ಆಯುರ್ವೇದದಲ್ಲಿನ ಬಹುಪಯೋಗಿ ‘ಶತಧೌತ ಘೃತ’ !

(ಶತಧೌತ ಘೃತ ಎಂದರೆ ೧೦೦ ಸಲ ತೊಳೆದ ತುಪ್ಪ)

೧. ವಿವಿಧ ‘ಕ್ರೀಮ್ಸ’ಗಳಿಂದ ತುಂಬಿದ ವಿದೇಶದಿಂದ ಬಂದ ‘ಮೇಕಪ್ ಪೆಟ್ಟಿಗೆ’ ಮತ್ತು ಅದರ ಮೇಲಾದ ನಮ್ಮ ಚರ್ಚೆ !

‘ಡಿಸೆಂಬರ ತಿಂಗಳು ವಿದೇಶಗಳಲ್ಲಿರುವ ನೆಂಟರು ಸ್ವದೇಶಕ್ಕೆ ಬರುವ ಕಾಲವಾಗಿರುತ್ತದೆ. ಆಗ ಅಲಿಬಾಬಾನ ಗುಹೆಯ ಹಾಗೆ ವಿಸ್ಮಯಕಾರಕ (ಆಶ್ಚರಕಾರಕ) ವಸ್ತುಗಳು ಅವರ ಸಾಮಾನಗಳಿಂದ ಹೊರಗೆ ಬರುತ್ತವೆ. ಅವು ಎಷ್ಟು ಚಿತ್ರವಿಚಿತ್ರ, ಕಾಣಿಸಲು ಸುಂದರ, ಮೃದು ಮತ್ತು ಆಕರ್ಷಕವಾಗಿರುತ್ತವೆ ಎಂದರೆ, ಅವುಗಳ ಆವಶ್ಯಕತೆ, ಉಪಯೋಗ, ಲಾಭ, ಹಾನಿ, ಇವೆಲ್ಲವುಗಳ ವಿಚಾರ ಮಾಡಲು ಬುದ್ಧಿ ತನ್ನ ಜಾಗದಲ್ಲಿ ಇರುವುದೇ ಇಲ್ಲ. ‘ವಿದೇಶಗಳಲ್ಲಿನ ವಸ್ತುಗಳ ಗುಣಮಟ್ಟವನ್ನು ನೋಡಿರಿ ಎಷ್ಟು ಚನ್ನಾಗಿರುತ್ತವೆ !’, ಹೀಗೆ ಒಂದು ಅನಾವಶ್ಯಕ ಪ್ರಮಾಣ ಪತ್ರವನ್ನು ನಾವೇ ಕೊಡುತ್ತವೆ.

ತಯಾರಿಸುವ ವಿಧಾನ

(ಸೌಜನ್ಯ : Shalini’s Traditional Recipes)

ಹಿಗೆಯೇ ಒಂದು ಮನೆಯಲ್ಲಿ ವಿದೇಶದಿಂದ ಒಂದು ‘ಮೇಕಪ್ ಪೆಟ್ಟಿಗೆ’ ಬಂದಿತ್ತು. ನಾನು ಅವರನ್ನು ಭೇಟಿಯಾಗಲು ಹೋಗಿದ್ದೆ, ಆಗ ಅವರು ನನಗೆ ಅದನ್ನು ತುಂಬಾ ಸ್ತುತಿಮಾಡಿ ತೋರಿಸಿದರು. ಪ್ರಾಚಿಯಂತು ಬಹಳ ಆನಂದದಲ್ಲಿದ್ದಳು. ಅವಳ ಗೆಳತಿಯರ ಮುಂದೆ ಅದರ ಬಗ್ಗೆ ಜಂಬಕೊಚ್ಚಿಕೊಂಡಾಗಿತ್ತು. ಮುಂದೆ ಮದುವೆ ಕಾರ್ಯದಲ್ಲಿ ಇದರ ಒಳ್ಳೆಯ ಉಪಯೋಗ ವಾಗುವುದೆಂದು ಕನಸನ್ನೂ ಕಂಡಾಗಿತ್ತು. ಅದರಲ್ಲಿನ ಬಣ್ಣ ಬಣ್ಣದ ಪಟ್ಟಿಗಳ ಹೊರತಾಗಿ ನನ್ನ ಗಮನವು ಅದರಲ್ಲಿನ ವಿವಿಧ ಕ್ರೀಮ್ಸಗಳ ಡಬ್ಬಿಗಳಕಡೆಗೆ ಹೋಯಿತು ! ಅಬ್ಬಾ ! ಅದೆಷ್ಟು ಪ್ರಕಾರದ ಕ್ರೀಮ್ಸಗಳು ! ಬೆಳಗ್ಗೆ, ರಾತ್ರಿ, ಸ್ನಾನದ ಮೊದಲು, ಸ್ನಾನದ ನಂತರ, ಮುಖಕ್ಕೆ, ಕೈಗೆ, ಕಾಲಿಗೆ, ಹಿಮ್ಮಡಿಗಳಿಗೆ, ಉಗುರುಗಳಿಗೆ, ತುಟಿಗಳಿಗೆ….? ಆದರೆ ನಾನೇನಂತಿನಿ ? ಇವೆಲ್ಲ ‘ಕೆಮಿಕಲ್ಸಗಳಾಗಿವೆ’, ಅಂದರೆ ಅಪಾಯಕಾರಿ ಯಾಗಿವೆ ಅಲ್ಲವೇನರೀ ? ಕನಿಷ್ಠ ಪಕ್ಷ ಪ್ರತಿದಿನವಾದರೂ ಬಳಸಬಾರದಲ್ವಾ? ಎಂದು ಪ್ರಾಚೀಯ ತಾಯಿ ನಡುವೆ ಬಾಯಿ ಹಾಕಿದಳು.

ವೈದ್ಯೆ ಸುಚಿತ್ರಾ ಕುಲಕರ್ಣಿ

ಪ್ರಾಚಿಯ ತಾಯಿ ನೇರವಾಗಿ ನನ್ನ ಹೆಗಲಮೇಲೆ ಬಂದೂಕವನ್ನಿಟ್ಟು ಶತ್ರುವಿನ ಮೇಲೆ ಗುರಿಯಿಟ್ಟಳು. ಪ್ರಾಚೀ, “ಸುಮ್ಮನಿರು ಅಮ್ಮಾ ನೀನು ಏನಾದರೊಂದು ಮಾತಡಬೇಡ ! (ಈ ಶಬ್ದಗಳು ಮತ್ತು ಈ ಧ್ವನಿ (ಪದ್ಧತಿ) ಈಗ ಮನೆಮನೆಗಳಲ್ಲಿ ಪರಿಚಿತವಾಗಿವೆ.) ಅತ್ತೆ, ಇಷ್ಟು ದುಬಾರಿ ಪೆಟ್ಟಿಗೆಯನ್ನು ತಂದಿದ್ದಾಳೆ ಹಾಗೂ ಅದು ಒಳ್ಳೆಯ ಗುಣಮಟ್ಟದ್ದೂ ಆಗಿದೆ. ಹಾಗೆಯೇ ಇಟ್ಟು ಅದರ ಪೂಜೆ ಮಾಡುವುದೇನು ? ಒಂದು ವರ್ಷದಲ್ಲಿಯೇ ಇದರಲ್ಲಿರುವ ಎಲ್ಲ ವಸ್ತುಗಳ ‘ಡೇಟ-ಬಾರ’ (ಉಪಯೋಗಿಸುವ ಕಾಲಾವಧಿ) ಆಗಿ ಅವು ಉಪಯೋಗಕ್ಕೆ ಬಾರದಂತಾಗುತ್ತವೆ. ‘ದುಬಾರಿ ವಸ್ತುಗಳು ವ್ಯರ್ಥವಾದವು’, ಎನ್ನುತ್ತಾ ನೀನೇ ಆಗ ನಿಟ್ಟುಸಿರು ಬಿಡುತ್ತಾ ಹೇಳುತ್ತಾ ಕುಳಿತುಕೊಳ್ಳುವಿ. ಪುಕ್ಕಟ್ಟೆ ತಲೆಶೂಲೆ ಮಾಡುತ್ತಾಳೆ !” ಪ್ರಾಚಿಯ ಸಿಡಿಮಿಡಿ ಶುರು ಆಯಿತು. ನಂತರ ನನ್ನಕಡೆ ನೋಡುತ್ತಾ ಅವಳು, “ನೀವೇ ಇವಳಿಗೆ (ಅಮ್ಮನಿಗೆ) ಸ್ವಲ್ಪ ತಿಳಿಸಿ ಹೇಳಿರಿ ಎಂದು ಹೇಳಿದಳು. ವಿದೇಶಗಳಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಮಾಡಿ ಇಂತಹ ವಸ್ತುಗಳನ್ನು ತಯಾರಿಸುತ್ತಾರೆ. ಇಡೀ ಜಗತ್ತೇ ಇವುಗಳನ್ನು ಬಳುಸುತ್ತ್ತದೆ ” ಎಂದಳು

೨. ಕೃತಕ ಸೌಂದರ್ಯಪ್ರಸಾಧನಗಳ ಬಗ್ಗೆ ಯುವತಿಗೆ ಮಾಡಿದ ಉಪದೇಶ !

“ನೊಡಮ್ಮ ಇದು ನಿನ್ನ ತಪ್ಪುತಿಳುವಳಿಕೆಯಾಗಿದೆ ! ಸೌಂದರ್ಯಪ್ರಸಾಧನಗಳಲ್ಲಿ ಯಾವ ರಸಾಯನಗಳನ್ನು ಬಳಸುತ್ತಾರೆಯೋ, ಅವುಗಳ ಮೇಲೆ ವಿಶೇಷ ಸಂಶೋಧನೆ ಜಗತ್ತಿನಲ್ಲಿ ಇನ್ನೂ ಎಲ್ಲಿಯೂ ಆಗಿಲ್ಲ. ಅವುಗಳ ಗುಣಮಟ್ಟದ ಬಗ್ಗೆಯೂ ಹೆಚ್ಚೇನು ಸಿದ್ಧವಾಗಿಲ್ಲ. ಅವುಗಳ ಮೇಲೆ ನಿಯಂತ್ರಣವನ್ನಿಡುವ ಸ್ವತಂತ್ರ ವ್ಯವಸ್ಥೆಯೂ ಇಲ್ಲ. ಆದುದರಿಂದ ಎಲ್ಲವೂ ಆನಂದವೇ ಆಗಿದೆ. ಒಮ್ಮೆ ಜಾಲತಾಣ (ಇಂಟರನೆಟ್) ಮೇಲೆ ಹೋಗಿ ಸ್ವಲ್ಪ ಅಧ್ಯಯನ (ಅಭ್ಯಾಸ) ಮಾಡು. ಅವುಗಳಲ್ಲಿನ ಎಷ್ಟೋ ರಸಾಯನಗಳು ಕರ್ಕರೋಗವನ್ನು ನಿರ್ಮಾಣ ಮಾಡುತ್ತವೆ” ಎಂದು ನಾನು ಹೇಳಿದೆ. ‘ಹಾಗೇಗೆ ಆಗುತ್ತದೆ ? ಹೀಗಿದ್ದರೆ ಅವುಗಳ ಮೇಲೆ ಪ್ರತಿಬಂಧ ಬರಬಹುದಿತ್ತಲ್ಲಾ ? ಅವಳ ತಿಳುವಳಿಕೆ ಇಲ್ಲದ ಪ್ರಶ್ನೆ !

“ಪ್ರತಿಬಂಧ ಬರುವುದಿಲ್ಲ; ಏಕೆಂದರೆ ಅಲ್ಲಿಯೂ ಭ್ರಷ್ಟಾಚಾರ ನಡೆಯುತ್ತದೆ.” ನಾನು ಸ್ವಲ್ಪದರಲ್ಲಿ ಹೇಳಿದೆ. “ಆದರೆ ಎಲ್ಲರೂ ಬಳಸುತ್ತಾರೆ… ನಟಿಯರೂ ಸಹ ಬಳಸುತ್ತಾರೆ ! ಯಾರಿಗೆ ಏನಾಗಿದೆ ?” ಹೀಗೆ ಅವಳದ್ದು ನಡೆದೇ ಇತ್ತು.

“ಮುಖಕ್ಕೆ ಬಣ್ಣಹಚ್ಚಿದ ಮೇಲೆ ನಟಿಯರು ಸುಂದರವಾಗಿಯೇ ಕಾಣಿಸುತ್ತಾರೆ. ಆಗ ಮಾತ್ರ ಅವರು ನಮ್ಮ ಮುಂದೆ ಬರುತ್ತಾರೆ. ಕಾಯಿಲೆ ಇದ್ದಾಗ ಹೇಗೆ ಬರುತ್ತಾರೆ ? ಅವರ ಕಾಯಿಲೆಗಳು ನಮಗೆ ತಿಳಿಯುವುದೂ ಇಲ್ಲ.”ನಾನು ಅವಳಿಗೆ ತಿಳಿಸಿ ಹೇಳುತ್ತಿದ್ದೆ.

“ಆಯುರ್ವೇದದಲ್ಲಿ ಇದಕ್ಕೆ ಬೇರೆ ಏನಾದರು ಪರ್ಯಾಯವಿಲ್ಲವೇನು ? ಅದೆಲ್ಲ ಹೋಗಲಿ, ಪ್ರತಿದಿನದ ಈ ನೂರು ಕ್ರೀಮ್ಸಗಳ ಬದಲಾಗಿಯಾದರು ಏನಾದರೂ ಇರಬಹುದಲ್ಲಾ ? ಪ್ರಾಚಿ ಅಂದಳು.

“ನಾವು ನಮ್ಮ ಕಾಲದಲ್ಲಿ ಎಣ್ಣೆ-ಅರಿಶಿಣ, ಹಾಲಿನ ಕೆನೆ, ಹಾಲು-ಅರಿಶಿಣ, ಹಾಲು-ಲಿಂಬೆ, ಹಾಲು-ಕಡಲೆಹಿಟ್ಟು, ಮೊಸರು ಹೀಗೆ ಏನೇನೋ ಬಳಸುತ್ತಿದ್ದೆವು. ಈಗಿನ ಹುಡುಗಿಯರಿಗೆ ಅವು ಬೇಡವಾಗಿರುತ್ತವೆ. ಒಂದೋ ಅಲಸ್ಯ ಮತ್ತು ಇನ್ನೊಂದು ಅವು ಆಕರ್ಷಕ ಕವರ್‌ನಲ್ಲಿ (ಪ್ಯಾಕಿಂಗನಲ್ಲಿ) ಬರುವುದಿಲ್ಲವಲ್ಲಾ” ? ಎಂದು, ನಾನು ಉತ್ತರ ಕೊಟ್ಟೆ.

“ಹಾಗಾದರೆ ಯಾವುದಾದರೊಂದು ಪರ್ಯಾಯವಿದ್ದರೆ ನೀವೇ ಹೇಳಿ?” ವೈದ್ಯರಿಗೆ ಯಾರು, ಯಾವಾಗ, ಹೇಗೆ ಗುಗಲಿ ಹಾಕುತ್ತಾರೆ, ಎಂಬುದು ಹೇಳಲು ಬರುವುದಿಲ್ಲ.

“ಹಾ, ಇದೆಯಲ್ಲ ! ‘ಶತಧೌತ ಘೃತ’ ನಮ್ಮದೇ ಆಗಿದೆಯಲ್ಲ. ಉತ್ತಮ ಕೆಲಸವನ್ನು ಮಾಡುತ್ತದೆ. “ಅಂದರೇನು ? ಪ್ರಾಚಿ ತಕ್ಷಣ ಕೇಳಿದಳು. “ಅಂದರೆ ೧೦೦ ಬಾರಿ ತೊಳೆದ ತುಪ್ಪ ! ಅದಕ್ಕೆ ತುಪ್ಪದ ವಾಸನೆ ಬರುತ್ತಿರಬಹುದು”.

ತುಪ್ಪ ಎಂದರೆ ಇಂದಿನ ಹೊಸ ಪೀಳಿಗೆಗೆ ಏಕೆ ಬೇಡವೆನಿಸುತ್ತದೆ, ಇದು ನನಗೆ ಒಂದು ಸಂಶೋಧನೆಯ ವಿಷಯವಾಗಿದೆ. ವಾಸನೆ ಇರುತ್ತದೆ; ಆದರೆ ಸೌಂದರ್ಯಪ್ರಸಾಧನ ಎಂದು ಉಪಯೋಗಿಸುವಾಗ ನಾವು ಅದನ್ನು ಮಾಸ್ಕ ಮಾಡುತ್ತೇವೆ. ಅದಕ್ಕೆ ಬೇಕಾದಂತಹ ಸುಗಂಧವನ್ನು ಕೊಡಲು ಬರುತ್ತದೆ. ಹೊರತಾಗಿ ‘ಕ್ರೀಮ ಬೇಸ್’ನ್ನು ಕೊಟ್ಟರೆ, ಅದರ ಜಿಡ್ಡುತನವೂ ಕಡಿಮೆಯಾಗುತ್ತದೆ.”

೩. ಶರೀರಕ್ಕಾಗಿ ಉಪಯುಕ್ತವಿರುವ ‘ಶತಧೌತ ಘೃತ’ !

“ಅದನ್ನು ಹೇಗೆ ಬಳಸಬೇಕು ?” ಪ್ರಾಚಿಯ ಅಮ್ಮನಿಗೇ ಉತ್ಸುಕತೆ ಹೆಚ್ಚು. “ರಾತ್ರಿ ಮಲಗುವ ಮೊದಲು ಅರ್ಧ ಗಂಟೆ ನೀವು ಅದನ್ನು ಮುಖಕ್ಕೆ ಮತ್ತು ಕೈ-ಕಾಲುಗಳಿಗೆ ಹಚ್ಚಬಹುದು. ಅದರಿಂದ ಚಳಿಗಾಲದಲ್ಲಿ ಚರ್ಮ ಒಡೆಯುವುದಿಲ್ಲ, ಚರ್ಮಕ್ಕೆ ನೆರಿಗೆಗಳು ಬೀಳುವುದಿಲ್ಲ, ಕಪ್ಪು ಕಲೆಗಳಿದ್ದರೆ ನಿಧಾನವಾಗಿ ಕಡಿಮೆಯಾಗುತ್ತವೆ. ಚರ್ಮವು ಮೃದು ಮತ್ತು ಗೌರವರ್ಣದ್ದಾಗುತ್ತದೆ. ಹಿಮ್ಮಡಿಗಳ ಬಿರುಕುಗಳಿಗೂ ಅದನ್ನು ಹಚ್ಚಲು ಬರುತ್ತದೆ. ಕೆಲವೊಮ್ಮೆ ಯಾವಾಗಲಾದರು ಮೇಕಪ್ ಮಾಡಿದರೆ ಅದನ್ನು ತಗೆದ ಮೇಲೆ ಮುಖ ತೊಳೆದುಕೊಂಡು ಶತಧೌತನ್ನು ಹಚ್ಚಬೇಕು. ಇಷ್ಟೇ ಏಕೆ, ಸುಟ್ಟ ಗಾಯದ ಉರಿಯುವಿಕೆ ಮತ್ತು ಸುಟ್ಟ ಗಾಯದ ಕಲೆಗಳ ಮೇಲೆಯೂ ಇದನ್ನು ಉಪಯೋಗಿಸಬಹುದು. ಎಲ್ಲಾದರೂ ಚರ್ಮವು ಉರಿಯುತ್ತಿದ್ದರೆ, ಇದರಿಂದ ಉರಿಯುವುದು ಕಡಿಮೆಯಾಗುತ್ತದೆ. ಕಣ್ಣುಗಳ ಸುತ್ತಲಿನ ಕಪ್ಪು ಕಲೆಗಳಿಗೂ ಇದು ಉಪಯೋಗಿಯಾಗಿದೆ. ನಾವು ಮಾಡಿದಷ್ಟು ಇದರ ಉಪಯೋಗವಿದೆ.”

ಪ್ರಾಚಿಯ ತಾಯಿ ಬಹಳ ಆನಂದದಿಂದ, ಹಾಗಾದರೆ “ನಾಳೆ ನಾನು ನಿಮ್ಮ ಮನೆಗೆ ಬರುತ್ತೇನೆ. ತಯಾರಿ ಇದೆಯಲ್ಲ ?” ಎಂದಳು. ಪ್ರಾಚಿಯೂ ವಿರೂಧ ಮಾಡಲಿಲ್ಲ. ಇದರಲ್ಲೇ ಅವಳ ಒಪ್ಪಿಗಿ ಇತ್ತು.

ಡಾ.-ವೈದ್ಯಾ ಸುಚಿತ್ರಾ ಕುಲಕರ್ಣೀ, ಚಿಕಿತ್ಸಕ, ಲೇಖಿಕಾ, ವ್ಯಾಖ್ಯಾತ್ಯಾ, ಸಲಹೆಗಾರರು
(ಆಭಾರ : ದೈನಿಕ ‘ತರುಣ ಭಾರತ’)