ಅಕ್ಷಯ ತೃತೀಯಾದ ಶುಭಮುಹೂರ್ತದಂದು ಕೃಷಿಯನ್ನು ಪ್ರಾರಂಭಿಸಿರಿ !

‘ಈ ವರ್ಷ ೨೨.೪.೨೦೨೩ ಈ ದಿನ ದಂದು ‘ಅಕ್ಷಯ ತೃತೀಯಾ ಇದೆ. ಮೂರೂವರೆ ಮುಹೂರ್ತಗಳ ಪೈಕಿ ಒಂದಾಗಿರುವ ಈ ಶುಭದಿನದಂದು ಬೇಸಿಗೆ ಬೆಳೆಗಳ ಬಿತ್ತನೆಯನ್ನು ಆರಂಭಿಸಲಾಗುತ್ತದೆ. ‘ಈ ದಿನದಂದು ಬೀಜಗಳನ್ನು ಬಿತ್ತಲು ಆರಂಭಿಸಿದರೆ ಆ ಬೀಜಗಳಿಂದ ಯಥೇಚ್ಛ ಧಾನ್ಯಗಳು ಬೆಳೆಯುತ್ತವೆ ಮತ್ತು ಬೀಜಗಳ ಕೊರತೆಯು ಎಂದಿಗೂ ಉಂಟಾಗುವುದಿಲ್ಲ, ಎಂದು ನಂಬಲಾಗಿದೆ. ‘ಈ ದಿನ ಹೊಲದಲ್ಲಿ ಮಡಿಗಳನ್ನು ಮಾಡಿ ಅವುಗಳಲ್ಲಿ ಬೀಜಗಳನ್ನು ಬಿತ್ತಲಾಗುತ್ತದೆ. ‘ಈ ದಿನ ನೆಟ್ಟ ಹಣ್ಣುಗಳ ಗಿಡಗಳು ಮತ್ತು ಔಷಧೀಯ ಗಿಡಮೂಲಿಕೆಗಳು ಎಂದಿಗೂ ಕೊಳೆಯು ಕ್ಷಯವಾಗುವುದಿಲ್ಲ, ಎಂದೂ ನಂಬಲಾಗುತ್ತದೆ.

ಸೌ. ರಾಘವಿ ಕೊನೆಕರ

೧. ಹಿಂದಿನ ಕೃಷಿಗೆ ಸಂಬಂಧಿಸಿದ ಗ್ರಂಥದಲ್ಲಿ ಉಲ್ಲೇಖ !

ಪರಾಶರಋಷಿಗಳು ರಚಿಸಿದ ‘ಕೃಷಿಪರಾಶರ ಈ ಗ್ರಂಥದಲ್ಲಿಯೂ ‘ವೈಶಾಖೆ ವಪನಂ ಶ್ರೇಷ್ಠಮ್| ಎಂದರೆ ‘ವೈಶಾಖ ಮಾಸದಲ್ಲಿ ಮಾಡಿದ ಬಿತ್ತನೆಯು ಬಿತ್ತುವಿಕೆಯು ಸರ್ವಶ್ರೇಷ್ಠವಾಗಿದೆ, ಎಂಬ ಉಲ್ಲೇಖವಿದೆ. ಅಕ್ಷಯ ತೃತೀಯಾದ ಮುಹೂರ್ತದಂದು ಕೃಷಿ ಮಾಡುವುದು ಸಾಧ್ಯವಿಲ್ಲದಿದ್ದರೆ ವೈಶಾಖ ಮಾಸದಲ್ಲಿ ಬೇಸಿಗೆಯ ತರಕಾರಿಗಳ ಕೃಷಿಯನ್ನು ಮಾಡಲು ಪ್ರಯತ್ನಿಸಬೇಕು.

೨. ಅಕ್ಷಯ ತೃತೀಯಾದ ಮೊದಲು ಯಾವ ಪೂರ್ವಸಿದ್ಧತೆಯನ್ನು ಮಾಡಬೇಕು ?

ಅ. ಒಣಗಿದ ಎಲೆಕಡ್ಡಿಗಳು, ಘನಜೀವಾಮೃತ ಮತ್ತು ಮಣ್ಣು ಇವುಗಳ ಮಿಶ್ರಣವನ್ನು ಮಾಡಬೇಕು ಮತ್ತು ಅದರಲ್ಲಿ ನೀರು ಹಾಕಿ ತೆಳು ಮಾಡಿದ ಜೀವಾಮೃತ (ಸ್ಥಳೀಯ ದೇಶಿ ಆಕಳ ಸೆಗಣಿ, ಗೋಮೂತ್ರ, ಕಡಲೆ ಹಿಟ್ಟು ಮತ್ತು ಬೆಲ್ಲ ಇವುಗಳಿಂದ ತಯಾರಿಸಿದ ಮಿಶ್ರಣ)ವನ್ನು ಸಿಂಪಡಿಸಬೇಕು. ಈ ಮಿಶ್ರಣವನ್ನು ೪೮ ಗಂಟೆಗಳ ಕಾಲ ಮುಚ್ಚಿಡಬೇಕು. ೪೮ ಗಂಟೆಗಳಾದ ನಂತರ, ನಮ್ಮ ಬಳಿಗಿರುವ ಕುಂಡಗಳನ್ನು ಅಥವಾ ಮಡಿಗಳನ್ನು ಈ ಮಿಶ್ರಣದಿಂದ ತುಂಬಿಸಿಡಬೇಕು. ಈ ಮಿಶ್ರಣವು ಹಸಿಯಾಗಿರುವಷ್ಟು ನೀರನ್ನು ಅದರ ಮೇಲೆ ನಿಯಮಿತವಾಗಿ ಸಿಂಪಡಿಸಬೇಕು.

ಆ. ನಮ್ಮ ಜಾಗದ ಲಭ್ಯತೆಗನುಸಾರ ‘ಯಾವ ಯಾವ ಕಾಯಿಪಲ್ಲೆಗಳನ್ನು ನೆಡಬಹುದು ?, ಎಂಬುದನ್ನು ನಿರ್ಧರಿಸಿ ಅವುಗಳ ಬೀಜಗಳನ್ನು ತರಬೇಕು. ಕಾಯಿಪಲ್ಲೆಗಳನ್ನು ಆಯ್ದು ಕೊಳ್ಳುವಾಗ ‘ಏಎಕದಳ-ದ್ವಿದಳ ಹೀಗೆ ಮಿಶ್ರ ಕೃಷಿಯನ್ನು ಮಾಡುವುದಿದೆ, ಎಂದು ಗಮನದಲ್ಲಿಟ್ಟು ನಿಯೋಜನೆಯನ್ನು ಮಾಡಬೇಕು. ‘ಈ ಕಾಲಾವಧಿಯಲ್ಲಿ ಯಾವ ಕೃಷಿಯನ್ನು ಮಾಡಬಹುದು ?, ಎಂಬ ಪಟ್ಟಿಯನ್ನು ಲೇಖನದಲ್ಲಿ ಕೆಳಗೆ ಕೊಟ್ಟಿದೆ.

ಇ. ಬಳ್ಳಿವರ್ಗದ ತರಕಾರಿಗಳ ಬಳ್ಳಿಗಳನ್ನು ಏರಿಸಲು ಹಂದರ ವನ್ನು ತಯಾರಿಸುವ ಆವಶ್ಯಕತೆ ಇರುತ್ತದೆ. ಆದುದರಿಂದ ಹಂದರದ ಜಾಗವನ್ನು ನಿರ್ಧರಿಸಿ ಬಳ್ಳಿವರ್ಗದ ತರಕಾರಿಗಳನ್ನು ನೆಡುವ ನಿಯೋಜನೆಯನ್ನು ಮಾಡಬೇಕು.

ಈ. ಬಿತ್ತುವ ಮೊದಲು ಕಡಿಮೆಯೆಂದರೂ ೩ ದಿನ ಮೊದಲು ಜೀವಾಮೃತವನ್ನು ತಯಾರಿಸಬೇಕು, ಅಂದರೆ ಹೊಸ ಬೀಜಗಳನ್ನು ಬಿತ್ತಿದಾಗ ಅಥವಾ ಸಸಿಗಳನ್ನು ನೆಟ್ಟ ನಂತರ ಅವುಗಳಿಗೆ ಜೀವಾಮೃತವನ್ನು ನೀಡಲು ಸಾಧ್ಯವಾಗುತ್ತದೆ. ಬೀಜಸಂಸ್ಕಾರವನ್ನು ಮಾಡಿ ಸಸಿಗಳು ಮತ್ತು ಬೀಜಗಳನ್ನು ನೆಡಲು, ಬಿತ್ತುವ ಮೊದಲು ೨೪ ಗಂಟೆಗಳ ಮೊದಲೇ ಬೀಜಾಮೃತವನ್ನು ತಯಾರಿಸಿಡಬೇಕು.

ಉ. ನರ್ಸರಿಗಳಿಂದ (ಸಸ್ಯಶಾಲೆ) ತಂದ ಹಣ್ಣಿನ ಗಿಡಗಳು ಅಥವಾ ಔಷಧೀಯ ಗಿಡಮೂಲಿಕೆಗಳ ಸಸಿಗಳನ್ನು ನೆಡುವುದಿದ್ದರೆ ಅದನ್ನು ಅಕ್ಷಯ ತೃತೀಯಾದ ಮೊದಲೇ ತಂದಿಡಬೇಕು.

‘ಮೇಲಿನ ಎಲ್ಲ ಕೃತಿಗಳನ್ನು ನಿಯಮಿತವಾಗಿ ಹೇಗೆ ಮಾಡಬೇಕು ?, ಎಂಬ ಬಗೆಗಿನ ಸವಿಸ್ತಾರ ಮಾಹಿತಿ ನೀಡುವ ಲೇಖನ ಮತ್ತು ಸಾಕ್ಷ್ಯಚಿತ್ರವು ಸನಾತನದ ಜಾಲತಾಣದಲ್ಲಿ ಲಭ್ಯವಿದೆ. ಅವುಗಳ ಲಿಂಕ್‌ಗಳನ್ನು ಮುಂದೆ ಕೊಡಲಾಗಿದೆ.

೩. ಅಕ್ಷಯ ತೃತೀಯಾದಂದು ಮುಂದಿನ ಕಾಯಿಪಲ್ಲೆಗಳ ಕೃಷಿಯನ್ನು ಮಾಡಬಹುದು !

೩ ಅ. ಬಳ್ಳಿವರ್ಗದ ತರಕಾರಿಗಳು : ಹಾಲುಗುಂಬಳಕಾಯಿ, ಹೀರೆಕಾಯಿ, ಹಾಗಲಕಾಯಿ, ಸೌತೆಕಾಯಿ, ಕುಂಬಳಕಾಯಿ ಹಾಗೆಯೇ ತೊಂಡೆಕಾಯಿ ಇತ್ಯಾದಿ

೩ ಆ. ಗಡ್ಡೆ ತರಕಾರಿಗಳು : ಶಾವಿ, ಹಸಿಶುಂಠಿ, ಅರಿಶಿಣ, ಹುಳಿ ಅರಿಶಿಣ ಮತ್ತು ಸುವರ್ಣಗಡ್ಡೆ ಇತ್ಯಾದಿ

೩ ಇ. ಹಣ್ಣುತರಕಾರಿಗಳು : ಬದನೆಕಾಯಿ, ಮೆಣಸಿನಕಾಯಿ, ಸಿಮ್ಲಾ ಮಿರ್ಚಿ(ದೊಣ್ಣೆಮೆಣಸು) ಮತ್ತು ಬೆಂಡೆಕಾಯಿ ಇತ್ಯಾದಿ.

೩ ಈ. ಕಾಯಿತರಕಾರಿಗಳು : ಚವಳೀಕಾಯಿ, ನುಗ್ಗೇಕಾಯಿ, ಎಲ್ಲ ಪ್ರಕಾರಗಳ ಚಳ್ಳವರೆ ಮತ್ತು ಅವರೆಗಳು ಇತ್ಯಾದಿ ಇದರೊಂದಿಗೆ ಮೆಕ್ಕೆಜೋಳ, ಕರಿಬೇವು, ವಿವಿಧ ಹಣ್ಣುಗಳ ಗಿಡಗಳು ಮತ್ತು ಔಷಧೀಯ ಗಿಡಮೂಲಿಕೆಗಳ ಸಸಿಗಳನ್ನೂ ಈ ಕಾಲಾವಧಿಯಲ್ಲಿ ನೆಡಬಹುದು.

೪. ಅಕ್ಷಯ ತೃತೀಯಾದಂದು ಕೃಷಿ ಮಾಡಿ ಕೃಷಿ ಪರಂಪರೆಯನ್ನು ರಕ್ಷಿಸೋಣ !

ಈ ಎಲ್ಲ ತರಕಾರಿಗಳ ಕೃಷಿಯನ್ನು ಅಕ್ಷಯ ತೃತೀಯಾದಂದು ಅಥವಾ ವೈಶಾಖ ಮಾಸದಲ್ಲಿ ಮಾಡುವುದರಿಂದ ಮುಂದಿನ ೧-೨ ತಿಂಗಳುಗಳಲ್ಲಿ ಅವುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಆಷಾಢದ ಆರಂಭದಲ್ಲಿ ಮಳೆ ಆರಂಭವಾದರೆ ಸಸಿಗಳು ಗಾಳಿ ಮತ್ತು ಮಳೆಗೆ ತಾಳಿಕೊಳ್ಳುವಷ್ಟು ಬೆಳೆದಿರುತ್ತವೆ.

‘ಅಕ್ಷಯ ತೃತೀಯಾದಂದು ಮಾಡಿದ ಕೃಷಿಯಿಂದ ಆಷಾಢ ಹುಣ್ಣಿಮೆಯ ಕಾಲದಲ್ಲಿ ಬರುವ ‘ಕಾರಹುಣ್ಣಿಮೆ(ಎತ್ತುಗಳ ಪೂಜೆಯ ಹಬ್ಬ) ಈ ಹಬ್ಬದವರೆಗೆ ಹಣ್ಣುಗಳು ಸಿಗತೊಡಗುತ್ತವೆ, ಎಂದು ಭಾರತೀಯ ರೈತರು ಸಾಂಪ್ರದಾಯಿಕವಾಗಿ ನಂಬಿ ದ್ದಾರೆ. ನಾವೂ ಸಹ ಈ ದಿನದಂದು ಕೃಷಿ ಮಾಡಿ ಈ ಕೃಷಿ ಪರಂಪರೆಯನ್ನು ರಕ್ಷಿಸೋಣ ! – ಸೌ. ರಾಘವಿ ಮಯೂರೇಶ ಕೊನೇಕರ, ಢವಳಿ, ಫೋಂಡಾ, ಗೋವಾ. (೧.೪.೨೦೨೩)

ಕೃಷಿ ಮಾಡಲು ಇಲ್ಲಿಯವರೆಗ ನೀವು ಮಾಡಿದ ಪ್ರಯತ್ನ ಮತ್ತು ನಿಮಗೆ ಬಂದ ಅನುಭವಗಳನ್ನು ನಮಗೆ ಕೆಳಗೆ ನೀಡಿದ ವಿ-ಅಂಚೆ ವಿಳಾಸಕ್ಕೆ ಅವಶ್ಯ ಬರೆದು ಕಳುಹಿಸಿ. ಕೃಷಿಯ ಬಗ್ಗೆ ನಿಮಗೇನಾದರೂ ಸಂದೇಹವಿದ್ದರೆ ಇಲ್ಲಿ ಕೇಳಬಹುದು.

ಅನುಭವವನ್ನು ಕಳುಹಿಸಲು ವಿ-ಅಂಚೆ ವಿಳಾಸ :  [email protected]

ಅಂಚೆ ವಿಳಾಸ : ಸೌ. ರಾಘವಿ ಮಯೂರೇಶ ಕೊನೇಕರ, ಮೂಲಕ ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – ೪೦೩೪೦೧.

ಜೀವಾಮೃತ ಮತ್ತು ಬೀಜಾಮೃತವನ್ನು ತಯಾರಿಸುವ ಪದ್ಧತಿ, ಹಾಗೆಯೇ ಕುಂಡಗಳನ್ನು ಮತ್ತು ಮಡಿಗಳನ್ನು ಹೇಗೆ ತುಂಬಿಸ ಬೇಕು

www.sanatan.org/kannada/94049.html