ಸಾಧಕನು ಬ್ರಹ್ಮ, ವಿಷ್ಣು ಮತ್ತು ಶಿವ ಈ ಮೂರು ರೂಪಗಳಲ್ಲಿ ಅನುಭವಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ದೈವೀ ಕಾರ್ಯ !

ಎಲ್ಲ ಸಾಧಕರಿಗಾಗಿ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

`೧೫.೨.೨೦೨೩ ರಂದು ಭಾವಾರ್ಚನೆ ಮಾಡುವಾಗ ಗುರುದೇವರನ್ನು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು) ಶಿವನ ರೂಪದಲ್ಲಿ ನೋಡಿ ನಾನು ಅವರ ಚರಣಗಳಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುತ್ತಿದ್ದೆನು. ಅನಂತರ ಅವರ ಚರಣಗಳಲ್ಲಿ ಮಾನಸ ಸಾಷ್ಟಾಂಗ ನಮಸ್ಕಾರವನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ಅವರ ದೈವೀ ಕಾರ್ಯದ ಬಗ್ಗೆ ವಿಚಾರ ಬಂದಿತು. ಆ ಕುರಿತು ಗುರುದೇವರು ಸೂಚಿಸಿದ ಈ ವಿಚಾರಗಳನ್ನು ಅವರ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.

೧. `ಸನಾತನ ಸಂಸ್ಥೆಯ ಸ್ಥಾಪನೆ’ಯು ಗುರುದೇವರ ಉತ್ಪತ್ತಿ ಮಾಡುವ ಬ್ರಹ್ಮರೂಪ, ಅನಿಷ್ಟ ಶಕ್ತಿಗಳ ತೊಂದರೆಗಳಿಂದ ಸಾಧಕರನ್ನು ರಕ್ಷಿಸುವ ಆ ವಿಷ್ಣುರೂಪ ಮತ್ತು ಸೃಷ್ಟಿಯಲ್ಲಿನ ಎಲ್ಲ ದುಷ್ಟಪ್ರವೃತ್ತಿಗಳ ಲಯ ಮಾಡುವ ಆ ಶಿವರೂಪವಾಗಿದೆ

ಶ್ರೀ. ಸಂಗಮ ಬೊರಕರ

೧ ಅ. ಬ್ರಹ್ಮರೂಪ : `ಸನಾತನ ಸಂಸ್ಥೆಯ ಸ್ಥಾಪನೆ’, ಇದು ಗುರುದೇವರ ಉತ್ಪತ್ತಿಯನ್ನು ಮಾಡುವ ಬ್ರಹ್ಮರೂಪವಾಗಿತ್ತು, ಎಂದು ಅನಿಸಿತು.

೧ ಆ. ವಿಷ್ಣುರೂಪ : `ಕಳೆದ ೨೫ ವರ್ಷಗಳಿಂದ ಗುರುದೇವರು ಸಾಧಕರ ರಕ್ಷಣೆಯನ್ನು ಮಾಡುತ್ತಿದ್ದಾರೆ ಮತ್ತು ಅವರನ್ನು ಅನಿಷ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯನ್ನು ಮಾಡುತ್ತಿದ್ದಾರೆ’, ಇದು ಅವರ ಪಾಲನೆಯನ್ನು ಮಾಡುವ ವಿಷ್ಣುಸ್ವರೂಪವಾಗಿದೆ, ಎಂಬುದಾಗಿ ಅನಿಸಿತು.

೧ ಇ. ಶಿವರೂಪ : ೨೦೨೩ ರ ಮಹಾಶಿವರಾತ್ರಿಯಿಂದ ಗುರುದೇವರ ಲಯಕಾರಿ ಶಿವತತ್ತ್ವವು ಕಾರ್ಯನಿರತವಾಗಲಿದೆ. ಆದ್ದರಿಂದ ಸೃಷ್ಟಿಯಲ್ಲಿನ ಎಲ್ಲ ದುಷ್ಟಪ್ರವೃತ್ತಿಗಳ ಲಯ (ವಿನಾಶ)ವಾಗಿ ಪೃಥ್ವಿಯು ಪುನಃ ಶುದ್ಧವಾಗಲಿದೆ. ಈ ವಿನಾಶಕಾಲದಲ್ಲಿ ಗುರುದೇವರ ವಾತ್ಸಲ್ಯರೂಪ ಮತ್ತು ರಕ್ಷಣಕರ್ತ ವಿಷ್ಣುರೂಪವು ಸಾಧಕರ ರಕ್ಷಣೆಯನ್ನು ಮಾಡಲಿದೆ. ಈ ಲಯ ಕಾಲದ ನಂತರ ಪುನಃ ಸತ್ಯಯುಗವು ಆರಂಭ ವಾಗಲಿದೆ, ಎಂದು ಅನಿಸಿತು.

`ಹೇ ಪರಮ ಪೂಜ್ಯ ಗುರುದೇವರೇ, ಸಾಧಕರಾದ ನಮಗೆಲ್ಲರಿಗೆ ನಿಮ್ಮ ಈ ರೂಪಗಳೊಂದಿಗೆ ಏಕರೂಪವಾಗಿಸಿ ನಿಮ್ಮ ಕೃಪೆಯನ್ನು ಅನುಭವಿಸುವಂತಾಗಲಿ’, ಇದೇ ತಮ್ಮ ಪಾವನ ಚರಣಗಳಲ್ಲಿ ಶರಣಾಗತಿಯಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ. ಎಲ್ಲ ಸಾಧಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೇ ಪರಮ ಪೂಜ್ಯ ಗುರುದೇವರೇ, ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ !’

– ಕೃತಜ್ಞತಾಪೂರ್ವಕ ಅರ್ಪಣೆ,

ಶ್ರೀ. ಸಂಗಮ ಬೊರಕರ, ಫೋಂಡಾ, ಗೋವಾ. (೧೫.೨.೨೦೨೩)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.