|
ಕೊಲಂಬೊ(ಶ್ರೀಲಂಕಾ)- ಕಳೆದ ಕೆಲವು ದಿನಗಳಿಂದ ಶ್ರೀಲಂಕೆಯ ಹಿಂದೂ ದೇವಸ್ಥಾನಗಳ ಮೇಲೆ ದಾಳಿಗಳ ಘಟನೆ ನಡೆಯುತ್ತಿದ್ದು, ಈ ಮೂಲಕ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವುದು ಅಥವಾ ಕೆಲವು ಪ್ರಸಂಗಗಳಲ್ಲಿ ದೇವಸ್ಥಾನಗಳ ಮೂರ್ತಿಗಳು ಕಾಣೆಯಾಗುತ್ತಿರುವುದು ಕಂಡು ಬಂದಿದೆ. ಇದೆಲ್ಲವೂ ಶ್ರೀಲಂಕಾ ಸರಕಾರದ ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆಯೆನ್ನುವ ಮಾಹಿತಿ ಬಹಿರಂಗವಾಗಿದೆ. ಇದರಿಂದ ಇಲ್ಲಿಯ ತಮಿಳು ಹಿಂದೂಗಳಲ್ಲಿ ಆಕ್ರೋಶದ ಅಲೆಗಳು ಉಕ್ಕುತ್ತಿದ್ದು, ಇಲ್ಲಿಯ ಹಿಂದೂ ಮುಖಂಡರು ಎಪ್ರಿಲ್ 25ರಂದು ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದ್ದಾರೆ. ದೇಶದಲ್ಲಿ ವೇಗವಾಗಿ `ಸಿಂಹಳೀಕರಣ’ (ಬೌದ್ಧರಾಗಿರುವ ಸಿಂಹಳಿ ಸಮಾಜದ ಶಕ್ತಿಯನ್ನು ಹೆಚ್ಚಿಸುವುದು) ನಡೆಯುತ್ತಿದೆ ಎಂದೂ ಅವರು ಆರೋಪಿಸುತ್ತಿದ್ದಾರೆ.
Tamils in #SriLanka have witnessed an escalation in the attack on Hindu temples in recent weeks, a trend that they note is part of the State’s “ongoing Sinhalisation project” in the island’s north. @meerasrini reports https://t.co/gC1emengfr
— The Hindu (@the_hindu) April 24, 2023
1.ಶ್ರೀಲಂಕೆಯ ಉತ್ತರ ಭಾಗದಲ್ಲಿರುವ ಹಿಂದೂಬಾಹುಳ್ಯ ಜಾಫ್ನಾ ನಗರದಲ್ಲಿ ಪ್ರಮುಖವಾಗಿ ಈ ದಾಳಿಗಳಾಗುತ್ತಿವೆ ಎಂಬ ಮಾಹಿತಿಯನ್ನು `ದಿ ಹಿಂದೂ’ ಪತ್ರಿಕೆಯು ಪ್ರಕಾಶಿಸಿದ ಒಂದು ವರದಿಯಿಂದ ಬಹಿರಂಗವಾಗಿದೆ.
2.ಇಲ್ಲಿ ಕೆಲವು ತಮಿಳು ಹಿಂದೂಗಳು ಒಂದು ಸಾರ್ವಜನಿಕ ಸ್ಥಳದಲ್ಲಿ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಿರುವ ಬಗ್ಗೆ ಅಲ್ಲಿಯ ಪೊಲೀಸರು ಇದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿ ಮೂರ್ತಿಯನ್ನು ತೆಗೆದುಹಾಕುವಂತೆ ಕೋರಿದ್ದಾರೆ.
3.ಒಂದು ಕಡೆ ಹಿಂದೂ ಮಂದಿರಗಳನ್ನು ಗುರಿ ಮಾಡಲಾಗುತ್ತಿದ್ದರೆ, ಇನ್ನೊಂದೆಡೆ ಹಿಂದೂ ಬಾಹುಳ್ಯವಿರುವ ಉತ್ತರ ಶ್ರೀಲಂಕೆಯಲ್ಲಿ ಹೊಸ ಬೌದ್ಧ ಸ್ಥಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತಿದೆ. ಈ ಕ್ಷೇತ್ರದಲ್ಲಿ ಹಿಂದೂಗಳ ಬಳಿಕ ಕ್ರೈಸ್ತರ ಮತ್ತು ಮುಸಲ್ಮಾನರ ಸಂಖ್ಯೆ ಅಧಿಕವಿದ್ದು, ಬೌದ್ಧರ ಸಂಖ್ಯೆ ಅವರಿಗಿಂತಲೂ ಕಡಿಮೆಯಿದೆ.
4.ಕಳೆದ ಕೆಲವು ವರ್ಷಗಳಲ್ಲಿ ಕುರುಂಥರಮಲಯಿ ಹಾಗೂ ಮುಲ್ಲಯಿತಿವು ಇಲ್ಲಿನ ಅಯ್ಯರ ದೇವಸ್ಥಾನದಲ್ಲಿ ಬೌದ್ಧ ವಿಹಾರಗಳ ಸಂಖ್ಯೆಯಲ್ಲಿ ವೇಗವಾಗಿ ಹೆಚ್ಚಳವಾಗಿದೆ. ಸ್ಥಳೀಯ ಹಿಂದೂಗಳ ಅಭಿಪ್ರಾಯದಂತೆ ಮಾಜಿ ರಾಷ್ಟ್ರಪತಿ ಗೋಟಾಬಯಾ ರಾಜಪಕ್ಷೆ ಮತ್ತು ಅವರ ಪರಿವಾರವು ಸಿಂಹಳೀಕರಣಕ್ಕೆ ಅಧಿಕ ಬಲವನ್ನು ನೀಡಿದೆ. ಸಧ್ಯದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆಯವರು ಇದರೆಡೆಗೆ ನಿರ್ಲಕ್ಷ ತೋರುತ್ತಿದ್ದಾರೆ.
ತಮಿಳು ಹಿಂದೂಗಳ ಅಧಿಕಾರದ ಮೇಲೆ ಆಕ್ರಮಣ- ಜಾಫ್ನಾ ಶಾಸಕ ಗಜೇಂದ್ರಕುಮಾರ ಪೊನ್ನಂಬಲಮ್ಜಾಫ್ನಾ ಶಾಸಕ ಮತ್ತು `ತಮಿಳು ನ್ಯಾಷನಲ್ ಪೀಪಲ್ಸ ಫ್ರಂಟ’ ಮುಖಂಡ ಗಜೇಂದ್ರಕುಮಾರ ಪೊನ್ನಂಬಲಮ್ ಇವರು ಮಾತನಾಡುತ್ತಾ, ಪೂಜೆಯಷ್ಟೇ ಅಲ್ಲ ತಮಿಳು ಹಿಂದೂಗಳ ಅಧಿಕಾರಗಳ ಮೇಲೆಯೂ ಆಕ್ರಮಣವಾಗುತ್ತಿದೆಯೆಂದು ಹೇಳಿದ್ದಾರೆ. `ತಮಿಳು ಹಿಂದೂಗಳು ಮತ್ತು ಶ್ರೀಲಂಕನ್ ಸೈನ್ಯದ ನಡುವಿನ ಯುದ್ಧದ ಬಳಿಕ ಅಂದರೆ ಕಳೆದ 3 ದಶಕಗಳಿಂದ ಅಲ್ಲಿಯ ಸರಕಾರವು ನಿರಂತರವಾಗಿ ಉತ್ತರ ಮತ್ತು ಪೂರ್ವ ಶ್ರೀಲಂಕೆಯಲ್ಲಿ `ಸಿಂಹಳೀಕರಣ’ ಅಭಿಯಾನ ಶೀಘ್ರಗತಿಯಲ್ಲಿ ಜಾರಿಗೊಳಿಸುತ್ತಿದೆ’, ಎಂದೂ ಪೊನ್ನಂಬಲಮ್ ಹೇಳಿದ್ದಾರೆ. |
ಪ್ರಕರಣ ಹೇಗೆ ಬಯಲಾಯಿತು?ಹಿಂದೂಬಾಹುಳ್ಯವಿರುವ ಉತ್ತರ ಮತ್ತು ಪೂರ್ವ ಶ್ರೀಲಂಕೆಯಲ್ಲಿ ಪುರಾತತ್ವ ಇಲಾಖೆಯ ಹೆಚ್ಚುತ್ತಿರುವ ಕಾರ್ಯಾಚರಣೆಯಿಂದ ದೇವಸ್ಥಾನಗಳ ಮೇಲಿನ ದಾಳಿಗಳ ಘಟನಾವಳಿ ಬಹಿರಂಗವಾಯಿತು. ಸರಕಾರಿ ಅಧಿಕಾರಿಗಳು ಐತಿಹಾಸಿಕ ಸ್ಥಳಗಳ ಸಂಶೋಧನೆಯ ಕಾರಣವನ್ನು ನೀಡುತ್ತಾ ಕೆಲವು ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಪ್ರವೇಶವನ್ನು ನಿರ್ಬಂಧಿಸಿದರು. ವಾವುನಿಯಾದ ವೇದುಕ್ಕುನಾರಿಮಲಾಯಿಯಲ್ಲಿರುವ ಒಂದು ದೇವಸ್ಥಾನದಲ್ಲಿ ಪೂಜೆ ಮಾಡಲು ಹೋಗಿದ್ದ ಒಬ್ಬ ಹಿಂದೂ ಯುವಕನನ್ನು ಬಂಧಿಸಿರುವ ಮಾಹಿತಿ ಬಹಿರಂಗವಾದ ಬಳಿಕ ಅವರು ದೇವಸ್ಥಾನದ ಮೂರ್ತಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿತು. ಕಳೆದ ಕೆಲವು ತಿಂಗಳ ಹಿಂದೆ ಆ ಪ್ರದೇಶದಲ್ಲಿ ಹಿಂದೂಗಳು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. |
ಸಂಪಾದಕರ ನಿಲುವು
|