ಬಿಲಾವಲ ಭುಟ್ಟೋರ ಸಹೋದರಿ ಫಾತಿಮಾ ಭುಟ್ಟೋ ತನ್ನ ನಿಕಾಹವಾದ ಬಳಿಕ ಮಹಾದೇವ ದೇವಸ್ಥಾನಕ್ಕೆ ಹೋಗಿ ದರ್ಶನ ತೆಗೆದುಕೊಂಡಳು !

ಕರಾಚಿ – ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರ ಸಹೋದರಿ ಫಾತಿಮಾ ಭುಟ್ಟೋ ನಿಕಾಹ ಮಾಡಿಕೊಂಡ ಬಳಿಕ ಪತಿ ಗ್ರಾಹಂ ಜಿಬ್ರಾನ್ ನೊಂದಿಗೆ ಅಲ್ಲಿಯ ಐತಿಹಾಸಿಕ ಮಹಾದೇವ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಶ್ಚರ್ಯ ವ್ಯಕ್ತ ಪಡಿಸಲಾಗುತ್ತಿದೆ. 40 ವರ್ಷದ ಫಾತಿಮಾ ಪಾಕಿಸ್ತಾನದ ದಿವಂಗತ ಪ್ರಧಾನಮಂತ್ರಿ ಜುಲ್ಫಿಕರ ಅಲಿ ಭುಟ್ಟೋ ಇವರ ಮೊಮ್ಮಗಳು ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೆನಜೀರ ಭುಟ್ಟೋ ಇವರ ಸೋದರ ಸೊಸೆಯಾಗಿದ್ದಾಳೆ. ಫಾತಿಮಾಳ ಪತಿ ಗ್ರಾಹಂ ಕ್ರಿಶ್ಚಿಯನ್ ಆಗಿದ್ದು, ಅಮೇರಿಕಾ ನಾಗರಿಕನಾಗಿದ್ದಾನೆ. ಈ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ಅವರು ಹಾಲಿನ ಅಭಿಷೇಕವನ್ನು ಮಾಡಿದರು. ಈ ಪ್ರಸಂಗದಲ್ಲಿ ಅವರೊಂದಿಗೆ ಸಹೋದರ ಜುಲ್ಫಿಕರ ಅಲಿ ಭುಟ್ಟೋ (ಜ್ಯೂನಿಯರ) ಮತ್ತು ಕೆಲವು ಹಿಂದೂ ಮುಖಂಡರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವ ಪಾಕಿಸ್ತಾನದ ಮುಸಲ್ಮಾನ ಮುಖಂಡರು ದೇವಸ್ಥಾನದ ಮೇಲೆ ನಡೆಯುವ ದಾಳಿಗಳನ್ನು ತಡೆಯಲು ಏನನ್ನೂ ಮಾಡುವುದಿಲ್ಲ, ಎನ್ನುವುದನ್ನು ಗಮನಿಸಬೇಕು !