ರಾಂಚಿ (ಜಾರ್ಖಂಡ್) – ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಯಾವುದೇ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದರೆ ಚಿತ್ರಮಂದಿರವನ್ನು ಧ್ವಂಸ ಮಾಡುವುದಾಗಿ, ಜಾರ್ಖಂಡ್‌ನ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಬೆದರಿಕೆ ಹಾಕಿದ್ದಾರೆ. ‘ಈ ಚಿತ್ರ ಪ್ರದರ್ಶಿಸಿದ ಚಿತ್ರಮಂದಿರದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’, ಎಂದು ಅನ್ಸಾರಿ ಹೇಳಿದ್ದಾರೆ. ಅನ್ಸಾರಿ ಬಜರಂಗದಳವನ್ನು ‘ಕೊಲೆಗಾರರು’ ಎಂದು ಹೇಳುತ್ತಾ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. (ಭಾರತದಲ್ಲಿ ನಡೆದ ಸಿಖ್ ವಿರೋಧಿ ಗಲಭೆಗೆ ಕಾಂಗ್ರೆಸ್ ಕಾರಣವಾಗಿತ್ತು. ಅದರ ಬಗ್ಗೆ ಅನ್ಸಾರಿ ಮಾತನಾಡಬೇಕು ! – ಸಂಪಾದಕರು)
Jharkhand MLA Irfan Ansari threatens to vandalise the theatre if any of them screen the Kerala Story movie.
There should be a ban on ‘The Kerala Story,” and a case will be registered against the owner of the theatre that will screen the movie: Irfan Ansari, Congress MLA pic.twitter.com/Yx3LdbcWRr
— TIMES NOW (@TimesNow) May 7, 2023
ಶಾಸಕ ಇರ್ಫಾನ್ ಅನ್ಸಾರಿ ಮಾತನ್ನು ಮುಂದುವರೆಸುತ್ತಾ
೧. ‘ದಿ ಕೇರಳ ಸ್ಟೋರಿ’ ಕಥೆಗೆ ಅರ್ಥವೇ ಇಲ್ಲ. ಇದು ಧರ್ಮಗಳಲ್ಲಿ ಬಿರಿಕು ಮೂಡಿಸುವ ಮತ್ತು ಜನರನ್ನು ಅವಮಾನಿಸುವ ಚಿತ್ರವಾಗಿದೆ. (ಜಿಹಾದಿ ಭಯೋತ್ಪಾದನೆಯ ಸತ್ಯವನ್ನು ಬಿಂಬಿಸುವ ಈ ಚಿತ್ರ ಜಿಹಾದಿ ಮನಸ್ಥಿತಿಯ ಅನ್ಸಾರಿಯಂತಹ ಕಾಂಗ್ರೆಸ್ಸಿಗರಿಗೆ ಕೋಪ ಬರುವುದು ಸಹಜ ! – ಸಂಪಾದಕರು)
೨. ಬಜರಂಗದಳವನ್ನು ರಾಜ್ಯದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಬಜರಂಗದಳ ಕಾರ್ಯಕರ್ತರು ಜನರನ್ನು ಥಳಿಸುತ್ತಾರೆ. ಗುಂಪು ಹತ್ಯೆಗಳು ಭಜರಂಗದಳದ ಕೊಡುಗೆಯಾಗಿದೆ. ಈ ಜನರು ರಾಜಾರೋವಾಗಿ ತಿರುಗಾಡುತ್ತಾರೆ. ಈ ಕೊಲೆಗಾರರನ್ನು ಯಾವುದೇ ಪರಿಸ್ಥಿತಿಯಲ್ಲಿ ಬಿಡಲಾಗುವುದಿಲ್ಲ. ‘ಇಲ್ಲಿ ನಮ್ಮ ಸರಕಾರವಿದೆ’, ಎಂದು ಅನ್ಸಾರಿ ಬೆದರಿಕೆ ಹಾಕಿದರು.
(ಸೌಜನ್ಯ : Time Now)
ಸಂಪಾದರಕ ನಿಲುವುಜಾರ್ಖಂಡ್ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್‌ನ ಸಮ್ಮಿಶ್ರ ಸರಕಾರವಿದೆ. ಹೀಗಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಮಾತನಾಡುವ ಇಂತಹ ಮತಾಂಧ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ! ಅಹಿಂಸೆಯನ್ನು ಜಪಿಸುವ ಕಾಂಗ್ರೆಸ್ಸಿಗರ ನಿಜ ಸ್ವರೂಪ ! ಇಂತಹ ಪಕ್ಷ ಅಧಿಕಾರದಲ್ಲಿದ್ದಾಗ ಜಾರ್ಖಂಡ್‌ನಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡಬಹುದು ? |