ಬ್ರಿಟನ್ ನಲ್ಲಿ ಭಯೋತ್ಪಾದಕ ಸಂಘಟನೆ `ಹಿಜಬುಲ್ಲಾಹ್’ ಗೆ ಹಣಕಾಸು ಪೂರೈಸುವ ಭಾರತೀಯನ ಬಂಧನ !

ಲಂಡನ (ಬ್ರಿಟನ) – ಬ್ರಿಟನ್ ಪೊಲೀಸರು ಸುಂದರ ನಾಗರಾಜನ್ ಹೆಸರಿನ ಭಾರತೀಯ ನಾಗರಿಕನನ್ನು `ಹಿಜಬುಲ್ಲಾಹ್’ ಭಯೋತ್ಪಾದಕ ಸಂಘಟನೆಗೆ ಹಣಕಾಸು ಪೂರೈಸಿರುವ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ಅಮೇರಿಕಾವು ಒತ್ತಾಯಿಸಿದ ನಂತರ 66 ವರ್ಷದ ನಾಗರಾಜನ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ಅವನನ್ನು ಅಮೇರಿಕಾಗೆ ಒಪ್ಪಿಸಲಾಗುವುದು.
ಪೊಲೀಸರು ನಝೀಮ್ ಅಹಮದ್ ಹೆಸರಿನ ಲೆಬನಾನಿ ವ್ಯಕ್ತಿಯನ್ನು ಕೂಡ ಬಂಧಿಸಿದ್ದಾರೆ. ನಾಗರಾಜನ್ ಅಹಮದ್ ಗಾಗಿ ಕಾರ್ಯ ಮಾಡುತ್ತಿರುವ ಆರೋಪವಿದೆ. ಅಹಮದನ ಗುಂಪು ಲೆಬೆನಾನ್ ನಲ್ಲಿ ಕಾರ್ಯನಿರತವಾಗಿರುವ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ `ಹಿಜಬುಲ್ಲಾಹ್’ಗೆ ಹಣಕಾಸು ನೆರವನ್ನು ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಅಮೇರಿಕಾ ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು.