ಕಾಂಗ್ರೆಸ್ ದಿಗ್ವಿಜಯ ಸಿಂಹ ಇವರ ಸರ್ಜಿಕಲ್ ಸ್ಟ್ರೈಕ್ ವಿರೋಧಿ ಹೇಳಿಕೆಯ ಕುರಿತು ಕಾಂಗ್ರೆಸ್ಸಿನ ಸ್ಪಷ್ಟೀಕರಣ !

ಸೇನೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆ – ರಾಹುಲ ಗಾಂಧಿ

ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಹ

ಜಮ್ಮೂ- ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಹ ಇವರು 2016 ರಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ `ಸರ್ಜಿಕಲ್ ಸ್ಟ್ರೈಕ್’ ಮೇಲೆ ಸಂಶಯವನ್ನು ವ್ಯಕ್ತಪಡಿಸುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿಯವರು ಮಾತನಾಡುತ್ತಾ, ದಿಗ್ವಿಜಯ ಸಿಂಹ ಇವರು `ಸರ್ಜಿಕಲ್ ಸ್ಟ್ರೈಕ್’ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ನಾನು ಅಸಧಾನವನ್ನು ವ್ಯಕ್ತಪಡಿಸುತ್ತೇನೆ. ನನಗೆ ನಮ್ಮ ಸೈನ್ಯದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸೈನ್ಯವು ಏನು ಮಾಡಿದರೂ, ಅದಕ್ಕೆ ಸಾಕ್ಷಿ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ದಿಗ್ವಿಜಯ ಸಿಂಹ ಇವರು `ಭಾರತ ಜೊಡೊ’ ಯಾತ್ರೆಯಲ್ಲಿ, `ಸರಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಗ್ಗೆ ಸಾಕ್ಷಿಗಳನ್ನು ಇದುವರೆಗೂ ಕೊಟ್ಟಿಲ್ಲ’, ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯಿಂದ ವಿವಾದ ನಿರ್ಮಾಣವಾದಾಗ ಸಿಂಹ ಇವರು` ನಾವು ಭಾರತೀಯ ಸೈನ್ಯವನ್ನು ಗೌರವಿಸುತ್ತೇವೆ ಮತ್ತು ಅವರು ನಮಗೆ ಸರ್ವಸ್ವವಾಗಿದ್ದಾರೆ’ ಎಂದು ಯೂ-ಟರ್ನ ಮಾಡಿದರು.

ಸಂಪಾದಕರ ನಿಲುವು

ಭಾರತೀಯ ಸೈನ್ಯ ನಡೆಸಿದ್ದ `ಸರ್ಜಿಕಲ್ ಸ್ಟ್ರೈಕ್’ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದ ದಿಗ್ವಿಜಯ ಸಿಂಹ ಇವರ ಮೇಲೆ ಪಕ್ಷವು ಯಾವ ಕ್ರಮವನ್ನು ಕೈಕೊಳ್ಳಲಿದೆ?’ ಎನ್ನುವುದನ್ನೂ ಕಾಂಗ್ರೆಸ್ಸಿಗರು ಜನತೆಗೆ ತಿಳಿಸಬೇಕು !