ವಿಶ್ವ ನಾಯಕರು ಪ್ರಧಾನಿ ಮೋದಿಯವರಂತೆ ಆಧ್ಯಾತ್ಮಿಕವಾಗಿರಬೇಕು ! – ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಆಂಟನ್ ಜಿಲ್ಲಿಂಗರ್

ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಆಂಟನ್ ಜಿಲ್ಲಿಂಗರ್ ಅವರ ಹೇಳಿಕೆ

ವಿಯೆನ್ನಾ – ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು. ಆಸ್ಟ್ರಿಯಾ ಪ್ರವಾಸದ ವೇಳೆ, ಪ್ರಧಾನಿ ಮೋದಿ ಅವರು ಆಂಟನ್ ಜಿಲ್ಲಿಂಜರ್ ಅವರನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ವಿಷಯಗಳ ಕುರಿತು ಚರ್ಚಿಸಿದರು,

2022 ರಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ವಿಜ್ಞಾನಿಯವರು ತಮ್ಮ ಮಾತನ್ನು ಮುಂದುವರೆಸಿ, ಪ್ರತಿಭಾವಂತ ಯುವಕರು ತಮ್ಮ ಸ್ವಂತ ಆಲೋಚನೆಗಳ ಆಧಾರದ ಮೇಲೆ ಸಂಶೋಧನೆ ನಡೆಸಲು ಬೆಂಬಲಿಸಿದಾಗ ಮಾತ್ರ, ನಿಜವಾಗಿಯೂ ಹೊಸ ಆಲೋಚನೆಗಳು ಹೊರಹೊಮ್ಮುತ್ತವೆ. ಇದು ಪ್ರತಿ ದೇಶದಲ್ಲಿಯೂ ಸಂಭವಿಸಬಹುದು, ಭಾರತದಲ್ಲಿಯೂ ಸಹ ಈ ರೀತಿ ಸಂಭವಿಸಬಹುದು; ಏಕೆಂದರೆ ಭಾರತವು ಶ್ರೀಮಂತ ಆಧ್ಯಾತ್ಮಿಕ ಮತ್ತು ತಾಂತ್ರಿಕ ಭೂತಕಾಲವನ್ನು ಹೊಂದಿದೆ.

ಪ್ರಧಾನಿ ಮೋದಿ ಅವರು ನಾಲ್ಕು ಪ್ರಮುಖ ಆಸ್ಟ್ರಿಯಾದ ವಿಜ್ಞಾನಿಗಳು ಮತ್ತು ಭಾರತೀಯ ಇತಿಹಾಸದ ಅಧ್ಯಯನಕರನ್ನು ಭೇಟಿಯಾದರು. ಅವರು ಬೌದ್ಧ ತತ್ತ್ವಶಾಸ್ತ್ರದ ಅಧ್ಯಯನಕಾರ ಮತ್ತು ಭಾಷಾಶಾಸ್ತ್ರಜ್ಞ ಡಾ. ಬಿರ್ಗಿಟ್ ಕೆಲ್ನರ್, ಆಧುನಿಕ ದಕ್ಷಿಣ ಏಷ್ಯಾದ ವಿದ್ವಾಂಸ ಪ್ರೊ. ಮಾರ್ಟಿನ್ ಗೆನ್ಸ್ಲೆ, ವಿಯನ್ನಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಅಧ್ಯಯನಗಳ ಪ್ರಾಧ್ಯಾಪಕ ಡಾ. ಬೋರೆನ್ ಲಾರಿಯೊಸ್ ಮತ್ತು ವಿಯೆನ್ನಾ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ಮುಖ್ಯಸ್ಥ ಡಾ. ಕರಿನ್ ಪ್ರೆಸೆಂಡಾನ್ಜ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಭಾರತ ಮತ್ತು ಆಸ್ಟ್ರಿಯಾದಿಂದ ಭಯೋತ್ಪಾದನೆಗೆ ನಿಷೇಧ !

ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನ್ಯೂಹಮ್ಮರ್ ನಡುವಿನ ಮಾತುಕತೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ, ಉಭಯ ದೇಶಗಳು ಪಾಕಿಸ್ತಾನ ಮತ್ತು ಚೀನಾವನ್ನು ಗುರಿ ಮಾಡಿವೆ. ಗಡಿಯಾಚೆಗಿನ ಮತ್ತು ಸೈಬರ್ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಇಬ್ಬರೂ ನಾಯಕರು ಖಂಡಿಸಿದರು.