ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಗೋಪಾಲ್ ಪರಾಂಜಲಿಯವರ ಹೇಳಿಕೆ !
ಮಥುರಾ (ಉತ್ತರ ಪ್ರದೇಶ) – ನೇಪಾಳ ಈಗಾಗಲೇ ಸೈದ್ಧಾಂತಿಕವಾಗಿ ಹಿಂದೂ ರಾಷ್ಟ್ರವಾಗಿದೆ. ಭಾರತವು ಹಿಂದೂ ರಾಷ್ಟ್ರವಾದರೆ ಇಡೀ ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಜಗತ್ತಿನಾದ್ಯಂತ ವಾಸಿಸುತ್ತಿರುವ 178 ಕೋಟಿಗೂ ಹೆಚ್ಚು ಹಿಂದೂಗಳಿಗೆ ಗೌರವದ ಅನುಭೂತಿ ಬರಲಿದೆ. ಇದರಿಂದ ಅವರ ಆತ್ಮಸ್ಥೈರ್ಯವೂ ಹೆಚ್ಚುತ್ತದೆ ಎಂದು ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಗೋಪಾಲ್ ಪರಾಂಜಲಿ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ‘ಪಶುಪತಿನಾಥ ಅಭಿವೃದ್ಧಿ ನಿಧಿ, ಕಠ್ಮಂಡು’ನ ಮುಖ್ಯ ಸದಸ್ಯ ಶಾಸ್ತ್ರಿ ಅರ್ಜುನ್ ಪ್ರಸಾದ್ ವಸ್ತೋಲಾ ಸಹ ಉಪಸ್ಥಿತರಿದ್ದರು. ಅವರು, ”ಇಂದಿನಿಂದ 2 ಸಾವಿರದ 530 ವರ್ಷಗಳ ಹಿಂದೆ ಆದ್ಯ ಶಂಕರಾಚಾರ್ಯರು ಇತರ ಧರ್ಮಿಯರಿಂದ ನಾಶವಾಗಿದ್ದ ವೈದಿಕ ಸನಾತನ ಸಂಸ್ಕೃತಿಯನ್ನು ಸ್ಥಾಪಿಸಿದರು, ಈಗ ಮತ್ತೊಮ್ಮೆ ಶಂಕರಾಚಾರ್ಯರ ಚಿಂತನೆಗಳಿಂದಲೇ ಎಲ್ಲರಿಗೂ ಕಲ್ಯಾಣವನ್ನು ತರುತ್ತವೆ. ವಿಶ್ವದಲ್ಲಿ ಅತಿ ಹೆಚ್ಚು ಹಿಂದೂಗಳಿರುವ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಭಾರತವು ದಿವ್ಯ ದೇಶವಾಗಿದೆ ಮತ್ತು ಯಾವಾಗಲೂ ಜ್ಞಾನದ ಹರಿವು ಇದೆ. ಆದ್ದರಿಂದ ಜಗತ್ತಿಗೆ ಕಲ್ಯಾಣವಾಗುತ್ತದೆ.” ಎಂದು ಹೇಳಿದರು.