ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ನೌಕಾದಳದ ಉಪಸ್ಥಿತಿಯಿಂದ ಯುದ್ಧದ ಸಾಧ್ಯತೆ ನಿರಾಕರಿಸಲಾಗದು ! – ನೌಕಾದಳದ ಮುಖ್ಯಸ್ಥ ಹರಿ ಕುಮಾರ

ನೌಕಾದಳದ ಮುಖ್ಯಸ್ಥ ಹರಿ ಕುಮಾರ

ನವ ದೆಹಲಿ – ಹಿಂದೂ ಮಹಾಸಾಗರದಲ್ಲಿ ಚೀನಾದ ೩ ರಿಂದ ೬ ಯುದ್ಧ ನೌಕೆಗಳು ಒಂದೇ ಸಮಯದಲ್ಲಿ ನೇಮಿಸಲಾಗಿದೆ. ಇವುಗಳಲ್ಲಿ ಕೆಲವು ಒಮಾನ್ ಕೊಲ್ಲಿಯಲ್ಲಿ ಹಾಗೂ ಕೆಲವು ಮಹಾಸಾಗರದ ಪೂರ್ವಕ್ಕೆ ಇದೆ. ಹಾಗೂ ಕೆಲವು ಚೀನಿ ಸಂಶೋಧಕ ನೌಕೆ ಮತ್ತು ಮೀನುಗಾರಿಕೆಯ ನೌಕೆ ಮಹಾಸಾಗರದಲ್ಲಿ ನೆಲೆ ಹೂಡಿವೆ. ಪಾಕಿಸ್ತಾನ ಸಹಿತ ಅನೇಕ ದೇಶದ ಬಂದರಗಳ ಹತ್ತಿರ ಚೀನಾದ ಯುದ್ಧ ನೌಕೆಗಳು ಇವೆ. ಈ ಎಲ್ಲರ ಮೇಲೆ ಭಾರತೀಯ ನೌಕಾದಳದ ಹದ್ದಿನ ಕಣ್ಣು ಇಡಲಾಗಿದೆ. ಇಂತಹದರಲ್ಲಿ ಸಂಘರ್ಷದ ಅಪಾಯ ಬಹಳ ಕಡಿಮೆ ಇದೆ; ಆದರು ಕೂಡ ನಾವು ಯುದ್ಧದ ಸಾಧ್ಯತೆ ನಿರಾಕರಿಸಲಾಗುದು ಎಂದು ಭಾರತೀಯ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಹರಿ ಕುಮಾರ ಇವರು ‘ಚಾಣಕ್ಯ ಡೈಲಾಗ್’ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ನೌಕಾದಳದ ಮುಖ್ಯಸ್ಥ ಹರಿ ಕುಮಾರ್ ಇವರು ಮಾತನ್ನು ಮುಂದುವರೆಸುತ್ತಾ,

೧. ಮಹಾಸಾಗರದಲ್ಲಿ ಯಾರ ಉಪಸ್ಥಿತಿ ಇದೆ ಹಾಗೂ ಅವರು ಏನು ಮಾಡುತ್ತಿದ್ದಾರೆ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಇದರ ಮೇಲೆ ಸತತವಾಗಿ ಕಾವಲು ಇರಿಸಲಾಗಿದೆ ಮತ್ತು ನಾವು ವಿಮಾನ, ಡ್ರೋನ್, ಯುದ್ಧ ನೌಕೆ, ಜಲಾಂತರಗಾಮಿ ನೇಮಕಗೊಳಿಸುತ್ತಿದ್ದೇವೆ.

೨. ಪಾಕಿಸ್ತಾನ ವೇಗವಾಗಿ ತನ್ನ ನೌಕಾದಳದ ಅಭಿವೃದ್ಧಿ ಪಡಿಸುತ್ತಿದೆ ಮತ್ತು ಅದರ ಹೊಸ ಹೊಸ ಯುದ್ಧ ನೌಕೆಗಳನ್ನು ಸಮಾವೇಶಗೊಳಿಸುತ್ತಿದೆ. ಚೀನಾ ಕೂಡ ಕಳೆದ ೧೦ ವರ್ಷದಲ್ಲಿ ಅನೇಕ ಯುದ್ಧ ನೌಕೆ ಮತ್ತು ಜಲಾಂತರಗಾಮಿ ಅವರ ನೌಕಾದಳದಲ್ಲಿ ಸಮಾವೇಶಗೊಳಿಸಿದೆ. ಚೀನಾ ವಿಮಾನ ಸಾಗಿಸುವ ಯುದ್ಧ ನೌಕೆಯ ಮೇಲೆ ಕೆಲಸ ಮಾಡುತ್ತಿದೆ. ಚೀನಾ ಅನೇಕ ದೊಡ್ಡ ವಿದ್ವಾಂಸಕ ಯುದ್ಧ ನೌಕೆ ಕೂಡ ಅಭಿವೃದ್ಧಿ ಪಡಿಸುತ್ತಿದೆ. ಅದನ್ನು ಚೀನಾ ನೌಕಾದಳದಲ್ಲಿ ಬೇಗನೆ ಸಮಾವೇಶಗೊಳಿಸಬಹುದು.