ಅಕೋಟ ಫೈಲ್ ಗಲಭೆ ಪ್ರಕರಣ ೭೦ ಗಲಭೆಖೋರರ ವಿರುದ್ಧ ಅಪರಾಧ ದಾಖಲು !

೧೦ ಆರೋಪಿಗಳಿಗೆ ೩ ದಿನಗಳ ಜೇಲು ಶಿಕ್ಷೆ !

ಅಕೋಲಾ – ಜಿಲ್ಲೆಯ ಅಕೋಟ್ ಫೈಲ್ ನಲ್ಲಿ ಮೇ ೨ ರಂದು ರಾತ್ರಿ ಹಿಂದಿನ ದ್ವೇಷದಿಂದ ೨ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಆಗ ನಡೆದ ಕಲ್ಲು ತೂರಾಟದಲ್ಲಿ ಹಲವು ವಾಹನಗಳಿಗೆ ಹಾನಿಯಾಗಿತ್ತು. ಬಳಿಕ ಪೊಲೀಸರು ಗಲಭೆಕೋರರನ್ನು ಬಂಧಿಸಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ೧೦ ಆರೋಪಿಗಳನ್ನು ಬಂಧಿಸಿ ಮೇ ೩ ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ೯ ಜನರಿಗೆ ೩ ದಿನಗಳ ಕಾ ಜೈಲು ಶಿಕ್ಷೆ ವಿಧಿಸಿದ್ದು, ೧ ಆರೋಪಿ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.

ಝಮಝಮ ಸ್ಟೋರ್ ಮತ್ತು ಶಂಕರನಗರ ಪ್ರದೇಶದಲ್ಲಿ ೨ ಪ್ರದೇಶದಲ್ಲಿನ ಕೆಲವು ಯುವಕರ ನಡುವೆ ಘರ್ಷಣೆ ಸಂಭವಿಸಿತ್ತು. ಇದರಿಂದಾಗಿ ಆ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತದನಂತರ ಗಲಭೆ ಭುಗಿಲೆದ್ದಿತು. ಈ ಗಲಭೆಯಲ್ಲಿ ಎರಡು ಗುಂಪುಗಳು ಪರಸ್ಪರರ ಮೇಲೆ ಕಲ್ಲುತೂರಾಟ ಮಾಡಿ ಬೇಲಿಯ ಪ್ರವೇಶ ದ್ವಾರ ಮತ್ತು ಕಾಂಪ್ಲೆಕ್ಸ್‌ನಲ್ಲಿರುವ ಮನೆಗಳ ಬಾಗಿಲು ಮತ್ತು ಕಿಟಕಿಗಳನ್ನು ಗುರಿಯಾಗಿಸಿಕೊಂಡು ಮನೆಗಳ ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದರು. ಈ ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಘುಗೆ ಇವರು ಸ್ಥಳಕ್ಕೆ ಹೋಗಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಗಲಭೆಯ ಪ್ರಕರಣ ದಾಖಲಿಸಲಾಗಿದೆ. ಶೇಖ್ ರೈಸ್ ಶೇ. ರಾಶೀದ್, ಅಜಯ್ ರಾವುತ್, ಸೋ. ಖಾನ್ ಅಝರ್ ಖಾನ್, ದರ್ಶನ್ ಸೂರಜ್ ಉಜೈನವಾಲ್, ಸ್ವಪ್ನಿಲ್ ವಾಂಖಡೆ, ವಿನೋದ್ ಪುಂಡಗೆ, ನಾಗೇಶ್ ಭಗತ್, ಮೊ. ಶಾಕಿರ್ ಎ.ರಶೀದ್, ಶೇ. ಸಾಬೀರ್ ಶೇ. ತಬೀದ್. ಆರೋಪಿಗಳ ಹೆಸರುಗಳಾಗಿವೆ. ಆರೋಪಿ ಸಚಿನ್ ಬಾಲಖಂಡೆ ಆತ ತಲೆಮರೆಸಿಕೊಂಡಿದ್ದಾನೆ. ಈ ಆರೋಪಿಗಳು ಸೇರಿ ೬೦ ರಿಂದ ೭೦ ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.