೧. ‘ಲವ್ ಜಿಹಾದ್’ ಪ್ರೇಮಿ ಮಿ ಕೇರಳದ ಕಮ್ಯುನಿಸ್ಟ್ ಸರಕಾರ !
ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಇವರು ಕೇರಳ ರಾಜ್ಯದಲ್ಲಿ ‘ಲವ್ ಜಿಹಾದ್ಗೆ ಬಲಿಬಿದ್ದ ೩೨ ಸಾವಿರ ಕ್ರೈಸ್ತ ಮತ್ತು ಹಿಂದೂ ಯುವತಿಯರ ಸಂದರ್ಭದಲ್ಲಿ ರಚಿಸಲಾಗಿರುವ ‘ದ ಕೇರಳ ಸ್ಟೋರಿ ಈ ಹಿಂದಿ ಚಲನಚಿತ್ರವನ್ನು ಟೀಕಿಸಿದ್ದಾರೆ.
೨. ಹಿಂದೂದ್ವೇಷಿ ಕಾಂಗ್ರೆಸನ ನಿಷೇಧ !
ಕರ್ನಾಟಕದಲ್ಲಿ ಕಾಂಗ್ರೆಸನ ಸರಕಾರ ಬಂದರೆ ಬಜರಂಗ ದಳ ಮತ್ತು ಪಾಪ್ಯೂಲರ ಫ್ರಂಟ್ ಆಫ್ ಇಂಡಿಯಾ ಇವುಗಳನ್ನು ನಿಷೇಧಿಸಲಾಗುವುದು, ಎಂದು ಕಾಂಗ್ರೆಸ ಪ್ರಕಟಿಸಿದ ಚುನಾವಣಾ ಘೋಷಣಾಪತ್ರದಲ್ಲಿ ಜನತೆಗೆ ಭರವಸೆ ನೀಡಿತ್ತು.
೩. ದ್ರಮುಕವು ದೇವಸ್ಥಾನಗಳ ಸರಕಾರಿಕರಣವನ್ನು ರದ್ದುಪಡಿಸಬೇಕು !
ತಮಿಳುನಾಡಿನಲ್ಲಿ ಭಾಜಪದ ಜನಬೆಂಬಲ ಹೆಚ್ಚುತ್ತಿರುವುದರಿಂದ ಆಡಳಿತದಲ್ಲಿರುವ ದ್ರಮುಕ ಸರಕಾರವು ಮೊದಲನೇ ಬಾರಿ ೧೦೦ ದೊಡ್ಡ ದೇವಸ್ಥಾನಗಳಲ್ಲಿ ಭಕ್ತರಿಗೆ ಅಲ್ಪಾಹಾರ ನೀಡುವ ವ್ಯವಸ್ಥೆ ಮಾಡಿದೆ. ಹಾಗೆಯೇ ದೇವಸ್ಥಾನಗಳಿಂದ ನಡೆಸಲಾಗುತ್ತಿರುವ ೩ ಸಾವಿರ ಶಾಲೆಗಳಲ್ಲಿ ಮಧ್ಯಾಹ್ನ ಊಟವನ್ನೂ ಪ್ರಾರಂಭಿಸಿದೆ.
೪. ಕಾಂಗ್ರೆಸ್ಸಿಗೆ ಬಜರಂಗ ಬಲಿಯು ಕೊಟ್ಟ ಏಟು ತಿಳಿಯಿರಿ !
ಬಜರಂಗ ದಳವನ್ನು ನಿಷೇಧಿಸುವ ಯಾವುದೇ ಉದ್ದೇಶ ಕಾಂಗ್ರೆಸನಲ್ಲಿಲ್ಲ. ರಾಜ್ಯ ಸರಕಾರವು ಈ ರೀತಿಯಲ್ಲಿ ನಿಷೇಧ ಹೇರಲು ಸಾಧ್ಯವಿಲ್ಲ, ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇವರು ಸ್ಪಷ್ಟಪಡಿಸಿದ್ದಾರೆ.
೫. ಪಾಕಿಸ್ತಾನವನ್ನು ನಿರ್ನಾಮ ಮಾಡಿದ ನಂತರ ಇವುಗಳೆಲ್ಲ ನಿಲ್ಲುತ್ತವೆ !
ರಾಜೌರಿ (ಜಮ್ಮೂ-ಕಾಶ್ಮೀರ)ದಲ್ಲಿ ಭದ್ರತಾಪಡೆ ಮತ್ತು ಭಯೋತ್ಪಾದಕರ ನಡುವಿನ ಚಕಮಕಿಯಲ್ಲಿ ೫ ಯೋಧರು ವೀರಮರಣ ಹೊಂದಿದರು. ಚಕಮಕಿಯ ವೇಳೆ ಭಯೋತ್ಪಾದಕರು ಯೋಧರ ಮೇಲೆ ಬಾಂಬ್ ಎಸೆದರು.
೬. ಆಮ್ ಆದ್ಮಿ ಪಕ್ಷದ ನಿಜ ಸ್ವರೂಪವನ್ನು ತಿಳಿಯಿರಿ !
ಥಳಿಸುವ ಮತ್ತು ಕೊಲ್ಲುವ ಬೆದರಿಕೆ ನೀಡಿದರೆಂಬ ವಿಷಯದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಆಸಮಾ ಇವರನ್ನು ಅಪರಾಧಿ ಎಂದು ನಿರ್ಧರಿಸಲಾಗಿದೆ.
೭. ವಿದ್ಯಾರ್ಥಿಗಳಿಗೆ ಸಾಧನೆ ಕಲಿಸದಿರುವ ದುಷ್ಪರಿಣಾಮ !
ಆಂಧ್ರಪ್ರದೇಶ ಕೇಂದ್ರೀಯ ಪರೀಕ್ಷಾ ಮಂಡಳದಿಂದ ೧೧ ನೇ ಮತ್ತು ೧೨ ನೇ ತರಗತಿಯ ಫಲಿತಾಂಶವನ್ನು ಘೋಷಿಸಿದ ನಂತರ ಕೇವಲ ೪೮ ಗಂಟೆಗಳಲ್ಲಿ ೯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆ ಮತ್ತು ಇತರ ೨ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.