`ನಾರಾ-ಎ- ತಕಬೀರ (ಅಲ್ಲಾ ಮಹಾನ್ ಆಗಿದ್ದಾನೆ) ಅಲ್ಲಾಹು ಅಕಬರ’ (ಅಲ್ಲಾ ಸರ್ವೋಚ್ಚನಾಗಿದ್ದಾನೆ) ಎಂದು ಘೋಷಣೆ
ಚೆನ್ನೈ(ತಮಿಳುನಾಡು) – `ದಿ ಕೇರಳ ಸ್ಟೋರಿ ಚಲನಚಿತ್ರ’ ಪ್ರದರ್ಶನಗೊಂಡ ಬಳಿಕ ಅದಕ್ಕೆ ಕೆಲವು ಸ್ಥಳಗಳಲ್ಲಿ ವಿರೋಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಈ ವಿಡಿಯೋ ಚೆನ್ನೈನಲ್ಲಿ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲವು ಜನರು ಚಲನಚಿತ್ರಗೃಹದ ಹೊರಗೆ ಹಚ್ಚಲಾಗಿದ್ದ ಈ ಚಲನಚಿತ್ರದ ದೊಡ್ಡ ಬಟ್ಟೆಯ ಫಲಕವನ್ನು ಹರಿಯುತ್ತಿರುವುದು ಕಂಡು ಬರುತ್ತಿದೆ. ಹಾಗೆಯೇ ಈ ಸಮಯದಲ್ಲಿ ಅವರು `ನಾರಾ-ಎ- ತಕಬೀರ, ಅಲ್ಲಾಹು ಅಕಬರ’ ಈ ಘೋಷಣೆ ನೀಡುತ್ತಿರುವುದು ಕಂಡು ಬರುತ್ತಿದೆ. ಅವರ ಕೈಯಲ್ಲಿ ತಮಿಳುನಾಡಿನ ಇಸ್ಲಾಮಿ ಸಂಘಟನೆ `ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಘಮ್’ ನ(ಟಿ.ಎಮ್.ಎಮ್.ಕೆ.ಯ) ಬಾವುಟ ಕಾಣಿಸುತ್ತಿದೆ. ಮತ್ತೊಂದು ವಿಡಿಯೋದಲ್ಲಿ ಇದೇ ಸಂಘಟನೆಯ ಕಾರ್ಯಕರ್ತನು ಚಲನಚಿತ್ರದ ಭಿತ್ತಿಪತ್ರಗಳನ್ನು ಹರಿಯುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋ ರಾಜ್ಯದ ಕೊಯಂಬತ್ತೂರ ನಗರದ್ದೆಂದು ಹೇಳಲಾಗುತ್ತಿದೆ. ಈ ಚಲನಚಿತ್ರವನ್ನು ಇಸ್ಲಾಮಿ ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಿವೆ. ಜಮಿಯತ ಉಲೆಮಾ-ಎ-ಹಿಂದ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಚಲನಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿತ್ತು.
ಈ ವಿಡಿಯೋದಲ್ಲಿ ಸಾಮಾಜಿಕ ಮಾಧ್ಯಮದಿಂದ ಓರ್ವನು ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ಒಂದು ವೇಳೆ ಈ ಚಲನಚಿತ್ರ ಇಸ್ಲಾಮಿಕ ಸ್ಟೇಟ ವಿರೋಧದಲ್ಲಿದೆ ಮತ್ತು ಇಸ್ಲಾಮ ಮತ್ತು ಇಸ್ಲಾಮಿಕ ಸ್ಟೇಟಗಳಿಗೆ ಏನೂ ಸಂಬಂಧವಿಲ್ಲ, ಹೀಗಿರುವಾಗ ಜನರಿಗೆ ಅದರಿಂದ ಏಕೆ ತೊಂದರೆಯಾಗುತ್ತಿದೆ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾನೆ.
Tamil Nadu: The Kerala Story screened amid protests, high security in malls https://t.co/VgfhU6v4my
— TOIChennai (@TOIChennai) May 5, 2023
ಸಂಪಾದರಕ ನಿಲುವು
|