ಸಾಧಕರೇ, ಆಪತ್ಕಾಲದ ಪೂರ್ವಸಿದ್ಧತೆಗಾಗಿ ತಮ್ಮ ಜಿಲ್ಲೆಯಲ್ಲಿನ ಅತ್ಯಗತ್ಯ ಸೇವೆಗಳ ಸಂಪರ್ಕ ಸಂಖ್ಯೆಗಳು, ಹಾಗೆಯೇ ಜಾಲತಾಣಗಳ ‘ಲಿಂಕ್ಗಳನ್ನು ಆದ್ಯತೆಯಿಂದ ತಮ್ಮಲ್ಲಿ ನೋಂದಣಿ ಮಾಡಿ ಇಡಿ !

ಸಾಧಕರಿಗಾಗಿ ಮಹತ್ವದ ಸೂಚನೆ !

‘ಪ್ರತಿದಿನ ಘಟಿಸುವ ಹೆಚ್ಚಾಗುತ್ತಿರುವ ದುರ್ಘಟನೆಗಳು, ವಿವಿಧ ಆಪತ್ತು ಇತ್ಯಾದಿಗಳಿಂದ ಭೀಕರ ಆಪತ್ಕಾಲವು ಅನುಭವಕ್ಕೆ ಬರುತ್ತಿದೆ. ಆಪತ್ಕಾಲದಲ್ಲಿ ವ್ಯಕ್ತಿಗೆ ತಕ್ಷಣ ಯಾವುದೇ ಸೇವೆಯ ಆವಶ್ಯಕತೆ ಎದುರಾಗಬಹುದು. ಇದಕ್ಕಾಗಿ ತಮ್ಮ ಜಿಲ್ಲೆಯ ಮತ್ತು ಸ್ಥಳೀಯ ಸ್ತರದ ಎಲ್ಲ ಅತ್ಯಗತ್ಯ ಸೇವೆಗಳ ಸಂಪರ್ಕ ಸಂಖ್ಯೆಗಳನ್ನು ಎಲ್ಲರೂ ತಮ್ಮ ಬಳಿಯಲ್ಲಿ ಸುರಕ್ಷಿತವಾಗಿಡಬೇಕು, ಉದಾ. ಸ್ಥಳೀಯ ಪೊಲೀಸ್ ಠಾಣೆ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ಆಸ್ಪತ್ರೆಗಳು, ಬ್ಲಡ್ ಬ್ಯಾಂಕ್ ಗಳು, ಶಾರೀರಿಕ ಪರೀಕ್ಷಾ ಕೇಂದ್ರಗಳು (ಡೈಗ್ನೋಸ್ಟಿಕ್ ಸೆಂಟರ್), ‘ಪೆಥಾಲಾಜಿಕಲ್ ಲ್ಯಾಬೋರೆಟರಿ ಇತ್ಯಾದಿಗಳ ಸಂಪರ್ಕ ಸಂಖ್ಯೆಗಳು, ಹಾಗೆಯೇ ಅವುಗಳ ಜಾಲತಾಣಗಳ ‘ಕೊಂಡಿಗಳು ಇವುಗಳ ಕುರಿತು ಮಾಹಿತಿಯು ಆಪತ್ಕಾಲೀನ ಸಹಾಯದ ದೃಷ್ಟಿಯಲ್ಲಿ ಎಲ್ಲರ ಬಳಿಯಲ್ಲಿರುವುದು ಮಹತ್ವದ್ದಾಗಿದೆ.

ಮೇಲೆ ನಮೂದಿಸಿದ ಎಲ್ಲ ಅತ್ಯಗತ್ಯ ಮಾಹಿತಿಗಳು ‘ಜಿಲ್ಲಾ ವಿಪತ್ತು ನಿರ್ವಹಣೆ ಕೇಂದ್ರದಲ್ಲಿ ಲಭ್ಯವಿರುತ್ತದೆ. ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕೇಂದ್ರವು ಕಾರ್ಯನಿರತವಾಗಿರುತ್ತದೆ. ಈ ಮಾಹಿತಿಗಳನ್ನು ಪಡೆಯುವ ದೃಷ್ಟಿಯಿಂದ ಜಿಲ್ಲೆಯ ಜವಾಬ್ದಾರಿ ಸಾಧಕರು ಮುಂದಿನಂತೆ ಆಯೋಜನೆಯನ್ನು ಮಾಡಬೇಕು.

೧. ಜವಾಬ್ದಾರಿ ಸಾಧಕರು ತಮ್ಮತಮ್ಮ ಜಿಲ್ಲೆಯಲ್ಲಿನ ೧-೨ ಸಾಧಕರನ್ನು ‘ಜಿಲ್ಲೆ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡುವ ಆಯೋಜನೆಯನ್ನು ಮಾಡಬೇಕು.

೨. ಭೇಟಿ ನೀಡುವ ಸಾಧಕರು ಮೇಲೆ ನಮೂದಿಸಿದ ಮಾಹಿತಿಗಳನ್ನು, ಇತರ ಎಲ್ಲ ಆಪತ್ಕಾಲೀನ ಸಂಪರ್ಕ ಸಂಖ್ಯೆಗಳು, ಆಪತ್ಕಾಲೀನ ವ್ಯವಸ್ಥೆಗಳ ಜಾಲತಾಣಗಳ ‘ಲಿಂಕ್ಗಳು ಇತ್ಯಾದಿ ಅತ್ಯಗತ್ಯ ಮಾಹಿತಿಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದಿಂದ ತಕ್ಷಣ ಪಡೆಯಬೇಕು.

೩. ಈ ಮಾಹಿತಿಗಳು ‘ಸಾಫ್ಟ್ ಕಾಪಿ ಅಥವಾ ಪ್ರಿಂಟ್ ಸ್ವರೂಪದಲ್ಲಿ ಲಭ್ಯವಿದ್ದರೆ ಎರಡೂ ಸ್ವರೂಪಗಳಲ್ಲಿ ಅವುಗಳನ್ನು ಪಡೆಯಲು ಪ್ರಯತ್ನಿಸಬೇಕು.

೪. ಮಾಹಿತಿಗಳು ದೊರೆತ ನಂತರ ಅವುಗಳನ್ನು ಜಿಲ್ಲೆಯ ಎಲ್ಲ ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಕೊಡಬೇಕು. ‘ಸಾಫ್ಟ್ ಅಥವಾ ‘ಹಾರ್ಡ್ ಕಾಪಿಗಳಲ್ಲಿ ಎಲ್ಲರಿಗೂ ಮಾಹಿತಿಯನ್ನು ಸಿಕ್ಕಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

೫. ಜಿಲ್ಲೆಯಲ್ಲಿನ ಎಲ್ಲ ಸಾಧಕರು ಈ ಮಾಹಿತಿಯನ್ನು ತಮ್ಮ ಸಂಚಾರವಾಣಿ, ಹಾಗೆಯೇ ಸಂಚಾರಿಗಣಕಯಂತ್ರಗಳಲ್ಲಿ ಸುರಕ್ಷಿತವಾಗಿಡಬೇಕು. ಈ ಎಲ್ಲ ಮಾಹಿತಿಯು ತಮ್ಮ ಕುಟುಂಬದಲ್ಲಿನ ಎಲ್ಲರ ಬಳಿ ಇರಬೇಕು, ಆ ದೃಷ್ಟಿಯಲ್ಲಿ ಎಲ್ಲ ಮಾಹಿತಿ ಯನ್ನು ಪುಸ್ತಕದಲ್ಲಿಯೂ ನೋಂದಣಿ ಮಾಡಿಡಬೇಕು.

ಸಾಧಕರೇ, ಆಪತ್ಕಾಲದಲ್ಲಿ ತಮ್ಮ ಮತ್ತು ಕುಟುಂಬದವರ ರಕ್ಷಣೆಯಾಗಲು ಯೋಗ್ಯ ಕ್ರಿಯಮಾಣಗಳನ್ನು ಉಪಯೋಗಿಸಿ ಆವಶ್ಯಕವಾಗಿರುವ ಪೂರ್ವಸಿದ್ಧತೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಡಿ !

(೨೮.೩.೨೦೨೩)