ಅಸಾತ್ತ್ವಿಕ ಮತ್ತು ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಅಸಾತ್ತ್ವಿಕ ಪೇಯ (ವೈನ್)
ಸಾತ್ತ್ವಿಕ ಪೇಯ (ಎಳನೀರು)

‘ಇತ್ತೀಚೆಗೆ ಸಮಾಜದಲ್ಲಿ ಕೃತಕ ತಂಪುಪಾನೀಯ (ಸಾಫ್ಟ ಡ್ರಿಂಕ್ಸ್)ಗಳನ್ನು ಮತ್ತು ಬಿಯರ್, ವೈನ್ (ಸರಾಯಿ) ಇವುಗಳಂತಹ ಅಸಾತ್ತ್ವಿಕ ಪಾನೀಯಗಳನ್ನು ಕುಡಿಯುವ ಪ್ರಮಾಣ ಬಹಳ ಹೆಚ್ಚಾಗಿದೆ. ಕೆಲವರು ಊಟವನ್ನು ಮಾಡುವಾಗಲೂ ಇಂತಹ ಪಾನೀಯಗಳನ್ನು ಕುಡಿಯುವುದು ಕಂಡುಬರುತ್ತದೆ. ತದ್ವಿರುದ್ಧ ಆಕಳಿನ ಹಾಲು, ಎಳನೀರು, ಹಣ್ಣುಗಳ ತಾಜಾ ರಸ ಇಂತಹ ನೈಸರ್ಗಿಕ ಹಾಗೂ ಸಾತ್ತ್ವಿಕ ಪಾನೀಯಗಳನ್ನು ಕುಡಿಯುವ ಜನರು ತುಂಬಾ ಕಡಿಮೆಯಿರುವುದು ಕಂಡುಬರುತ್ತದೆ. ನಾವು ಯಾವ ಆಹಾರಪದಾರ್ಥಗಳನ್ನು ಸೇವಿಸುತ್ತೇವೆಯೋ ಅಥವಾ ಪಾನೀಯಗಳನ್ನು ಕುಡಿಯುತ್ತೇವೆಯೋ, ಅದರಿಂದ ನಮ್ಮ ಸೂಕ್ಷ್ಮ ಊರ್ಜೆಯ ಮೇಲೆ (‘ಔರಾದ ಮೇಲೆ) ಪರಿಣಾಮವಾಗುತ್ತದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ವ್ಯಕ್ತಿಯು ಅಸಾತ್ತ್ವಿಕ ಹಾಗೂ ಸಾತ್ತ್ವಿಕ ಪಾನೀಯಗಳನ್ನು ಸೇವಿಸಿದ ನಂತರ ಅವರ ಸೂಕ್ಷ್ಮ-ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯುಎ.ಎಸ್. ಉಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆಗಳನ್ನು ಮುಂದೆ ಕೊಡಲಾಗಿದೆ. (ವ್ಯಕ್ತಿ ಅಸಾತ್ತ್ವಿಕ ಮತ್ತು ಸಾತ್ತ್ವಿಕ ಆಹಾರಪದಾರ್ಥಗಳನ್ನು ಸೇವಿಸಿದ ನಂತರ ಅವರ ಸೂಕ್ಷ್ಮ ಊರ್ಜೆಯ ಮೇಲೆ ಯಾವ ಪರಿಣಾಮವಾಗುತ್ತದೆ ? ಈ ವಿಷಯದ ಬಗ್ಗೆ ಮಾಡಿದ ಸಂಶೋಧನೆಯನ್ನು ಬೇರೆ ಲೇಖನದಲ್ಲಿ ಕೊಡಲಾಗಿದೆ.)

೧. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯ ಪ್ರಯೋಗದಲ್ಲಿ ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಪಾಲ್ಗೊಂಡಿದ್ದರು. ಈ ಪರೀಕ್ಷಣೆಯ ವಿವಿಧ ಪ್ರಕಾರದ ಪಾನೀಯಗಳನ್ನು ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ಸ್ತ್ರೀ ಮತ್ತು ಪುರುಷ ಇವರಿಗೆ ಪ್ರತಿಯೊಂದು ದಿನ ಒಂದೊಂದು ಪಾನೀಯವನ್ನು ಕುಡಿಯಲು ಕೊಡಲಾಯಿತು. ಪ್ರತಿ ದಿನ ಪಾನೀಯವನ್ನು ಕುಡಿಯುವ ಮೊದಲು ಮತ್ತು ಪಾನೀಯವನ್ನು ಕುಡಿದ ನಂತರ ಅವರಿಬ್ಬರ ಪರೀಕ್ಷಣೆಯನ್ನು ಮಾಡಲಾಯಿತು.

ಸೌ. ಮಧುರಾ ಧನಂಜಯ ಕರ್ವೆ

೧ ಅ. ಅಸಾತ್ತ್ವಿಕ ಪಾನೀಯಗಳನ್ನು ಕುಡಿದ ಮೇಲೆ ಪರೀಕ್ಷಣೆಯಲ್ಲಿನ ಸ್ತ್ರೀ ಮತ್ತು ಪುರುಷ ಇವರಲ್ಲಿ ಮೇಲೆ ಆಧ್ಯಾತ್ಮಿಕದೃಷ್ಟಿಯಿಂದ ತುಂಬಾ ನಕಾರಾತ್ಮಕ ಪರಿಣಾಮವಾಗುವುದು, ತದ್ವಿರುದ್ಧ ಸಾತ್ತ್ವಿಕ ಪಾನೀಯಗಳನ್ನು ಕುಡಿದ ಮೇಲೆ ಅವರಲ್ಲಿ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು : ಅಸಾತ್ತ್ವಿಕ ಪಾನೀಯಗಳಲ್ಲಿ ತುಂಬಾ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಸಾತ್ತ್ವಿಕ ಪಾನೀಯಗಳಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಅಸಾತ್ತ್ವಿಕ ಪಾನೀಯಗಳನ್ನು ಕುಡಿದ ಮೇಲೆ ಇಬ್ಬರಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿನ ನಕಾರಾತ್ಮಕ ಊರ್ಜೆಯ ಪ್ರಮಾಣ ತುಂಬಾ ಹೆಚ್ಚಾಯಿತು. ಅವರು ಸಾತ್ತ್ವಿಕ ಪಾನೀಯಗಳನ್ನು ಕುಡಿದ ಮೇಲೆ ಅವರಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣ ತುಂಬಾ ಕಡಿಮೆ ಆಯಿತು ಹಾಗೂ ಅವರಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೧ ಅ. ಎಮ್ಮೆಯ ಹಾಲನ್ನು ಕುಡಿದ ನಂತರ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲಾದ ಪರಿಣಾಮ : ಇತ್ತೀಚೆಗೆ ಬಹಳಷ್ಟು ಜನರು ಹಸುವಿನ ಹಾಲಿಗಿಂತ ಎಮ್ಮೆಯ ಹಾಲನ್ನು ಉಪಯೋಗಿಸುತ್ತಾರೆ. ‘ಎಮ್ಮೆಯ ಹಾಲು ಕುಡಿದ ನಂತರ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ಪ್ರಯೋಗದಲ್ಲಿ ಅಭ್ಯಸಿಸಲಾಯಿತು. ಎಮ್ಮೆಯ ಹಾಲಿನಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆ ಎರಡೂ ಕಂಡುಬಂದವು. ಪರೀಕ್ಷಣೆಯಲ್ಲಿನ ಎಮ್ಮೆಯ ಹಾಲನ್ನು ಇಬ್ಬರೂ ಕುಡಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚಾಯಿತು ಮತ್ತು ಸಕಾರಾತ್ಮಕ ಊರ್ಜೆ ಸ್ವಲ್ಪ ಕಡಿಮೆ ಆಯಿತು.

೨. ನಿಷ್ಕರ್ಷ

ಹಣ್ಣಿನ ರಸ, ಎಳನೀರು ಹಾಗೂ ಆಕಳಿನ ಹಾಲು ಇಂತಹ ಸಾತ್ತ್ವಿಕ ಪಾನೀಯಗಳ ಸೇವನೆಯಿಂದ ವ್ಯಕ್ತಿಯ ಸೂಕ್ಷ್ಮ- ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮಗಳಾಗುತ್ತವೆ. ತದ್ವಿರುದ್ಧ ಅವರು ಕೃತಕ ತಂಪುಪಾನೀಯಗಳು, ಬಿಯರ್ ಹಾಗೂ ವೈನ್ ಇಂತಹ ಅಸಾತ್ತ್ವಿಕ ಪಾನೀಯಗಳ ಸೇವನೆಯಿಂದ ಅವರ ಸೂಕ್ಷ್ಮ-ಊರ್ಜೆಯ ಮೇಲೆ ತುಂಬಾ ನಕಾರಾತ್ಮಕ ಪರಿಣಾಮವಾಗುತ್ತದೆ. ಎಮ್ಮೆಯ ಹಾಲಿಗಿಂತ ಆಕಳಿನ ಹಾಲನ್ನು ಸೇವಿಸುವುದು ಹೆಚ್ಚು ಲಾಭದಾಯಕವಾಗಿದೆ.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಸಾತ್ತ್ವಿಕ ಪಾನೀಯಗಳಲ್ಲಿನ ಚೈತನ್ಯದಿಂದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು : ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಗೆ ಚೈತನ್ಯ ಸಿಕ್ಕು ಅವಳ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ಕಡಿಮೆ ಅಥವಾ ಇಲ್ಲವಾಗುತ್ತದೆ ಮತ್ತು ಅವಳ ಸಾತ್ತ್ವಿಕತೆ ತುಂಬಾ ಹೆಚ್ಚಾಗುತ್ತದೆ. ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ಅವಳ ಶರೀರ, ಮನಸ್ಸು ಮತ್ತು ಬುದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮವಾಗಿ ಅವಳ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಉತ್ತಮವಾಗಿರುತ್ತದೆ.

೩ ಆ. ಅಸಾತ್ತ್ವಿಕ ಪಾನೀಯಗಳಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಗುವುದು : ಕೃತಕ ತಂಪುಪಾನೀಯಗಳು, ಬಿಯರ್, ವೈನ್ ಇಂತಹ ಪಾನೀಯಗಳು ಮಾನವ-ನಿರ್ಮಿತವಾಗಿವೆ. ಈ ಪಾನೀಯಗಳನ್ನು ತಯಾರಿಸುವಾಗ ಉಪಯೋಗಿಸಲಾಗುವ ಘಟಕಗಳು, ಹಾಗೆಯೇ ಪಾನೀಯಗಳನ್ನು ತಯಾರಿಸುವಾಗ ಆಗುವ ಪ್ರಕ್ರಿಯೆಯಿಂದ ಆ ಪಾನೀಯಗಳಲ್ಲಿ ತೊಂದರೆದಾಯಕ ಸ್ಪಂದನಗಳು ಆಕರ್ಷಿತಗೊಂಡು ಅವು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆ.

ಈ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯಲ್ಲಿ ತೊಂದರೆದಾಯಕ ಸ್ಪಂದನಗಳು ಉಂಟಾಗುತ್ತವೆ ಅಥವಾ ಅದರಲ್ಲಿ ತುಂಬಾ ಹೆಚ್ಚಳವಾಗುತ್ತದೆ. ಹಾಗೆಯೇ ಅವಳು ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಪರೀಕ್ಷಣೆಯಲ್ಲಿನ ಇಬ್ಬರೂ ಕೇವಲ ಒಂದೊಂದು ಸಲ ಈ ಪಾನೀಯಗಳನ್ನು ಕುಡಿದಿದ್ದರಿಂದ ಅವರ ಸೂಕ್ಷ್ಮ ಊರ್ಜೆಯ ಮೇಲೆ ಎಷ್ಟು ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಪರಿಣಾಮವಾಯಿತೆಂದು ನಾವು ಈ ಪರೀಕ್ಷಣೆಯಲ್ಲಿ ನೋಡಿದೆವು. ಈ ಪಾನೀಯಗಳನ್ನು ಮೇಲಿಂದ ಮೇಲೆ ಕುಡಿಯುವವರ ಆರೋಗ್ಯಕ್ಕಾಗಿ ಅವು ಘಾತಕವಂತು ಆಗಿವೆ; ಅವರಲ್ಲಿ ಹೆಚ್ಚಾಗಿರುವ ರಜ-ತಮಗಳಿಂದ ಅವರ ಸುತ್ತುಮುತ್ತಲಿನ ವಾತಾವರಣವೂ ಕಲುಷಿತವಾಗುತ್ತದೆ.

೩ ಇ. ಎಮ್ಮೆಯ ಹಾಲನ್ನು ಕುಡಿಯುವುದರಿಂದ ವ್ಯಕ್ತಿಯಲ್ಲಿನ ತಮೋಗುಣ ಹೆಚ್ಚಾಗುವುದು : ಹಸುವಿನಲ್ಲಿ ಈಶ್ವರೀ ತತ್ತ್ವವನ್ನು ಗ್ರಹಿಸುವ ಕ್ಷಮತೆಯಿದೆ, ಆದರೆ ಅದು ಎಮ್ಮೆಯಲ್ಲಿಲ್ಲ. ಹಸುವಿನ ಹಾಲು ಸತ್ತ್ವಗುಣಿಯಾಗಿದ್ದರೆ, ಎಮ್ಮೆಯ ಹಾಲು ತಮೋಗುಣಿಯಾಗಿದೆ. ಎಮ್ಮೆಯ ಹಾಲನ್ನು ಕುಡಿದ ಮೇಲೆ ಪರೀಕ್ಷಣೆಯಲ್ಲಿನ ಇಬ್ಬರಲ್ಲಿಯೂ ತಮೋಗುಣ ಹೆಚ್ಚಾಯಿತು. ಆದ್ದರಿಂದ ಅವರಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆ ಆಯಿತು.

ಸ್ವಲ್ಪದರಲ್ಲಿ ನಾವು ಏನು ತಿನ್ನುತ್ತೇವೆಯೋ ಮತ್ತು ಏನು ಕುಡಿಯುತ್ತೇವೆಯೋ, ಅದರಿಂದ ನಮ್ಮ ಸೂಕ್ಷ್ಮ ಊರ್ಜೆಯ ಮೇಲೆ ಪರಿಣಾಮವಾಗುತ್ತದೆ. ಎಂಬುದನ್ನು ಗಮನದಲ್ಲಿಟ್ಟು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಉತ್ತಮವಾಗಿರಬೇಕೆಂದು ಅಸಾತ್ತ್ವಿಕ ಪಾನೀಯಗಳನ್ನು ಬಿಟ್ಟು ಸಾತ್ತ್ವಿಕ ಪಾನೀಯಗಳನ್ನು ಸೇವಿಸುವುದು ಉತ್ತಮ ! ಇಷ್ಟೇ ಅಲ್ಲ, ಅಸಾತ್ತ್ವಿಕ ಜೀವನಶೈಲಿಯನ್ನು ನಿರಾಕರಿಸಿ ಸಾತ್ತ್ವಿಕ ಜೀವನಶೈಲಿಯನ್ನು ಅಳವಡಿಸಿಕೊಂಡರೆ ತಮ್ಮೊಂದಿಗೆ ಕುಟುಂಬ ಮಾತ್ರವಲ್ಲದೇ ಸಮಾಜದ ಏಳಿಗೆಯೂ  ಸಹ ಉತ್ತಮವಾಗಿ ಆಗುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧.೨೦೨೩)

ವಿ-ಅಂಚೆ : [email protected]

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.