡಿದರೆ ಇಷ್ಟು ದೊಡ್ಡ ಘಟನೆ ನಡೆದಾಗ ದೊಡ್ಡ ಗಲಾಟೆ ಆಗಬೇಕಿತ್ತು; ಆದರೆ ಹಾಗೇನೂ ಆಗಿಲ್ಲ. ಎಲ್ಲವೂ ಶಾಂತವಾಗಿದೆ. ಮಹಾರಾಷ್ಟ್ರದ ಖಾರ್‌ಘರ್‌ನಲ್ಲಿ ಪ್ರಸಿದ್ಧ ನಿರೂಪಕರಾದ ‘ಪದ್ಮಶ್ರೀ ಪೂ. ಅಪ್ಪಾಸಾಹೇಬ ಧರ್ಮಾಧಿಕಾರಿ ಇವರಿಗೆ ‘ಮಹಾರಾಷ್ಟ್ರ ಭೂಷಣ’ ಪುರಸ್ಕಾರ ನೀಡುವ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಕೆಲವು ಶ್ರೀ ಸೇವಕರು ಮೃತಪಟ್ಟಾಗ ‘ಪೂ. ಅಪ್ಪಾಸಾಹೇಬ ಇವರ ವಿರುದ್ಧ ಮನುಷ್ಯವಧೆಯ ಅಪರಾಧವನ್ನು ದಾಖಲಿಸಬೇಕು’, ಎಂದು ಪ್ರಗತಿಪರರು ಹೇಳುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಘಟಿಸಿದ ಇಷ್ಟು ದೊಡ್ಡ ಘಟನೆಯಲ್ಲಿ ಉದ್ದೇಶಪೂರ್ವಕ ಕ್ರೈಸ್ತರ ಮರಣಕ್ಕೆ ಕಾರಣರಾದವರಿಗೆ ಶಿಕ್ಷೆ ಆಗಬೇಕೆಂಬ ಬೇಡಿಕೆ ಏಕೆ ಬರಲಿಲ್ಲ ? ಯಾವುದೇ ಆಂಗ್ಲ ದೈನಿಕದಲ್ಲಿ ಈ ವಿಷಯದಲ್ಲಿ ಕ್ರೈಸ್ತ ಪಂಥದ ಮೂಢನಂಬಿಕೆಗೆ ಬೆಳಕು ಚೆಲ್ಲುವ, ಪಾದ್ರಿಗಳ ಅನೈತಿಕ ಹಾಗೂ ಬುದ್ಧಿಹೀನ ವರ್ತನೆಯ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು ಪ್ರಸಾರವಾಗಲಿಲ್ಲವೇಕೆ ?

ಪ್ರಸಿದ್ಧಿಮಾಧ್ಯಮಗಳು ಸುಮ್ಮನಿರಲು ಕಾರಣವೇನು ?

ಈ ಹಿಂದೆಯೂ ತಾಂಜಾನಿಯಾದಲ್ಲಿನ ಒಬ್ಬ ಪಾದ್ರಿ ಕೊರೊನಾ ಮಹಾಮಾರಿಯನ್ನು ಗುಣಪಡಿಸಲು ಯೇಸುವಿನ ತೀರ್ಥವೆಂದು ಜನರಿಗೆ ಕೀಟನಾಶಕವನ್ನು ಕುಡಿಸಿದ್ದನು. ಅದರಿಂದ ಅನೇಕ ಜನರು ಮರಣ ಹೊಂದಿದ್ದರು. ಈ ಘಟನೆಯ ವಾರ್ತೆ ಮಾತ್ರ ಬಂದಿತ್ತು; ಆದರೆ ಆ ವಿಷಯದಲ್ಲಿ ಚರ್ಚೆ, ಗಲಾಟೆ ಏನೂ ಆಗಿಲ್ಲ. ಅತ್ಯಂತ ಶಾಂತವಾಗಿ ಈ ಘಟನೆಯನ್ನು ಮರೆಯಲಾಯಿತು. ಕನ್ಯಾಕುಮಾರಿಯಲ್ಲಿ ಸ್ವತಃ ಯೇಸುವಿನ ಅವತಾರ’ವೆಂದು ಹೇಳುತ್ತಾ ಅಲ್ಲಿನ ಆರ್ಚ್‌ಬಿಶಪ್ ೮೦ ಕ್ಕಿಂತಲೂ ಹೆಚ್ಚು ಮಹಿಳೆಯರೊಂದಿಗೆ ಸಂಬಂಧವನ್ನಿಟ್ಟಿದ್ದನು ಹಾಗೂ ಅದರ ೨೦೦ ವಿಡಿಯೋಗಳನ್ನೂ ಮಾಡಿದ್ದನು. ಈ ಘಟನೆಯ ಬಗ್ಗೆಯೂ ಚರ್ಚೆಯಿಲ್ಲ. ಕ್ರೈಸ್ತರ ಇಂತಹ ಮೂಢ ನಂಬಿಕೆಗೆ ಏನು ಹೇಳಬೇಕು ? ಇದರಿಂದ ಅನೇಕ ಜನರ ಜೀವ ಹೋಗುತ್ತಿದೆ, ಮಹಿಳೆಯರ ಶೀಲ ಭ್ರಷ್ಟವಾಗುತ್ತಿದೆ. ಜಗತ್ತಿನಲ್ಲಿ ೧೫೭ ಕ್ರೈಸ್ತ ದೇಶಗಳಿವೆ. ಈ ದೇಶಗಳಲ್ಲಿನ ಎಷ್ಟು ಸುಧಾರಣವಾದಿಗಳು ಅಥವಾ ಬುದ್ಧಿವಾದಿಗಳು ಈ ಘಟನೆ ಯನ್ನು ಖಂಡಿಸಿದರು ? ಎಷ್ಟು ಜನರು ಪಾದ್ರಿಗಳ ಬಂಧನದ ಬೇಡಿಕೆ ಮಾಡಿದರು ? ಭಾರತದಲ್ಲಿ ಹಿಂದೂ ಧರ್ಮದ ಸಂತರಿಂದ ಅಥವಾ ಯಾವುದೇ ಹಿಂದೂ ಪರಂಪರೆಯ ಪಾಲನೆಯಿಂದ ಯಾರಿಗಾದರೂ ಸ್ವಲ್ಪ ತರಚಿದರೂ ಇಲ್ಲಿನ ಪ್ರಗತಿಪರರು ಸಂತರ ಮತ್ತು ಹಿಂದೂ ಪರಂಪರೆಯ ಮೇಲೆ ಬೇಕಾದಷ್ಟು ಟೀಕೆ ಮಾಡುತ್ತಾರೆ. ‘ಈ ಬುರುಸು ಹಿಡಿದಿರುವ ರೂಢಿಯನ್ನು ಬದಲಾಯಿಸದಿದ್ದರೆ, ಸಮಾಜಕ್ಕೆ ಎಷ್ಟು ದೊಡ್ಡ ದುಷ್ಪರಿಣಾಮವಾಗಬಹುದು ?’, ಎಂದು ಗಲಾಟೆ ಮಾಡುತ್ತಾರೆ. ಸರಕಾರ-ಆಡಳಿತದವರು ಕ್ರಮತೆಗೆದುಕೊಳ್ಳಬೇಕೆಂದು ವಿನಂತಿಸಲಾಗುತ್ತದೆ. (ಮೂಢನಂಬಿಕೆಯ ನಿರ್ಮೂಲನೆಗಾಗಿ ಕಾರ್ಯ ಮಾಡುವ ಕೆಲವು ಸಮಿತಿಗಳು ಹಿಂದೂಗಳಿಗೆ ಸವಾಲು ಹಾಕುತ್ತವೆ. ಅವರ ಹಾಸ್ಯಾಸ್ಪದ ಸವಾಲನ್ನು ಇಲ್ಲಿನ ಟಿ.ಆರ್.ಪಿ.ಗಾಗಿ ಚಡಪಡಿಸುವ ಮಾಧ್ಯಮಗಳು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡುತ್ತವೆ. ಅದರಿಂದ ‘ಇದೊಂದು ಮಹತ್ವದ ವಿಷಯವಾಗಿರಬಹುದು’, ಎಂದು ವೀಕ್ಷಕರಿಗೆ ಅನಿಸುತ್ತದೆ.

ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವಿಡಿಯೋ ಪ್ರಸಾರವಾದವು. ಮರಾಠಿ ಹೆಸರನ್ನಿಟ್ಟುಕೊಂಡು ಮುಂಬಯಿಯ ಉಪನಗರಗಳಲ್ಲಿ ವಾಸಿಸುವ ಹಾಗೂ ನಡೆಯಲು ಸಾಧ್ಯವಾಗದ ಯಾವಾಗಲು ಗಾಲಿಕುರ್ಚಿಯ ಸಹಾಯದಿಂದ ಚಲಿಸುವ ಮಹಿಳೆಯೊಬ್ಬಳು ಒಂದು ಪ್ರಾರ್ಥನಾಸಭೆಗೆ ಬರುತ್ತಾಳೆ. ಅವಳಿಗಾಗಿ ಪಾದ್ರಿ ಪ್ರಾರ್ಥನೆ ಮಾಡುತ್ತಾರೆ ಅನಂತರ ಅವಳು ನಿಧಾನವಾಗಿ ನಡೆಯುವುದು ಮಾತ್ರವಲ್ಲ, ಜಿಗಿಯುವ, ಕುಣಿಯುವ, ಓಡುವ, ಚಿತ್ರಗಳನ್ನು ತೋರಿಸಲಾಯಿತು. ಯೇಸುವಿನ ಪ್ರಾರ್ಥನೆಯ ಹೆಸರಿನಲ್ಲಿ ಈ ತಥಾಕಥಿತ ಚಮತ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ಷೇಪವೆತ್ತಿದರು. ಆದರೆ ಪ್ರಸಾರಮಾಧ್ಯಮಗಳು ಈ ವಿಷಯದ ಆಳಕ್ಕೆ ಏಕೆ ಹೋಗುವುದಿಲ್ಲ ? ‘ಆ ಮಹಿಳೆ ನಿಜ ವಾಗಿಯೂ ಅಂಗವಿಕಲಳಾಗಿದ್ದಳೇ ?’, ‘ಅವಳಿಗೆ ಶಾರೀರಿಕ ತೊಂದರೆಯಿತ್ತೇ ?’, ಎಂದು ಪ್ರಶ್ನಿಸಲಿಲ್ಲವೇಕೆ ? ಅದಕ್ಕೆ ಸಂಬಂಧಿಸಿದ ಪಾದ್ರಿಯನ್ನು ಹುಡುಕಿ ‘ನೀವು ಈ ಚಮತ್ಕಾರ ಹೇಗೆ ಮಾಡಿದಿರಿ ?’, ‘ಇದರ ಹಿಂದಿನ ಶಾಸ್ತ್ರವೇನು ?’, ಎಂದು ಪ್ರಶ್ನಿಸಿ ಸತ್ಯವನ್ನು ಜನರ ಮುಂದೇಕೆ ತರಲಿಲ್ಲ ?’, ಹೀಗೆ ಅನೇಕ ಪ್ರಶ್ನೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಬರುವುದು ಸಹಜ.

ಇವೆಲ್ಲದರ ಫಲಿತಾಂಶ ಒಂದೇ ಅನಿಸುತ್ತದೆ, ಅದೇನೆಂದರೆ, ಕ್ರೈಸ್ತರ ಇಂತಹ ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದರೂ ಅದರ ಬಗ್ಗೆ ಏನೂ ಹೇಳಬಾರದು. ಕ್ರೈಸ್ತರಲ್ಲಿ ಇಂತಹ ಮೂಢನಂಬಿಕೆಯಿದ್ದರೆ ನಡೆಯುತ್ತದೆ, ಆದರೆ ಹಿಂದೂಗಳಲ್ಲಿ ಅದು ಇರಬಾರದು. ಮಹಾರಾಷ್ಟ್ರದ ವಿದರ್ಭದಲ್ಲಿನ ಓರ್ವ ಮಹಾರಾಜರು ಯೋಗಕ್ರಿಯೆಯ ಸಾಮರ್ಥ್ಯದಲ್ಲಿ ನೀರಿನ ಮೇಲೆ ತೇಲುವ ಒಂದು ಪ್ರಕ್ರಿಯೆಯನ್ನು ಮಾಡಿ ತೋರಿಸಿದಾಗ ‘ಅಂಧಶ್ರದ್ಧಾ ನಿರ್ಮೂಲನ ಸಮಿತಿ’ ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿತು. ಅಷ್ಟು ಮಾತ್ರವಲ್ಲ, ಬಹಿರಂಗವಾಗಿ ಸವಾಲು ಹಾಕಿ ಮರುದಿನವೇ ಕಾರ್ಯಕರ್ತನನ್ನು ನೀರಿಗೆ ಇಳಿಸಲಾಯಿತು. ಅವನು ನೀರಿನಲ್ಲಿ ಮುಳುಗಿದಾಗ ಆ ಸಮಿತಿಯ’ ಮುಖಭಂಗವಾಯಿತು; ಆದರೆ ಅದನ್ನು ಒಪ್ಪಿಕೊಂಡರೆ ಅದು ಅ.ನಿ.ಸಮಿತಿ ಆಗಲು ಹೇಗೆ ಸಾಧ್ಯ ?

ಅ.ನಿ.ಸಮಿತಿ ಮೂಢನಂಬಿಕೆ ನಿರ್ಮೂಲನೆಯ ಕಾರ್ಯ ಮಾಡುತ್ತದೆ, ಎಂದು ತಿಳಿದುಕೊಳ್ಳುವುದೇ ದೊಡ್ಡ ಒಂದು ಮೂಢನಂಬಿಕೆಯಾಗುತ್ತದೆ. ‘ಯೇಸುವಿನ ಪ್ರಾರ್ಥನೆಯಿಂದ ಅರ್ಬುದರೋಗ, ಏಡ್ಸ್‌ನಂತಹ ಗಂಭೀರ ಕಾಯಿಲೆಗಳು ಗುಣವಾಗುತ್ತವೆ’, ಎಂದು ಹೇಳಿಕೊಳ್ಳುವ ಕ್ರೈಸ್ತ ಸಂಸ್ಥೆಗಳಿಗೇಕೆ ಸವಾಲು ಹಾಕುವುದಿಲ್ಲ ? ತೀವ್ರ ಅನಾರೋಗ್ಯ, ಅಡಚಣೆಗಳನ್ನು ದೂರಗೊಳಿಸುವುದಾಗಿ ಡಂಗುರ ಸಾರುವವರ ಬಣ್ಣವನ್ನು ಏಕೆ ಬಯಲು ಮಾಡುವುದಿಲ್ಲ ?

ಪಾದ್ರಿಗಳ ಢೋಂಗಿತನವನ್ನು ಬಯಲು ಮಾಡಬೇಕು !

ಕ್ರೈಸ್ತರಲ್ಲಿನ ಇಂತಹ ವಿವಿಧ ಮೂಢನಂಬಿಕೆಗಳು ಪದೇ ಪದೇ ಬೆಳಕಿಗೆ ಬಂದಿವೆ. ಗೋವಾದಲ್ಲಿ ಮತಾಂತರಿಸಲು ಪ್ರಯತ್ನಿಸುವಾಗ ನಿರಾಕರಿಸಿದಂತಹ ಮಹಿಳೆಯರನ್ನು ‘ಮಾಟಗಾತಿ’ ಎಂದು ಹೇಳುತ್ತಾ ಜೀವಂತ ಸುಟ್ಟು ಹಾಕಲಾಗಿತ್ತು, ಅದಕ್ಕೂ ಮೊದಲು ಅವರ ಸ್ತನವನ್ನು ಕತ್ತರಿಸುವುದು, ಕೂದಲು ತೆಗೆಯುವುದು ಮುಂತಾದ ಕುಕೃತ್ಯ ಮಾಡಿದ್ದರು. ಈ ವಿಷಯವೂ ಬಹಳಷ್ಟು ಕಡಿಮೆ ಜನರಿಗೆ ತಿಳಿದಿದೆ. ಕ್ರೈಸ್ತ ಪಂಥದಲ್ಲಿನ ಅನೇಕ ಮೂಢನಂಬಿಕೆಗಳು, ಕ್ರೈಸ್ತ ಪಂಥೀಯರ ಅಧ್ಯಾತ್ಮ ವಿಷಯದ ಸಂಶಯಗಳ ನಿವಾರಣೆ ಮಾಡಲು ಸಾಧ್ಯವಾಗದಿರುವುದು, ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿರುವುದು, ಇತ್ಯಾದಿ ಕಾರಣದಿಂದ ಕ್ರೈಸ್ತರಿಗೆ ತಮ್ಮ ಪಂಥದ ಮೇಲಿನ ವಿಶ್ವಾಸ ಹೊರಟುಹೋಗಿದೆ. ‘ಅಮೇರಿಕಾದಲ್ಲಿ ಕಳೆದ ೫೦ ವರ್ಷಗಳಲ್ಲಿ ಕ್ರೈಸ್ತರ ಸಂಖ್ಯೆ ಶೇ. ೨೬ ರಷ್ಟು ಕುಸಿದಿದೆ’, ಎಂದು ‘ಲೈಫ್ ವೇ ರಿಸರ್ಚ್’ನ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಅಮೇರಿಕಾದ ೪ ಸಾವಿರದ ೫೦೦ ಚರ್ಚ್‌ಗಳನ್ನು ಮುಚ್ಚಲಾಗಿದೆ. ಭಾರತದಲ್ಲಿ ಮಾತ್ರ ಕ್ರೈಸ್ತ ಪಂಥ ಪ್ರಚಾರಕರು ಹಿಂದೂ ಧರ್ಮವನ್ನು ಹೀಯಾಳಿಸುತ್ತಾ ಕ್ರೈಸ್ತ ಪಂಥದ ಪ್ರಸಾರ ಮಾಡಿ ರಭಸದಿಂದ ಮತಾಂತರಿಸುತ್ತಿದ್ದಾರೆ. ಚರ್ಚ್‌ಗಳನ್ನು ನಿರ್ಮಿಸುತ್ತಿದ್ದಾರೆ. ಪಾದ್ರಿಗಳ ಢೋಂಗಿತನವನ್ನು ಬಯಲು ಮಾಡಲು ಈಗ ಜಾಗೃತ ಹಿಂದೂಗಳೇ ಮುಂದಾಳತ್ವ ವಹಿಸಬೇಕಾಗಿದೆ.