|
ಲಂಡನ (ಬ್ರಿಟನ) – ಬ್ರಿಟನ್ ನ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮುಸಲ್ಮಾನ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಾರೆ. ‘ಈ ಕಿರುಕುಳ ನಿಲ್ಲಬೇಕಾದರೇ, ಇಸ್ಲಾಂ ಧರ್ಮ ಸ್ವೀಕರಿಸಿ’, ಎಂದು ಈ ವಿದ್ಯಾರ್ಥಿಗಳಿಂದ ಹೇಳಲಾಗಿದ್ದು ಎಂದು ಒಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ‘ಹೇನ್ರೀ ಜಾಕ್ಸನ್ ಸೊಸೈಟಿ’ ಯು ಈ ಸಮೀಕ್ಷೆ ಮಾಡಿದೆ. ಶಾರ್ಲೋಟ ಲಿಟಲವುಡ್ ಇವರು ಈ ಸಮೀಕ್ಷೆಯ ವರದಿ ಸಿದ್ಧಪಡಿಸಿದ್ದಾರೆ. ಸಮೀಕ್ಷೆಯಲ್ಲಿ ೯೮೮ ಹಿಂದೂ ಪೋಷಕರನ್ನು ಸಂಪರ್ಕಿಸಲಾಯಿತು. ಹಾಗೂ ಬ್ರಿಟನ್ನಿನಲ್ಲಿ ಸುಮಾರು 1 ಸಾವಿರ ಶಾಲೆಯ ಸಮೀಕ್ಷೆ ನಡೆಸಲಾಗಿದೆ. ಶೇಕಡ ೫೦ ರಷ್ಟು ಹಿಂದೂ ಪೋಷಕರು, ‘ಅವರ ಮಕ್ಕಳು ಶಾಲೆಯಲ್ಲಿ ದ್ವೇಷವನ್ನು ಎದುರಿಸಬೇಕಾಗುತ್ತದೆ.’ ಎಂದು ಹೇಳಿದರು. ಬ್ರಿಟನ್ನಿನಲ್ಲಿ ಹಿಂದೂ ಧರ್ಮ ಮೂರನೇಯ ದೊಡ್ಡ ಧರ್ಮವಾಗಿದೆ. ಬ್ರಿಟನ್ನಿನಲ್ಲಿ ೧೦ ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳು ವಾಸಿಸುತ್ತಾರೆ.
Hindus Fear Conversion In UK Schools As Muslim Classmates Raise Threats In Sunak’s Great Britain.#TNDIGITALVIDEOS #UK #Hindus pic.twitter.com/4RRQcXuFAV
— TIMES NOW (@TimesNow) April 19, 2023
ವರದಿಯಲ್ಲಿ, ಬ್ರಿಟಿಷ ಶಾಲೆಯಲ್ಲಿ ಹಿಂದೂ ಧರ್ಮದ ಬಗ್ಗೆ ಬಹಳ ಕಡಿಮೆ ಜ್ಞಾನ ನೀಡಲಾಗುತ್ತದೆ. ಅಲ್ಲಿ ಕಲಿಸಲಾಗುವ ಧಾರ್ಮಿಕ ಶಿಕ್ಷಣದಲ್ಲಿ ಹಿಂದೂ ಧರ್ಮದ ಅವಮಾನ ಮಾಡಲಾಗುತ್ತದೆ. ಆದ್ದರಿಂದ ಹಿಂದೂ ಮಕ್ಕಳ ಪೋಷಕರು ಬ್ರಿಟಿನ ಶಾಲೆಯನ್ನು ಟಿಕೆಸಿದ್ದಾರೆ.
ಬ್ರಿಟನ್ನಿನಲ್ಲಿ ಲೆಸ್ಟರ್ ಮತ್ತು ಬರ್ಮಿಘಮ ಈ ನಗರದಲ್ಲಿ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಸಪ್ಟೆಂಬರ್ ೨೦೨೨ ರಲ್ಲಿ ನಡೆದಿರುವ ಹಿಂದೂ ವಿರೋಧಿ ಗಲಭೆಯ ನಂತರ ಲೆಸ್ಟರ್ ಪೋಲಿಸರು ೫೫ ಮತಾಂಧ ಮುಸಲ್ಮಾನರನ್ನು ಬಂದಿಸಿದ್ದಾರೆ. ಆಸ್ತಿ ನಾಶ ಮಾಡುವುದು ಹಾಗೂ ದೇವಸ್ಥಾನ ಮತ್ತು ಹಿಂದೂಗಳ ಮೇಲೆ ದಾಳಿ ನಡೆಸುವುದು, ಇಂತಹ ಆರೋಪ ಅವರ ಮೇಲೆ ಇದೆ. ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಜೊತೆ ಭೇದ ಭಾವ ಮಾಡಿರುವ ಘಟನೆ ಮತ್ತು ಲೆಸ್ಟರ್ ನಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರದಲ್ಲಿ ಸಾಮ್ಯತೆ ಇದೆ.
(ಸೌಜನ್ಯ : TIMES NOW)
ಹಿಂದೂ ವಿದ್ಯಾರ್ಥಿಗಳ ಮೇಲೆ ಈ ರೀತಿಯಲ್ಲಿ ದೌಜಘನ್ಯ ನಡೆಯುತ್ತದೆ !
೧. ಗೋಮಾಂಸದ ಕುರಿತು ಹಿಂದೂಗಳನ್ನು ಅವಮಾನಿಸಲಾಗುತ್ತದೆ ಮತ್ತು ಸಸ್ಯಹಾರಿ ಇರುವುದರಿಂದ ಅವರನ್ನು ಗೆಲಿ ಮಾಡಲಾಗುತ್ತದೆ. ಹಿಂದೂ ದೇವತೆಗಳ ಅವಮಾನ ಕೂಡ ಮಾಡಲಾಗುತ್ತದೆ. ಒಂದು ಶಾಲೆಯ ತರಗತಿಯಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿನಿಯ ಮೇಲೆ ಸ್ನೇಹಿತರು ಗೋಮಾಂಸ ಎಸೆದರು.
೨. ಭಾರತದಲ್ಲಿ ಮುಸಲ್ಮಾನರೊಂದಿಗೆ ಭೇದಭಾವ ಮಾಡಲಾಗುತ್ತದೆ ಎಂದು ಆರೋಪಿಸಿ ಬ್ರಿಟನ್ನಿನಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ದ್ವೇಷಿಸಲಾಗುತ್ತದೆ. ಹಿಂದೂ ವಿದ್ಯಾರ್ಥಿಗಳನ್ನು ‘ಕಾಫಿರ’ ಎಂದು ಸಂಭೋಧಿಸಿ ಅವರ ಅವಮಾನ ಮಾಡಲಾಗುತ್ತದೆ. ಅವರಿಗೆ ‘ಮುಸಲ್ಮಾನರಾಗಿರಿ ಇಲ್ಲವಾದರೆ ನಿಮ್ಮ ಜೀವನ ನರಕ ಮಾಡುವೆವು’, ಎಂದು ಬೆದರಿಸಲಾಗುತ್ತದೆ.
೩. ಒಬ್ಬ ಹಿಂದೂ ವಿದ್ಯಾರ್ಥಿಗೆ, ‘ನಿನಗೆ ಸ್ವರ್ಗಕ್ಕೆ ಹೋಗುವುದಿದ್ದರೆ ಇಸ್ಲಾಂಗೆ ಬಾ, ಇಲ್ಲವಾದರೆ ನೀನು ಹೋಗಲಾರ.’. ಹಾಗೂ ಇಸ್ಲಾಂ ಧರ್ಮೋಪದೇಶಕರ ವಿಡಿಯೋ ತೋರಿಸಿ ಒಬ್ಬ ವಿದ್ಯಾರ್ಥಿಗೆ ಮತಾಂತರ ಮಾಡಲು ಕೂಡ ಹೇಳಲಾಯಿತು.
೪. ಭಾರತದ ಪ್ರಧಾನ ಮಂತ್ರಿ ಮೋದಿ ಇವರ ಉದಯ ಮತ್ತು ಕಲಂ ೩೭೦ ರದ್ದು ಪಡೆಸಿದ ನಂತರ ಬ್ರಿಟನ್ನಿನಲ್ಲಿ ಅನೇಕ ಮುಸಲ್ಮಾನ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿಗಳಿಗೆ ‘ನೀವು ನಮ್ಮ ಮಸೀದಿ ಏಕೆ ಕೆಡವಿದ್ದಿರಿ ?, ನಮ್ಮ ಮೇಲೆ ಏಕೆ ದಾಳಿ ಮಾಡುತ್ತೀರಿ ?’ ಎಂದು ಪ್ರಶ್ನೆ ಕೇಳುತ್ತಾರೆ. ಭಯೋತ್ಪಾದಕರ ಆದರ್ಶ ಆಗಿರುವ ಜಾಕೀರ್ ನಾಯಕ್ ನ ವಿಡಿಯೋ ನೋಡಿ ಮತಾಂತರ ಮಾಡುವುದಕ್ಕಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪೋಷಕರು ಹೇಳಿದರು.
೫. ಭಾರತದಲ್ಲಿನ ಜಾತಿ ವ್ಯವಸ್ಥೆ ಮತ್ತು ದೇವತೆಗಳ ಪೂಜೆಯ ಬಗ್ಗೆ ಅನೇಕ ಅಪನಂಬಿಕೆ ಹರಡಿ ಅದರ ಆಧಾರದ ಮೇಲೆ ಹಿಂದೂ ವಿದ್ಯಾರ್ಥಿಗಳ ಅವಮಾನ ಮಾಡುತ್ತಾರೆ. ಅವರಿಗೆ ದೀಪಾವಳಿಯ ರಜೆ ಕೂಡ ನೀಡುವುದಿಲ್ಲ.
೬. ಹಿಂದೂ ವಿದ್ಯಾರ್ಥಿಗಳಿಗೆ ಬ್ರಿಟನ್ ಹುಡುಗರು ‘ಪಾಕಿಸ್ತಾನಿ’ ಎನ್ನುತ್ತಾರೆ. ಬ್ರಿಟನ್ ಶಾಲೆಗಳಲ್ಲಿ ಹಿಂದೂ ವಿರೋಧಿ ಕೆಟ್ಟ ಪದಗಳನ್ನು ಉಪಯೋಗಿಸುವುದು ಸಾಮಾನ್ಯ ಎನ್ನಲಾಗುತ್ತದೆ.
೭. ಕೇವಲ ಶೇಕಡ ೧ ಶಾಲೆಗಳು ಹಿಂದೂ ವಿದ್ಯಾರ್ಥಿಗಳ ಮೇಲಿನ ಈ ರೀತಿಯ ದೌರ್ಜನ್ಯ ಪರಿಗಣಿಸುತ್ತಾರೆ.
ಸಂಪಾದಕೀಯ ನಿಲುವುಇಸ್ಲಾಂ ದೇಶದಲ್ಲಿ ಅಷ್ಟೇ ಅಲ್ಲದೆ ಈಗ ಬ್ರಿಟನ್ ನಂತಹ ‘ಪ್ರಗತಿಪರ’ ದೇಶದಲ್ಲಿ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಈ ರೀತಿ ದೌರ್ಜನ್ಯ ನಡೆಯುವುದು, ಇದು ಗಂಭೀರವಾಗಿದೆ. ಈ ಕುರಿತು ಹಿಂದೂಗಳ ಜಾಗತೀಕ ಸಂಘಟನೆ ಮತ್ತು ಭಾರತ ಸರಕಾರ ಇವರು ಧ್ವನಿ ಎತ್ತುವುದು ಅವಶ್ಯಕವಾಗಿದೆ ! ಬ್ರಿಟನ್ ನ ಶಾಲೆಯಲ್ಲಿ ನಡೆದಿರುವ ಘಟನೆ ನಾಳೆ ಭಾರತದ ಶಾಲೆಗಳಲ್ಲಿ ಕೂಡ ನಡೆದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ ! |