ಮುಸಲ್ಮಾನ ಬಾಂಧವರೇ, ನನ್ನ ಕೈ ಬಿಡಬೇಡಿರಿ ! – ಕಾಂಗ್ರೆಸ್ ನ ಮುಸಲ್ಮಾನ ಶಾಸಕ ರಹೀಂ ಖಾನನಿಂದ ಕರೆ

ಶಾಸಕ ರಹೀಂ ಖಾನ

ಬೀದರ – ರಾಜ್ಯದ ವಿಧಾನಸಭೆಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಮತ್ತು ಹಾಲಿ ಶಾಸಕ ರಹೀಂ ಖಾನರು ಸ್ಥಳೀಯ ಮುಸಲ್ಮಾನರಿಗೆ ಕರೆ ನೀಡುತ್ತಾ, ನನ್ನ ವಿರುದ್ಧ ಒಂದು ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಆದ್ದರಿಂದ ಮುಸಲ್ಮಾನ ಬಾಂಧವರೇ, ನನ್ನ ಕೈ ಬಿಡಬೇಡಿರಿ, ನಾನು ನಿಮ್ಮ ಗಲ್ಲಿಗೆ ಬರದಿದ್ದರೂ, ನೀವು ಗಮನ ಹರಿಸಬೇಕು; ಕಾರಣ ಇತರೆ ಸಮುದಾಯಗಳ ಮತಗಳು ಸಿಗಬೇಕು; ಎಂದು ನನಗೆ ಪ್ರತಿಯೊಬ್ಬರ ಮನೆಗೆ ಹೋಗಬೇಕಾಗುತ್ತದೆ. ಕೆಲವರು ನಮ್ಮ ಸಮುದಾಯದವರ ಜನರನ್ನು (ಮುಸಲ್ಮಾನರನ್ನು) ಹಣ ಕೊಟ್ಟು ನನ್ನನ್ನು ಸೋಲಿಸಲು ಪಣ ತೊಟ್ಟಿದ್ದಾರೆ. 2018 ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ನಾನು ಕೇವಲ ಮುಸಲ್ಮಾನರ ಮತಗಳನ್ನು ಪಡೆದುಕೊಂಡೇ ವಿಜಯಿಯಾಗಿದ್ದೆನು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಈ ಹಿಂದೆ ಕೇವಲ ಮುಸಲ್ಮಾನರ ಮತಗಳನ್ನು ಪಡೆದುಕೊಂಡೇ ಜಯಗಳಿಸಿರುವುದಾಗಿ ಜಂಭ !
  • ಇದು ತಾನು ಮಾಡಿದ ಕೆಲಸದ ಬಗ್ಗೆ ಅಲ್ಲ, ಜಾತಿ ಧರ್ಮಗಳ ಆಧಾರದಲ್ಲಿ ಮತಗಳನ್ನು ಕೇಳುವ ಕಾಂಗ್ರೆಸ್ ನ ನೈಜ ಸ್ವರೂಪ ! ಹಿಂದೂಗಳನ್ನು ಮತಾಂಧರೆಂದು ಹೇಳುವವರಿಗೆ ಈಗ ಇದು ಮತಾಂಧತೆ ಅನಿಸುವುದಿಲ್ಲವೇ ?
  • ಈ ರೀತಿ ಎರಡು ಧರ್ಮಗಳಲ್ಲಿ ಬಿರುಕು ಮೂಡಿಸುವವರ ಮೇಲೆ ಚುನಾವಣಾ ಆಯೋಗ ಏನಾದರೂ ಕ್ರಮ ಕೊಳ್ಳುವುದೇ ?