ಕ್ರಿಯಮಾಣ ಕರ್ಮ ಮತ್ತು ಈಶ್ವರೀ (ಗುರು) ಕೃಪೆಯ ಮಹತ್ವ

‘ಭೂಮಿಯನ್ನು ಊಳುವುದು, ಗೊಬ್ಬರವನ್ನು ಹಾಕುವುದು, ಬೀಜಗಳನ್ನು ಹಾಕುವುದು, ನೀರುಣಿಸುವುದು ಮುಂತಾದ ಕೆಲಸಗಳು ನಮ್ಮ ಕೈಯಲ್ಲಿನ ವಿಷಯಗಳಾಗಿವೆ. ಬೀಜಗಳು ಮೊಳಕೆ ಒಡೆಯುವುದು, ಬೆಳೆಯುವುದು ಮತ್ತು ಅವುಗಳಿಗೆ ಹೂವು-ಹಣ್ಣುಗಳಾಗುವುದು ಪರಮೇಶ್ವರನ ಕೃಪೆಯ ಮೇಲೆ ಅವಲಂಬಿಸಿದೆ. ಅದೇ ರೀತಿ ಸಂತರ ಸಹವಾಸದಲ್ಲಿರುವುದು, ಗುರುಗಳು ಹೇಳಿದ ಮಾರ್ಗವನ್ನು ಅನುಸರಿಸುವುದು, ಗುರುಗಳಿಂದ ಸತ್ಯಶಾಸ್ತ್ರವನ್ನು ತಿಳಿದುಕೊಂಡು ಅದರ ಚಿಂತನೆ ಮಾಡುವುದು, ಗುರುಗಳ ಮೇಲಿನ ಶ್ರದ್ಧೆ-ಭಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಇವೆಲ್ಲವೂ ನಮ್ಮ ಕೃತಿಗಳಾಗಿವೆ ಮತ್ತು ಗುರುಗಳು ನಮ್ಮ ಹೃದಯದಲ್ಲಿ ನೆಟ್ಟ ಮಂತ್ರಬೀಜಕ್ಕೆ ಪ್ರೇಮರೂಪೀ ಬಳ್ಳಿಯು ಚಿಗುರೊಡೆಯುವುದು, ನಿರೀಚ್ಛಾರೂಪೀ ಹೂವುಗಳು ಮತ್ತು ಆತ್ಮಾನುಭವರೂಪೀ ಹಣ್ಣುಗಳಾಗುವುದೆಲ್ಲವೂ ಗುರುಕೃಪೆಯ ಮೇಲೆ ಅವಲಂಬಿಸಿರುತ್ತದೆ’.
(ಆಧಾರ: ಸನಾತನ ನಿರ್ಮಿತ ಗ್ರಂಥ ‘ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ ಕರ್ಮ)