ಆಸ್ಟ್ರೇಲಿಯಾ ಖಲಿಸ್ತಾನವಾದಿ ಸಂಘಟನೆ ಆಯೋಜಿಸಿದ್ದ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ರದ್ದು

ಮೆಲ್ಬರ್ನ(ಆಸ್ಟ್ರೇಲಿಯಾ) – ಖಲಿಸ್ತಾನಿ ಭಯೋತ್ಪಾದಕ ಸಂಘಟನೆ `ಸಿಖ್ ಫಾರ್ ಜಸ್ಟೀಸ್’ ಸ್ವತಂತ್ರ ಖಲಿಸ್ತಾನದ ಬೇಡಿಕೆಗಾಗಿ ಸಿಡ್ನಿಯಲ್ಲಿ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಈ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದ ವಿರುದ್ಧ ಇಲ್ಲಿಯ ನಾಗರಿಕರು ಸರಕಾರಕ್ಕೆ ದೂರನ್ನು ದಾಖಲಿಸಿದ್ದರು. ಇದರಿಂದ ಭದ್ರತಾ ಮಂಡಳಿಯ ಹೇಳಿಕೆಯ ಮೇರೆಗೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಈ ಕಾರ್ಯಕ್ರಮವನ್ನು ಬ್ಲ್ಯಾಕ್ ಟೌನ ಸೆಂಟರನಲ್ಲಿ ಆಯೋಜಿಸಲಾಗಿತ್ತು. `ನಮ್ಮ ನಿಯಮ ಮತ್ತು ಧೋರಣೆಗಳ ಅಡಿಯಲ್ಲಿ ಜನಾಭಿಪ್ರಾಯ ಪರಿಶೀಲನೆಯ ಕಾರ್ಯಕ್ರಮ ಬರುವುದಿಲ್ಲ ಎಂದು ಕಾರಣ ನೀಡಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲು ನಾವು ನಿರ್ಣಯಿಸಿದ್ದೇವೆ’ ಎಂದು ಬ್ಲ್ಯಾಕ್ ಟೌನ ಸೆಂಟರ ವ್ಯವಸ್ಥಾಪಕ ಮಂಡಳಿಯು ತಿಳಿಸಿದೆ.

ಸಂಪಾದಕೀಯ ನಿಲುವು

ಆಸ್ಟ್ರೇಲಿಯಾ ಸರಕಾರ ಈ ಕಾರ್ಯಕ್ರಮ ಆಯೋಜಿಸಿದ್ದ ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮಕೈಗೊಳ್ಳುವ ಆವಶ್ಯಕತೆಯಿದೆ !