Bangladesh Muslims Fire ISKCON Temple: ಢಾಕಾದಲ್ಲಿ (ಬಾಂಗ್ಲಾದೇಶ) ಮತಾಂಧ ಮುಸಲ್ಮಾನರಿಂದ ಇಸ್ಕಾನ್ ದೇವಾಲಯಕ್ಕೆ ಬೆಂಕಿ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ನಮ್ಹಟ್ಟಾ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯದ ಮೇಲೆ ಡಿಸೆಂಬರ್ 6 ರ ತಡರಾತ್ರಿ ಮತಾಂಧ ಮುಸ್ಲಿಮರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಶ್ರೀ ಲಕ್ಷ್ಮೀ-ನಾರಾಯಣ ವಿಗ್ರಹ ಹಾಗೂ ಇತರೆ ಧಾರ್ಮಿಕ ವಸ್ತ್ರಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ರಾತ್ರಿ 2 ರಿಂದ 3ರ ಸುಮಾರಿಗೆ ದೇವಸ್ಥಾನದ ಹಿಂಭಾಗದ ಮೇಲ್ಛಾವಣಿಯ ಶೀಟ್‌ಗಳನ್ನು ತೆಗೆದು ದೇವಸ್ಥಾನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು. ಇಸ್ಕಾನ್ ಅನ್ನು ನಿಷೇಧಿಸುವ ಬೇಡಿಕೆಯನ್ನು ಢಾಕಾ ಹೈಕೋರ್ಟ್ ತಿರಸ್ಕರಿಸಿದ ನಂತರ, ಧಾರ್ಮಿಕ ಮತಾಂಧರು ಬಲವಂತವಾಗಿ ದೇವಾಲಯವನ್ನು ಮುಚ್ಚಿದ್ದರು. ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕೋಲಕಾತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ ದಾಸ್ ಇವರು, ಈ ದಾಳಿಯು ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸುರಕ್ಷತೆಯನ್ನು ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಹಾಗೂ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ.

ಈ ಮೇಲೆ ಪ್ರಕಟಿಸಿದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರಲು ಆಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು

 

ಸಂಪಾದಕೀಯ ನಿಲುವು

‘ಏಕ್ ಹೇ ತೋ ಸೀಫ್ ಹೈ’ (ನಾವು ಸಂಘಟಿತರಾಗಿದ್ದರೆ, ನಾವು ಸುರಕ್ಷಿತವಾಗಿರುತ್ತೇವೆ) ಎಂಬುದು ಭಾರತದಲ್ಲಿನ ಹಿಂದೂಗಳಷ್ಟೇ ಅಲ್ಲ, ಪ್ರಪಂಚದಾದ್ಯಂತದ ಹಿಂದೂಗಳ ಸ್ಥಿತಿಯಾಗಬೇಕು. ಇದಕ್ಕಾಗಿ ಬಾಂಗ್ಲಾದೇಶ ಸೇರಿದಂತೆ ಜಗತ್ತಿನಾದ್ಯಂತ ಇರುವ ಹಿಂದೂಗಳನ್ನು ‘ಸುರಕ್ಷಿತ’ರನ್ನಾಗಿಸಲು ಭಾರತ ಸರಕಾರ ಮುಂದಾಗಬೇಕು!