ಹನುಮಾನ್ ಜಯಂತಿ ನಿಮಿತ್ತ ದೇಶಾದ್ಯಂತ ೮೦೦ ಕ್ಕೂ ಅಧಿಕ ಕಡೆಗಳಲ್ಲಿ ಗದಾ ಪೂಜೆ !

ಹಿಂದೂಗಳಲ್ಲಿ ಶೌರ್ಯ ಜಾಗೃತಗೊಳಿಸಲು ಗದಾ ಪೂಜೆ ಅವಶ್ಯಕ ! – ಹಿಂದೂ ಜನಜಾಗೃತಿ ಸಮಿತಿ

ಗದಾ ಪೂಜೆಯನ್ನು ಮಾಡುತ್ತಿರುವ ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡ

ಮಂಗಳೂರು – ಹಿಂದೂಗಳ ಇತಿಹಾಸವು ಶೌರ್ಯ ಮತ್ತು ಪರಾಕ್ರಮದಿಮದ ಕೂಡಿದೆ; ಆದರೆ ಎಷ್ಟೋ ವರ್ಷ ಸಶಸ್ತ್ರ ಹೋರಾಟ ನಡೆಸಿ ಪಡೆದಿರುವ ಸ್ವಾತಂತ್ರ್ಯದ ನಂತರ ‘ದೆ ದೀ ಹಮೆ ಆಜಾದಿ ಬಿನಾ ಖಡ್ಗ ಬಿನಾ ಢಾಲ್ ಈ ರೀತಿ ತಪ್ಪು ಮಾಹಿತಿ ನೀಡಿ ಹಿಂದೂಗಳ ಭಾವಿ ಪೀಳಿಗೆಗೆ ಶೌರ್ಯದಿಂದ ವಂಚಿಸಲಾಗುತ್ತಿದೆ. ಕಳೆದ ೭೫ ವರ್ಷದಲ್ಲಿ ಹಿಂದೂಗಳ ಶೌರ್ಯ ಜಾಗೃತವಾಗುವಂತಹ, ಯಾವುದೇ ಕಾರ್ಯಕ್ರಮ ನಡೆದಿರುವುದು ಕಂಡಿಲ್ಲ. ಈ ದೃಷ್ಟಿಯಿಂದ ಹಿಂದೂಗಳಲ್ಲಿ ಶೌರ್ಯ ಜಾಗೃತಿಯಾಗಬೇಕು ಮತ್ತು ಪ್ರಭು ಶ್ರೀ ರಾಮನ ಕೃಪೆಯಿಂದ ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಗೆ ಬಲ ಸಿಗಬೇಕು, ಎಂಬುದಕ್ಕಾಗಿ ಶ್ರೀ ಹನುಮಾನ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮವಿಚಾರಿ ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ದೇಶಾದ್ಯಂತ ೮೦೦ ಕ್ಕೂ ಅಧಿಕ ಕಡೆಗಳಲ್ಲಿ ‘ಗದಾ ಪೂಜೆ ಮಾಡಲಾಯಿತು.

ಪೂಜೆಯು ಶಂಖನಾದದಿಂದ ಪ್ರಾರಂಭವಾಯಿತು. ತದನಂತರ ಸಾಮೂಹಿಕ ಪ್ರಾರ್ಥನೆ, ‘ಗದಾ ಪೂಜೆ ವಿಧಿ, ಶ್ರೀ ಹನುಮಂತನ ಆರತಿ, ಸ್ತೋತ್ರ ಮತ್ತು ‘ಶ್ರೀ ಹನುಮತೇ ನಮಃ ಈ ಸಾಮೂಹಿಕ ನಾಮಜಪ ಮಾಡಲಾಯಿತು ಹಾಗೂ ಧರ್ಮಸಂಸ್ಥಾಪನೆಗಾಗಿ ಮಾರುತಿರಾಯನ ಗುಣ ಹೇಗೆ ಅಳವಡಿಸಿಕೊಳ್ಳುವುದು, ಇದಕ್ಕಾಗಿ ಮಾರ್ಗದರ್ಶನವನ್ನೂ ಮಾಡಲಾಯಿತು. ಕಾರ್ಯಕ್ರಮದ ಕೊನೆಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಲಾಯಿತು.

ಹಿಂದೂಗಳ ಪ್ರತಿಯೊಂದು ದೇವತೆಯ ರೂಪ ನೋಡಿದರೆ ಕೇವಲ ಒಂದು ಕೈ ಆಶೀರ್ವಾದ ನೀಡುತ್ತದೆ ಹಾಗೂ ಇತರ ಎಲ್ಲಾ ಕೈಗಳಲ್ಲಿ ವಿವಿಧ ರೀತಿಯ ಅಸ್ತ್ರಶಸ್ತ್ರಗಳು ಇವೆ. ಈ ದೃಷ್ಟಿಯಿಂದ ದೇವತೆಗಳ ಶಸ್ತ್ರಗಳ ಪೂಜೆ ಮಾಡಿದರೆ ಹಿಂದೂಗಳಲ್ಲಿ ಶೌರ್ಯ ಜಾಗೃತವಾಗಲು ಸಹಾಯವಾಗುವುದು. ಈ ವರ್ಷ ಶ್ರೀ ರಾಮನವಮಿಯ ಮೆರವಣಿಗೆಗಳ ಮೇಲೆ ಅನೇಕ ರಾಜ್ಯಗಳಲ್ಲಿ ಭಯಂಕರ ದಾಳಿಗಳು ನಡೆದಿವೆ. ಹಿಂದೂಗಳನ್ನು ಗುರಿ ಮಾಡಲಾಯಿತು. ಈ ಗದೆ ಪೂಜೆಗಳ ಮೂಲಕ ಮತ್ತೊಮ್ಮೆ ಹಿಂದೂಗಳಿಗೆ ಬಲ ಸಿಗಬೇಕು. ಹಿಂದೂಗಳಲ್ಲಿನ ಶೌರ್ಯ ಜಾಗೃತವಾಗಬೇಕು, ಅದಕ್ಕಾಗಿ ಹಬ್ಬ ಉತ್ಸವದ ಸಮಯದಲ್ಲಿ ಶಸ್ತ್ರ ಪೂಜೆ ಮಾಡಬೇಕು, ಎಂಬುದೇ ಈ ಗದಾ ಪೂಜೆಗಳ ಹಿಂದಿನ ಉದ್ದೇಶವಾಗಿದೆ.

ಸಮರ್ಥ ರಾಮದಾಸ ಸ್ವಾಮೀಜಿಯವರು ಸ್ಥಾಪಿಸಿರುವ ೧೧ ಮಾರುತಿ ದೇವಸ್ಥಾನಗಳಲ್ಲಿಯೂ ಗದಾ ಪೂಜೆ ಮಾಡಲಾಯಿತು. ಜೊತೆಗೆ ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಬೆಂಗಳೂರು ಮತ್ತು ಬೆಳಗಾವಿ; ಮಹಾರಾಷ್ಟ್ರ, ಉತ್ತರಪ್ರದೇಶದ ಮಥುರಾ ಸಹಿತ ದೆಹಲಿ ಮತ್ತು ರಾಜಸ್ಥಾನದಲ್ಲಿಯೂ ಉತ್ಸಾಹದಿಂದ ಸಾಮೂಹಿಕ ‘ಗದಾ ಪೂಜೆ ಸಂಪನ್ನವಾಯಿತು. ಈ ಕಾರ್ಯಕ್ರಮದಲ್ಲಿ ಸಂತರ ವಂದನೀಯ ಉಪಸ್ಥಿತಿ ಲಭಿಸಿತು ಹಾಗೂ ವಿವಿಧ ಹಿಂದುತ್ವನಿಷ್ಟ ಸಂಘಟನೆಯ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು. ವಿಜಯಪುರದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ದಿವ್ಯ ಉಪಸ್ಥಿತಿ ಇತ್ತು