ದಿ ಕೇರಳ ಸ್ಟೋರಿ’ ಚಲನಚಿತ್ರ ವಿರೋಧಿಸುವುದರ ಹಿಂದೆ ಷಡ್ಯಂತ್ರ ! – ನಿರ್ಮಾಪಕ ವಿಫುಲ ಶಹಾ

ವೀಕ್ಷಕರಿಗೆ ಷಡ್ಯಂತ್ರದ ಕಡೆಗೆ ನಿರ್ಲಕ್ಷಿಸುವಂತೆ ಕರೆ !

ನಿರ್ಮಾಪಕ ವಿಫುಲ ಶಹಾ

ಮುಂಬಯಿ – ‘ದೀ ಕೆರಳ ಸ್ಟೋರಿ’ ಈ ಚಲನಚಿತ್ರ ಒಂದು ‘ಅಜೆಂಡ ‘ (ನೀತಿ) ಆಗಿದೆ, ಹೀಗೆ ಇರದೆ ಚಲನಚಿತ್ರದಲ್ಲಿ ತೋರಿಸಲಾದ ವಸ್ತುಸ್ಥಿತಿ ಹೇಗೆ ಮುಚ್ಚಬೇಕು ? ಅದಕ್ಕೆ ಇದನ್ನು ವಿರೋಧಿಸುವ ಅಜೆಂಡ ಎಂದು ನನಗೆ ಅನಿಸುತ್ತದೆ. ಆದ್ದರಿಂದ ವೀಕ್ಷಕರು ಇಂತಹವರ ಷಡ್ಯಂತ್ರದ ಕಡೆಗೆ ಮತ್ತು ಚಲನಚಿತ್ರದಿಂದ ನಿರ್ಮಾಣ ಮಾಡಲಾದ ವಿವಾದದ ಕಡೆಗೆ ಗಮನ ನೀಡಬಾರದು. ನಾವು ಈ ಚಲನಚಿತ್ರಕ್ಕಾಗಿ ಸಂಶೋಧನೆ ಮಾಡುತ್ತಿರುವಾಗ ನಮಗೆ ಮೋಸ ಮಾಡಿ ಮತಾಂತರಗೊಳಿಸಲಾಗಿದ್ದ ನೂರಾರು ಹುಡುಗಿಯರು ಸಿಕ್ಕಿದರು. ಹಾಗಾದರೆ ಈ ಚಲನಚಿತ್ರ ನಕಲಿ ಹೇಗೆ ಹೇಳಲಾಗುತ್ತಿದೆ ? ಪ್ರತಿಯೊಬ್ಬರಿಗೆ ತಮ್ಮದೇ ಆದ ದೃಷ್ಟಿಕೋನ ಇರುತ್ತದೆ; ಆದರೆ ನಾವು ಸತ್ಯದ ಬೆಂಬಲಕ್ಕೆ ನಿಂತಿದ್ದೇವೆ, ಎಂದು ‘ದಿ ಕೇರಳ ಸ್ಟೋರಿ’ ಚಲನಚಿತ್ರದ ನಿರ್ಮಾಪಕ ವಿಫುಲ ಅಮೃತ ಲಾಲ ಶಹಾ ಇವರು ‘ಎಬಿಪಿ’ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಖಂಡತುಂಬವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

(ಸೌಜನ್ಯ : ABP NEWS)

‘ದಿ ಕೇರಳ ಸ್ಟೋರಿ’ ಈ ಚಲನಚಿತ್ರದಲ್ಲಿ ‘ಲವ್ ಜಿಹಾದ್’ಗೆ ಬಲಿಯಾಗಿರುವ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರ ಕಥೆ ತೋರಿಸಲಾಗಿದೆ. ಈ ಚಲನಚಿತ್ರಕ್ಕೆ ವಿರೋಧ ಕೂಡ ಆಗುತ್ತಿದೆ. ಅದಕ್ಕಾಗಿ ಶಹಾ ಇವರಿಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವಾಗ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಚಲನಚಿತ್ರ ಮೇ ೫ ರಂದು ಪ್ರದರ್ಶನ ಗೊಳ್ಳುವುದು.

೧ .ಶಹಾ ಮಾತು ಮುಂದುವರಿಸಿ, ಈ ಚಲನಚಿತ್ರ ೩ ಹುಡುಗಿಯರ ಸತ್ಯ ಕಥೆಯ ಆಧಾರಿತವಾಗಿದೆ. ಇದು ೩ ಹುಡುಗಿಯರ ಕಥೆಯಾಗಿದ್ದರೇ ಅದು ಅಜೆಂಡ ಹೇಗೆ ಆಗಲು ಸಾಧ್ಯ ? ಇದಕ್ಕೆ ಯಾರು ಉತ್ತರ ನೀಡಲು ಸಾಧ್ಯವಿಲ್ಲ. ಈ ಚಲನಚಿತ್ರದಲ್ಲಿನ ಪ್ರತಿಯೊಂದು ಪ್ರಸಂಗ ಮತ್ತು ವಾಕ್ಯ ಸತ್ಯವಾಗಿದೆ.

೨. ಈ ಚಲನಚಿತ್ರ ನಿರ್ಮಾಣದ ಕಲ್ಪನೆ ಎಲ್ಲಿಂದ ಬಂದಿತು ? ಈ ಪ್ರಶ್ನೆಗೆ ಶಹಾ ಇವರು, ನನ್ನ ಬಳಿ ಒರ್ವ ನಿರ್ದೇಶಕರಿದ್ದಾರೆ, ಅವರು 3 ವರ್ಷಗಳ ಹಿಂದೆ ನನಗಾಗಿ ಸಂಹಿತೆ ತಂದಿದ್ದರು. ಅದರಲ್ಲಿ ಬಹಳಷ್ಟು ಸಂಶೋಧನೆ ಮಾಡಿ ಅದರ ಸಾಕ್ಷಚಿತ್ರ ತಯಾರಿಸಿದೆವು. ನಂತರ ನಾವು ಮತ್ತೆ ಸಂಶೋಧನೆ ನಡೆಸಿದೆವು. ನಮ್ಮ ಲೇಖನದಲ್ಲಿ ಸುಳ್ಳು ಇರಬಾರದೆಂದು ವರ್ಷವಿಡಿ ಸಂಶೋಧನೆ ನಡೆಸಿದೆವು. ಈ ಪ್ರಶ್ನೆ ನಮ್ಮ ದೇಶದ ಹುಡುಗಿಯರಾಗಿದೆ, ಆದ್ದರಿಂದ ಜನರು ನಮಗೆ ಹೀಗೇನು ನಡೆದೇ ಇಲ್ಲ ಹೇಳುವಂತೆ ಏನು ಮಾಡಿಲ್ಲ. ನಾವು ಸಂಹಿತೆ ಪೂರ್ಣವಾದ ನಂತರ ಈ ಚಲನಚಿತ್ರ ನಿರ್ಮಾಣದ ನಿರ್ಣಯ ತೆಗೆದುಕೊಂಡೆವು. ಈ ಚಲನಚಿತ್ರ ತಯಾರಿಸಲು ನಮಗೆ ಮೂರುವರ್ಷ ಹಿಡಿಯಿತು.

ಸಂಪಾದಕೀಯ ನಿಲುವು

ಈ ಚಲನಚಿತ್ರಕ್ಕೆ ವಿರೋಧ ವ್ಯಕ್ತ ಪಡಿಸುವವರಿಗೆ ಜಿಹಾದಿ ಭಯೋತ್ಪಾದಕರ ಬೆಂಬಲವಿದ್ದು ಕೇಂದ್ರ ಸರಕಾರ ಅವರನ್ನು ಹುಡುಕಿ ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಪ್ರಯತ್ನ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !