ನಕಲಿ ಔಷಧಿಗಳ ಪ್ರಕರಣದಲ್ಲಿ ಕರ್ನಾಟಕದಲ್ಲಿ 25 ಕಂಪನಿಗಳು Black list ಗೆ ಸೇರ್ಪಡೆ

ಬೆಂಗಳೂರು – ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ. ಈ ಕಂಪನಿಗಳ ಕಣ್ಣು ಮತ್ತು ಕಿವಿಗೆ ಹಾಕುವ ಡ್ರಾಪ್ಸ್, ಪೌಡರ, ಮಾತ್ರೆಗಳು, ಸೂಜಿ, ಇಂಜೆಕ್ಷನ್, ಹ್ಯಾಂಡ್ ಸ್ಯಾನಿಟಾಯಸರ್, ವಿಟಾಮಿನ ಸಿ ಮಾತ್ರೆಗಳು ಮತ್ತು ಸರ್ಜಿಕಲ್ ಗ್ಲೌಸಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿರುವುದು ಕಂಡು ಬಂದಿದೆ.

ಕಳೆದ 5 ವರ್ಷಗಳಿಂದ ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳನ್ನು ಪೂರೈಕೆ ಮಾಡಿರುವ ಹಿನ್ನೆಲೆಯಲ್ಲಿ ಸಿಸ್ಟಾಚಮ್ ಲೆಬೊರೆಟರೀಸ್, ಪೊಡ್ಡರ ಫಾರ್ಮಾಸ್ಯೂಟಿಕಲ್ಸ್ ಪ್ರೈ.ಲಿ., ಗ್ಲೆಕ್ಸಿಫಾರ್ಮಾ, ಎಸ್.ಆರ್.ಎಸ್. ಮೆಡಿಟೆಕ್ ಲಿ., ಎಲಿಗೆಂಟ ಡ್ರಗ್ಸ ಪ್ರೈ.ಲಿ. ಶ್ರೇಯಾ ಲೈಫ್ ಸಾಯನ್ಸ್ ಪ್ರೈ.ಲಿ. ಮಾಡರ್ನ ಲೆಬೊರೆಟರೀಸ್, ಎಸ್.ಎಮ್. ಫಾರ್ಮಾಸ್ಯೂಟಿಕಲ್ಸ್, ಕ್ವೆಸ್ಟ ಲೆಬೊರೆಟರೀಸ್ ಪ್ರೈ.ಲಿ., ಓಂ ಬಾಯೊಮೆಡಿಕಲ್ ಪ್ರೈ.ಲಿ. ಇವುಗಳಲ್ಲದೇ ಇನ್ನೂ ಅನೇಕ ಕಂಪನಿಗಳನ್ನು Black list ಗೆ ಸೇರಿಸಲಾಗಿದೆ.