೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ನಾವೀನ್ಯಪೂರ್ಣ ಅಷ್ಟಾಂಗ ಸಾಧನೆ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವ್ಯಷ್ಟಿ ಸಾಧನೆಗಾಗಿ (ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ) ಸನಾತನದ ಸಾಧಕರಿಗೆ, ಹಾಗೆಯೇ ಸಾಧನೆಗೆ ಸಂಬಂಧಿಸಿದ ಗ್ರಂಥಗಳ ಮೂಲಕ ಸಮಾಜಕ್ಕೂ ನಾವೀನ್ಯಪೂರ್ಣ ಅಷ್ಟಾಂಗ ಸಾಧನೆಯನ್ನು ಹೇಳಿದ್ದಾರೆ. ಈ ರೀತಿ ಸಾಧನೆ ಮಾಡಿದರೆ ಖಂಡಿತವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಈ ರೀತಿ ಸಾಧನೆ ಮಾಡಿ ಕಳೆದ ೨೦-೨೫ ವರ್ಷಗಳಲ್ಲಿ ಸನಾತನದ ೧೧೯ ಸಾಧಕರು ಸಂತಪದವಿಯನ್ನು ತಲುಪಿದ್ದಾರೆ ಮತ್ತು ೧ ಸಾವಿರದ ೬೯ ಸಾಧಕರು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಗಳಿಸಿ, ಅವರೂ ಸಂತತ್ವದ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ. (೩೦ ಏಪ್ರಿಲ್ ೨೦೨೩ ರ ವರೆಗಿನ ಅಂಕಿಅಂಶ ಗಳು)
೨. ಅಷ್ಟಾಂಗ ಸಾಧನೆಯ ಕ್ರಮವು ವೈಶಿಷ್ಟ್ಯ ಪೂರ್ಣವಾಗಿದೆ
ಈ ಅಷ್ಟಾಂಗ ಸಾಧನೆಯಲ್ಲಿ ಸ್ವಭಾವದೋಷ-ನಿರ್ಮೂಲನೆ (ಮತ್ತು ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ, ಮತ್ತು ಪ್ರೀತಿ ಎಂಬ ೮ ಹಂತಗಳಿವೆ; ಆದುದರಿಂದಲೇ ಅದಕ್ಕೆ ಅಷ್ಟಾಂಗ ಸಾಧನೆ ಎಂದು ಹೇಳುತ್ತಾರೆ. ಈ ಹಂತಗಳೆಂದರೆ ಸಾಧನೆಯಲ್ಲಿ ಮೊದಲು ಯಾವುದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಮತ್ತು ಒಂದೊಂದೇ ಹಂತವನ್ನು ದಾಟುತ್ತಾ ಸಾಧನೆಯಲ್ಲಿ ಹೇಗೆ ಮುಂದೆ ಹೋಗಬೇಕು ?, ಈ ಕ್ರಮದಲ್ಲಿವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಈ ಸಾಧನೆಯ ಕ್ರಮವು ವೈಶಿಷ್ಟ್ಯಪೂರ್ಣವಾಗಿದೆ ಮತ್ತು ಅದು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಗೆ ಸಂಬಂಧಿಸಿದೆ.
೩. ದೇಹದಲ್ಲಿನ ಪಂಚತತ್ತ್ವಗಳ ಪೈಕಿ ಒಂದೊಂದು ತತ್ತ್ವ ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿ ಅದು ಪ್ರಕ್ಷೇಪಣೆಯಾಗಲು ಪೂರಕವಾದ ಅಷ್ಟಾಂಗ ಸಾಧನೆಯ ಹಂತಗಳು
ಸಾಧನೆಯಲ್ಲಿ ನಾವು ಮುಂದೆ ಮುಂದೆ ಉನ್ನತಿಯನ್ನು ಮಾಡಿಕೊಳ್ಳುತ್ತಾ ಹೋದಂತೆ, ನಮ್ಮಲ್ಲಿನ ಪಂಚತತ್ತ್ವಗಳ ಪೈಕಿ ಒಂದೊಂದೇ ತತ್ತ್ವವು ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿ ಪ್ರಕ್ಷೇಪಣೆಯಾಗತೊಡಗುತ್ತದೆ. ಈ ಪ್ರಕ್ರಿಯೆಗಾಗಿ ಅಷ್ಟಾಂಗ ಸಾಧನೆಯಲ್ಲಿನ ಯಾವ ಅಂಗವು (ಹಂತವು) ಯಾವ ಪಂಚತತ್ತ್ವಕ್ಕೆ ಪೂರಕವಾಗಿದೆ, ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
೪. ಅಷ್ಟಾಂಗ ಸಾಧನೆಯ ಪಂಚತತ್ತ್ವಗಳ ಜಾಗೃತಿಯ ಕಾರ್ಯ
೪ ಅ. ಪೃಥ್ವಿತತ್ತ್ವದ ಜಾಗೃತಿ : ಮನುಷ್ಯನಲ್ಲಿ ಜನ್ಮಜನ್ಮಾಂತರಗಳ ಸಂಸ್ಕಾರ, ಹಾಗೆಯೇ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳಿರುತ್ತವೆ. ಸ್ವಭಾವದೋಷ-ನಿರ್ಮೂಲನೆ (ಮತ್ತು ಗುಣಸಂವರ್ಧನೆ) ಮತ್ತು ಅಹಂ-ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸತೊಡಗಿದಾಗ, ಹಾಗೆಯೇ ನಾಮಜಪವನ್ನು ಮಾಡತೊಡಗಿದಾಗ ನಿಧಾನವಾಗಿ ಸ್ವಭಾವದೋಷಗಳು ಮತ್ತು ಅಹಂ ದೂರವಾಗತೊಡಗುತ್ತವೆ. ಇದರಿಂದ ದೇಹದ ಶುದ್ಧಿಯಾಗತೊಡಗುತ್ತದೆ. ಅಂದರೆ ದೇಹದಲ್ಲಿನ ಪೃಥ್ವಿತತ್ತ್ವದ ಜಡತ್ವವು ದೂರವಾಗತೊಡಗಿ, ಅದು ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗತೊಡಗುತ್ತದೆ. ಆಗ ಆಧ್ಯಾತ್ಮಿಕ ಮಟ್ಟವು ಶೇ. ೫೦ ಕ್ಕಿಂತ ಮುಂದೆ ಹೋಗತೊಡಗುತ್ತದೆ.
೪ ಆ. ಆಪತತ್ತ್ವದ ಜಾಗೃತಿ : ಸಾಧನೆಯ ಎರಡನೇ ಹಂತದಲ್ಲಿ ಭಾವಜಾಗೃತಿಗಾಗಿ ಪ್ರಯತ್ನಿಸುವಾಗ ಮನುಷ್ಯನಲ್ಲಿನ ಆಪತತ್ತ್ವ ಜಾಗೃತವಾಗತೊಡಗುತ್ತದೆ. ಭಾವವಿದ್ದಲ್ಲಿ ದೇವರು ಎಂದು ಹೇಳಲಾಗಿದೆ. ದೇವರನ್ನು ಅನುಭವಿಸಬೇಕಾಗಿದ್ದರೆ, ಅವನೊಂದಿಗೆ ಅನುಸಂಧಾನವನ್ನು ಇಡಬೇಕಾಗಿದ್ದರೆ, ನಮ್ಮಲ್ಲಿ ಭಾವ ಉತ್ಪನ್ನವಾಗಬೇಕು. ಭಾವವು ಆಪತತ್ತ್ವಕ್ಕೆ ಸಂಬಂಧಿಸಿದೆ. ಭಾವಜಾಗೃತವಾಗತೊಡಗಿದಾಗ, ಆಧ್ಯಾತ್ಮಿಕ ಮಟ್ಟ ಶೇ. ೬೦ ಕ್ಕಿಂತ ಮುಂದೆ ಹೋಗತೊಡಗುತ್ತದೆ.
೪ ಇ. ತೇಜತತ್ತ್ವ ಜಾಗೃತಿ : ಸಾಧನೆಯ ಮೂರನೇ ಹಂತದಲ್ಲಿ ಸತ್ಸಂಗ ಮತ್ತು ಸತ್ಸೇವೆ ಮಹತ್ವದ್ದಾಗಿದೆ. ಸತತವಾಗಿ ಸತ್‌ನಲ್ಲಿ ಇರತೊಡಗಿದರೆ ಮಾಯೆಯ ವಿಸ್ಮರಣೆಯಾಗತೊಡಗುತ್ತದೆ. ಇದರಿಂದ ದೇಹಕ್ಕೆ ಸತತವಾಗಿ ಚೈತನ್ಯ ಸಿಗುತ್ತಾ ಹೋಗುತ್ತದೆ ಚೈತನ್ಯವೆಂದರೆ ತೇಜ ತತ್ತ್ವ. ಚೈತನ್ಯವನ್ನು ಪಡೆಯಲು ಬರತೊಡಗಿದರೆ, ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತ ಮುಂದೆ ಹೋಗತೊಡಗುತ್ತದೆ, ಅಂದರೆ ಸಂತಪದವಿ ಪ್ರಾಪ್ತವಾಗುತ್ತದೆ.
೪ ಈ. ವಾಯುತತ್ತ್ವದ ಜಾಗೃತಿ : ಸಾಧನೆಯ ನಾಲ್ಕನೇ ಹಂತದಲ್ಲಿ ತ್ಯಾಗ ಮಹತ್ವದ್ದಾಗಿದೆ. ತ್ಯಾಗವಿಲ್ಲದೇ ಜೀವನದಲ್ಲಿ ಏನೂ ಗಳಿಸಲು ಆಗುವುದಿಲ್ಲ. ಸಾಧನೆಯಲ್ಲಿ ತನು, ಮನ ಮತ್ತು ಧನ ಇವುಗಳ ತ್ಯಾಗವನ್ನು ಮಾಡಬೇಕಾಗುತ್ತದೆ. ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದೂ ತ್ಯಾಗವೇ ಆಗಿದೆ. ತ್ಯಾಗದಿಂದ ದೇಹಪ್ರಜ್ಞೆಯ ಮರೆವಾಗುತ್ತದೆ. ಇದರಿಂದ ಹಗುರತನ ಬರುತ್ತದೆ. ನಮ್ಮಲ್ಲಿ ಮೃದುತ್ವ ಬರುತ್ತದೆ. ಇದುವೇ ನಮ್ಮಲ್ಲಿನ ವಾಯುತತ್ತ್ವಕ್ಕೆ ಬಂದಿರುವ ಜಾಗೃತಿ ಆಗಿದೆ ! ಇದು ಆಗ ತೊಡಗಿದರೆ, ಆಧ್ಯಾತ್ಮಿಕ ಮಟ್ಟವು ಶೇ. ೮೦ ಕ್ಕಿಂತ ಮುಂದೆ ಹೋಗತೊಡಗುತ್ತದೆ. ಅಂದರೆ ಸದ್ಗುರು ಪದವಿ ಬರುತ್ತದೆ.
೪ ಉ. ಆಕಾಶತತ್ತ್ವದ ಜಾಗೃತಿ : ಸಾಧನೆಯ ಐದನೇ ಮತ್ತು ಕೊನೆಯ ಹಂತದಲ್ಲಿ ಪ್ರೀತಿಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಪ್ರೀತಿ ಎಂದರೆ ನಿರಪೇಕ್ಷ ಪ್ರೇಮ. ಇದರಿಂದ ಎಲ್ಲರೂ ನಮ್ಮವರು ಎಂದು ಅನಿಸತೊಡಗುತ್ತದೆ. ಪ್ರೀತಿಯಿಂದ ಆಕಾಶದಂತಹ ವ್ಯಾಪಕ ದೃಷ್ಟಿ ಬರುತ್ತದೆ. ನಾವು ಸರ್ವತೋಮುಖವಾಗಿ ವಿಚಾರ ಮಾಡಲು ಕಲಿಯುತ್ತೇವೆ. ಈಶ್ವರನು ಅಖಿಲ ಬ್ರಹ್ಮಾಂಡದ ವ್ಯವಸ್ಥಾಪನೆಯನ್ನು ನೋಡುತ್ತಾನೆ. ಇದುವೇ ಅವನ ಪ್ರೀತಿಯಾಗಿದೆ. ಇದುವೇ ಆ ಆಕಾಶತತ್ತ್ವ ! ನಮ್ಮಲ್ಲಿ ಪ್ರೀತಿ ಬರತೊಡಗಿದರೆ, ಆಧ್ಯಾತ್ಮಿಕ ಮಟ್ಟ ಶೇ. ೯೦ ಕ್ಕಿಂತ ಮುಂದೆ ಹೋಗತೊಡಗುತ್ತದೆ, ಅಂದರೆ ಪರಾತ್ಪರ ಗುರುಪದವಿ ಪ್ರಾಪ್ತವಾಗುತ್ತದೆ.
ಈ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆಯಿಂದ ಸಹಜವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು, ಈಶ್ವರಪ್ರಾಪ್ತಿ ಈ ಧ್ಯೇಯವನ್ನು ಪ್ರಾಪ್ತಮಾಡಿಕೊಳ್ಳಲು ಬರುತ್ತದೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೨.೨೦೨೩)