ಅಕ್ಷಯ ತೃತೀಯಾದಂದು ಮಾಡುವ ದಾನದ ಮಹತ್ವ

ಅಕ್ಷಯ ತೃತೀಯಾದಂದು ಮಾಡಿದ ದಾನ ಎಂದಿಗೂ ಕ್ಷಯವಾಗುವುದಿಲ್ಲ. ಈ ದಿನ ಮಾಡಿದ ದಾನದಿಂದ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ. ಹೆಚ್ಚು ಪುಣ್ಯ ಪ್ರಾಪ್ತಿಯಾದುದರಿಂದ ಜೀವವು ಮಾಡಿದ ಪಾಪಗಳು ನಾಶವಾಗಿ, ಪುಣ್ಯದ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಒಂದು ಜೀವದ ಪೂರ್ವದ ಕರ್ಮಗಳು ಒಳ್ಳೆಯದಾಗಿದ್ದರೆ, ಪುಣ್ಯದ ಸಂಗ್ರಹ ವೃದ್ಧಿಯಾಗುತ್ತದೆ. ಇದರಿಂದ ಆತ್ಮಕ್ಕೆ ಸ್ವರ್ಗ ಪ್ರಾಪ್ತಿಯಾಗುತ್ತದೆ; ಆದರೆ ಸಾಧಕರಿಗೆ ಪುಣ್ಯವನ್ನು ಗಳಿಸಿ ಸ್ವರ್ಗ ಪಡೆಯಲಿಕ್ಕಿರುವುದಿಲ್ಲ ಬದಲಾಗಿ ಅವರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳಲಿಕ್ಕಿರುತ್ತದೆ. ಹಾಗಾಗಿ ಸಾಧಕರು ಸತ್ಪಾತ್ರೆ ದಾನ ಮಾಡುವುದು ಅವಶ್ಯಕವಾಗಿರುತ್ತದೆ. ಇಲ್ಲಿ ಸತ್ಪಾತ್ರೆ ದಾನ, ಎಂದರೆ ಆಧ್ಯಾತ್ಮಿಕ ಪ್ರಚಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವುದು. ಇಂತಹ ಸತ್ ಕಾರ್ಯಕ್ಕಾಗಿ ದಾನದ ಮಾಡುವುದರಿಂದ ದಾನಿಗೆ ಪುಣ್ಯ ಸಿಗುವುದಿಲ್ಲ, ಬದಲಾಗಿ ಈ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಆದ್ದರಿಂದ ಅವನ ಆಧ್ಯಾತ್ಮಿಕ ಪ್ರಗತಿ ಸಹ ಆಗುತ್ತದೆ, ಆಧ್ಯಾತ್ಮಿಕ ಪ್ರಗತಿಯಾದುದರಿಂದ ಸಾಧಕನು ಸ್ವರ್ಗ ಲೋಕಕ್ಕೆ ಹೋಗದೆ ಉಚ್ಚ ಲೋಕಗಳಿಗೆ ಹೋಗುತ್ತಾರೆ. – ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮದಿಂದ ೧೧.೫.೨೦೦೫)

ಕು. ಮಧುರಾ ಭೋಸಲೆ

ಅರಿಶಿನಕುಂಕುಮ

ಅಕ್ಷಯ ತೃತೀಯಾ ಸ್ತ್ರೀಯರಿಗೆ ಮಹತ್ವದ ದಿನವಾಗಿದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಈ ದಿನದಂದು ವಿಸರ್ಜಿಸಲಾಗುತ್ತದೆ.  ಈ ವೇಳೆ ಅರಿಶಿನ ಕುಂಕುಮದ ಕಾರ್ಯಕ್ರಮವನ್ನು ಕೂಡ ಮಾಡುತ್ತಾರೆ.

ಧನದ ದಾನ

ಮೇಲೆ ತಿಳಿಸಿದಂತೆ ಸತ್ಪಾತ್ರೆ ದಾನವನ್ನು ಸಂತರು, ಧಾರ್ಮಿಕ ಕಾರ್ಯ ಮಾಡುವ ವ್ಯಕ್ತಿಗಳು, ಧರ್ಮಪ್ರಸಾರ ಆಧ್ಯಾತ್ಮಿಕ ಸಂಸ್ಥೆ, ಧಾರ್ಮಿಕ ಚಟುವಟಿಕೆಗಳು ಇತ್ಯಾದಿಗಳಿಗೆ ದ್ರವ್ಯ ಅಥವಾ ವಸ್ತುಗಳ ರೂಪದಲ್ಲಿ ದಾನ ಮಾಡಬೇಕು.

ತನುವಿನ ದಾನ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಇದು ತನುವಿನ ದಾನವಾಗಿದೆ. ಇದಕ್ಕಾಗಿ ವಿವಿಧ ಮಾಧ್ಯಮಗಳಲ್ಲಾಗುವ ದೇವರ ವಿಡಂಬನೆ, ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಬೇಕು.

ಮನಸ್ಸಿನ ದಾನ

ಕುಲದೇವರ ನಾಮಜಪವನ್ನು ಮಾಡುವುದು, ಅವರಿಗೆ ಶರಣಾಗತಿಯಿಂದ ಪ್ರಾರ್ಥನೆಯನ್ನು ಮಾಡುವುದು ಇವುಗಳ ಮೂಲಕ ನಮ್ಮ ಮನಸ್ಸನ್ನು ಭಗವಂತನ ಚರಣಗಳಿಗೆ ಅರ್ಪಿಸುವುದು.

ಆಭರಣಕ್ಕೆ ಸಂಬಂಧಿಸಿದ ಸನಾತನದ ಗ್ರಂಥಗಳು

ಕಂಠಾಭರಣದಿಂದ ಮೇಖಲೆಯ ವರೆಗಿನ ಆಭರಣಗಳು 

ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರ ಮತ್ತು ವಿನ್ಯಾಸ ರಹಿತವಾಗಿ ಏಕಿರಬೇಕು, ಕೊರಳಿನ ಸರದ ವಿನ್ಯಾಸವು ಗೋಲಾಕಾರ, ಎದೆಯ ವರೆಗೆ ಇರುವ ಸರದ ವಿನ್ಯಾಸ ಎಸಳಿನಾಕಾರದಲ್ಲಿ ಏಕಿರಬೇಕು ಇತ್ಯಾದಿ ಮಾಹಿತಿಯುಳ್ಳ ಗ್ರಂಥ.

ಇನ್ನಿತರ ಗ್ರಂಥಗಳು

 ಆಭರಣಗಳ ಮಹತ್ವ

 ಸ್ತ್ರೀ-ಪುರುಷರ ಆಭರಣಗಳು

ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು (ಆಭರಣಗಳ ಬಗೆಗಿನ ಶಾಸ್ತ್ರ ಮತ್ತು ಸೂಕ್ಷ್ಮದಲ್ಲಿನ ಪ್ರಯೋಗ !)

ಸಂಪರ್ಕ ಕ್ರಮಾಂಕ : 9342599299

ಆನ್ ಲೈನ್ ಖರೀದಿಗಾಗಿ: https://sanatanshop.com/