‘ಸಂಗೀತಕ್ಕೆ ಪ್ರಾಣಿಗಳು ಸ್ಪಂದಿಸುತ್ತವೆಯೇ ? ಎಂಬ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆ ಮತ್ತು ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ಆಶ್ರಮದ ದೇಶಿ ಗೋವು ಮತ್ತು ಎತ್ತು ನೀಡಿದ ಸ್ಪಂದನ !

ಕಿನ್ನಿಗೋಳಿಯ ಪ.ಪೂ. ದೇವಬಾಬಾ
ಶ್ರೀ. ಪ್ರದೀಪ ಚಿಟಣೀಸ್

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ೧೭.೧೨.೨೦೧೮ ರಂದು ಕರ್ನಾಟಕದ ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮದಲ್ಲಿನ ‘ಭಾರತೀಯ (ದೇಶಿ) ಹಸು ಮತ್ತು ಎತ್ತುಗಳ ಮೇಲೆ ಶಾಸ್ತ್ರೀಯ ಗಾಯನದಿಂದ ಯಾವ ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನ ಮಾಡಲಾಯಿತು. ಆ ಸಮಯದಲ್ಲಿ ಮಹಾರಾಷ್ಟ್ರದ ಠಾಣೆಯಲ್ಲಿನ ಶಾಸ್ತ್ರೀಯ ಗಾಯಕರಾದ ಶ್ರೀ. ಪ್ರದೀಪ ಚಿಟಣಿಸ್ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೫೯ ವರ್ಷ) ಇವರು ‘ಶಂಕರಾ ರಾಗದಲ್ಲಿ ಶಿವನ ಮೇಲೆ ಆಧರಿಸಿದ ಧೃಪದವನ್ನು ಅತ್ಯಂತ ಭಾವಪೂರ್ಣವಾಗಿ ಹಾಡಿದರು. ಶ್ರೀ. ಚಿಟಣಿಸ್ ಮತ್ತು ಅಲ್ಲಿ ಉಪಸ್ಥಿತರಿದ್ದ ಸಾಧಕರಿಗೆ ಅಲ್ಲಿನ ಹಸುಗಳು ಮತ್ತು ‘ಮುರಳಿ ಎಂಬ ಹೆಸರಿನ ಎತ್ತಿನ ಬಗ್ಗೆ ಗಮನಕ್ಕೆ ಬಂದ ಅಂಶಗಳನ್ನು ಮುಂದೆ ಕೊಡಲಾಗಿದೆ.

ಪ.ಪೂ. ದೇವಬಾಬಾರ ಆಶ್ರಮದ ೨ ಕೊಟ್ಟಿಗೆಗಳಲ್ಲಿದ್ದ ಹಸುಗಳ ಮತ್ತು ಎತ್ತಿನ ಬಳಿ ಹಾಡುತ್ತಿರುವ ಶ್ರೀ. ಚಿಟಣಿಸ್

೧. ಶ್ರೀ. ಪ್ರದೀಪ ಚಿಟಣೀಸ್ (ಆಧ್ಯಾತ್ಮಿಕ ಮಟ್ಟ ಶೇ. ೬೧) ಇವರು ‘ಶಂಕರಾ ರಾಗದಲ್ಲಿ ಶಿವನ ಕುರಿತಾದ ಧೃಪದದ ಗಾಯನ ಪ್ರಾರಂಭಿಸಿದಾಗ ಅರಿವಾದ ಅಂಶಗಳು

೧ ಅ. ಎಲ್ಲ ಹಸುಗಳು ತಲೆಯಾಡಿಸುವುದು ಮತ್ತು ‘ಮುರಳಿ ಎಂಬ ಹೆಸರಿನ ಎತ್ತು ಜೋರಾಗಿ ತಲೆಯಾಡಿಸಿ ಪ್ರತಿಕ್ರಿಯೆಯನ್ನು ನೀಡಿದ್ದರಿಂದ ‘ಅದು ಗಾಯನದಲ್ಲಿ ಜುಗಲ್ ಬಂದಿ ಮಾಡುತ್ತಿದೆ, ಎಂದು ಅನಿಸುವುದು : ಈ ಪ್ರಯೋಗದ ಸಮಯದಲ್ಲಿ ನನಗೆ ‘ಶಂಕರಾ ರಾಗದಲ್ಲಿ ಧೃಪದವನ್ನು (ಶಾಸ್ತ್ರೀಯ ಗಾಯನದಲ್ಲಿನ ಒಂದು ಪ್ರಕಾರ) ಹಾಡಬೇಕು, ಎಂದೆನಿಸಿತು. ಧೃಪದದಲ್ಲಿ ಮೊದಲಿಗೆ ನೋಮ್-ತೋಮ್ (‘ನೋಮ್-ತೋಮ್ ಇಂತಹ ಶಬ್ದಗಳ ಮೂಲಕ ರಾಗದ ಸ್ವರವಿಸ್ತಾರ ಮಾಡುವುದು) ಆಲಾಪ ಪ್ರಾರಂಭಿಸಿದ ಕೂಡಲೇ ಎಲ್ಲ ಹಸುಗಳು ಉತ್ತಮವಾಗಿ ಸ್ಪಂದಿಸತೊಡಗಿದವು. ಎಲ್ಲ ಹಸುಗಳು ನನ್ನ ಕಡೆಗೆ ನೋಡಿ ತಲೆಯಾಡಿಸುತ್ತಿದ್ದವು. ೫-೬ ಹಸುಗಳು ಗೋಮೂತ್ರವನ್ನು ಮತ್ತು ೧-೨ ಹಸುಗಳು ಗೋಮಯವನ್ನು (ಸಗಣಿಯನ್ನು) ಒಂದೇ ಸಮಯಕ್ಕೆ ಹಾಕಿದವು. ‘ಮುರಳಿ ಎಂಬ ಹೆಸರಿನ ಎತ್ತು ಗಾಯನವನ್ನು ಕೇಳುವಲ್ಲಿ ಬಹಳ ಮಗ್ನವಾಗಿತ್ತು. ಅದು ಜೋರುಜೋರಾಗಿ ತಲೆಯಾಡಿಸುತ್ತಿತ್ತು. ‘ಅದು ನನ್ನ ಗಾಯನದೊಂದಿಗೆ ಜುಗಲ್ ಬಂದಿ ಮಾಡುತ್ತಿದೆ ಎಂದು ನನಗೆ ಅನಿಸಿತು. – ಶ್ರೀ. ಪ್ರದೀಪ ಚಿಟಣಿಸ್ (ಆಧ್ಯಾತ್ಮಿಕ ಮಟ್ಟ ಶೇ. ೬೧), ಠಾಣೆ, ಮಹಾರಾಷ್ಟ್ರ.

೧ ಆ. ಶ್ರೀ. ಪ್ರದೀಪ ಚಿಟಣಿಸ್ ಇವರ ಗಾಯನವನ್ನು ಕೇಳುವಾಗ ಕೊಟ್ಟಿಗೆಯಲ್ಲಿನ ಎಲ್ಲ ಹಸುಗಳು ಎದ್ದು ನಿಲ್ಲುವುದು, ‘ಗೌರಿ ಎಂಬ ಹೆಸರಿನ ಹಸುವು ಅವರ ದಿಶೆಯಲ್ಲಿ ಹೋಗಲು ಪ್ರಯತ್ನಿಸುವುದು, ಅದರ ಕಣ್ಣುಗಳಲ್ಲಿನ ನೀರು ನೋಡಿ ‘ಗಾಯನವನ್ನು ಕೇಳಿ ಅದರ ಭಾವಜಾಗೃತವಾಗಿದೆ, ಎಂದೆನಿಸುವುದು : ‘ಹಾಡು (ಗಾಯನ) ಪ್ರಾರಂಭ ಇರುವಾಗ ಚಿಟಣಿಸ್‌ಕಾಕಾರವರ ಹಿಂದಿನ ಬದಿಗಿರುವ ಕೊಟ್ಟಿಗೆಯಲ್ಲಿನ ಎಲ್ಲ ಹಸುಗಳು ಎದ್ದುನಿಂತವು ಮತ್ತು ಅವರ ದಿಶೆಯಲ್ಲಿ ನೋಡತೊಡಗಿದವು. ರಾಗದ ಸ್ವರವಿಸ್ತಾರವನ್ನು ಕೇಳುವಾಗ ಇನ್ನೊಂದು ಬದಿಗಿರುವ ‘ಗೌರಿ ಎಂಬ ಹೆಸರಿನ ಹಸು ಕಾಕಾರವರ ಕಡೆಗೆ ತಿರುಗಿತು ಮತ್ತು ಕೊಟ್ಟಿಗೆಯಿಂದ ಹೊರಗೆ ಕಾಕಾರವರ ಬಳಿ ಹೋಗಲು ಪ್ರಯತ್ನಿಸುತ್ತಿತ್ತು. ಅ ಹಸುವನ್ನು ಕಟ್ಟಿದ್ದರಿಂದ ಅದಕ್ಕೆ ಮುಂದೆ ಹೋಗಲು ಆಗಲಿಲ್ಲ. ಹಾಡು ಕೇಳುವಾಗ ‘ಗೌರಿಯ ಕಣ್ಣುಗಳಿಂದ ನೀರು ಬರುತ್ತಿತ್ತು. ಅದರ ಆ ಭಾವಾವಸ್ಥೆಯನ್ನು ನೋಡಿ ನನ್ನ ಭಾವಜಾಗೃತಿಯಾಯಿತು. ಹಾಡು ಕೇಳುವಾಗ ಕೆಲವು ಕ್ಷಣ ನನಗೆ ‘ನೃತ್ಯವನ್ನು ಮಾಡಬೇಕು, ಎಂದು ಅನಿಸಿತು. – ಹೋಮಿಯೋಪಥಿ ವೈದ್ಯೆ (ಕು.) ಆರತಿ ತಿವಾರಿ. (‘ಈ ಹಸುವಿನ ಹೆಸರು ‘ಗೌರಿ ಎಂದಿದೆ. ಆದ್ದರಿಂದ ‘ಶಂಕರಾ ರಾಗದಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಕಡೆಗೆ ಅದು ಹೆಚ್ಚು ಆಕರ್ಷಿತವಾಯಿತು, ಎಂದು ನನಗೆ ಅನಿಸಿತು. – ತೇಜಲ)

೧ ಇ. ಶ್ರೀ. ಚಿಟಣಿಸ್ ಇವರು ‘ಶಂಕರಾ ರಾಗದ ಆರಂಭದಲ್ಲಿ ‘ಓಂ ಕಾರ ಹೇಳಿದ ಕೂಡಲೇ ಕಣ್ಣುಗಳನ್ನು ಮುಚ್ಚಿ ಕುಳಿತಿದ್ದ ಹಸುವು ಶ್ರೀ. ಚಿಟಣಿಸ್ ಇವರ ದಿಶೆಯಲ್ಲಿ ತಿರುಗಿ ನೋಡುವುದು : ‘ಒಂದು ಹಸುವು ಕುಳಿತಿರುವ ಸ್ಥಿತಿಯಲ್ಲಿ ತಲೆ ಕೆಳಗೆ ಮಾಡಿ ಮತ್ತು ಕಣ್ಣುಗಳನ್ನು ಮುಚ್ಚಿ ಕಿವಿಗಳನ್ನು ಅಲುಗಾಡಿಸುತ್ತಿತ್ತು. ‘ಶಂಕರಾ ರಾಗದ ಆರಂಭದಲ್ಲಿ ಚಿಟಣಿಸ್‌ಕಾಕಾರವರು ಕೇವಲ ‘ಓಂಕಾರವನ್ನು ಹೇಳಿದಕೂಡಲೇ ಆ ಹಸುವು ಆಕಸ್ಮಿಕವಾಗಿ ಕಾಕಾರವರ ಕಡೆಗೆ ತಿರುಗಿ ನೋಡಿತು. ಇದು ಬಹಳ ವೈಶಿಷ್ಟ್ಯಪೂರ್ಣವೆನಿಸಿತು. ‘ಆ ಹಸುವಿಗೆ ‘ಶಂಕರಾ ರಾಗದಲ್ಲಿನ ಶಿವನ ಸ್ಪಂದನಗಳು ಮೊದಲೇ ಅರಿವಾದವು, ಎಂದು ನನಗೆ ಅನಿಸಿತು. ಕೆಲವು ಹಸುಗಳು ಧೃಪದವನ್ನು ಹೇಳಿದ ನಂತರ ಹೆಚ್ಚು ಸ್ಪಂದನವನ್ನು ನೀಡಿದವು. ನನಗೆ ‘ಆ ಹಸುಗಳು ಶಿವತತ್ತ್ವಕ್ಕೆ ಸಂಬಂಧಿಸಿವೆ, ಎಂದು ಅನಿಸಿತು.

೧ ಈ. ‘ಮುರಳಿ ಎಂಬ ಹೆಸರಿನ ಎತ್ತಿನ ಪ್ರತಿಕ್ರಿಯೆಯು ರಾಗದ ಪ್ರಕೃತಿಯಂತೆಯೇ ಇದೆ, ಎಂದು ಅರಿವಾಗುವುದು : ‘ಮುರಳಿ ಎಂಬ ಹೆಸರಿನ ಎತ್ತು ಕೂಗುತ್ತಾ ಜೋರುಜೋರಾಗಿ ಕತ್ತು ಅಲುಗಾಡಿಸಿ ಪ್ರತಿಕ್ರಿಯೆಯನ್ನು ನೀಡುತ್ತಿತ್ತು. ‘ಶಂಕರಾ ಇದು ಶಿವತತ್ತ್ವಕ್ಕೆ ಸಂಬಂಧಿಸಿದ್ದು,  ವೀರರಸಪ್ರಧಾನ ರಾಗವಾಗಿದೆ. ಆದ್ದರಿಂದ ನನಗೆ ‘ಮುರಳಿಯ ಪ್ರತಿಕ್ರಿಯೆಯು ಆ ರಾಗದ ಪ್ರಕೃತಿಯಂತೆಯೇ ಇದೆ, ಎಂದು ಅರಿವಾಯಿತು.

೧ ಉ. ನಿಷ್ಕರ್ಷ : ಕೇವಲ ಮನುಷ್ಯ ಮಾತ್ರ ಸಂಗೀತಪ್ರಿಯ ನಾಗಿದ್ದಾನೆ ಎಂದೇನಿಲ್ಲ; ಸಂಗೀತಕ್ಕೆ ಪ್ರಾಣಿಗಳೂ ಎಷ್ಟು ಆನಂದದಿಂದ ಪ್ರತಿಕ್ರಿಯೆ ನೀಡುತ್ತವೆ, ಎಂಬುದನ್ನು ನಮಗೆ ಈ ಪ್ರಯೋಗದಿಂದ ಪ್ರತ್ಯಕ್ಷ ಅನುಭವಿಸಲು ಸಿಕ್ಕಿತು.

ಕು. ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೨), ಸಂಗೀತ ವಿಶಾರದೆ, ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೨.೨೦೨೩)