ಅಮೆರಿಕದಲ್ಲಿರುವ ಸಿಖ್ಕ ನಿಯೋಗದ ಅಭಿಪ್ರಾಯ
ವಾಷಿಂಗ್ಟನ್ (ಅಮೇರಿಕಾ) – ಸಿಖ್ಕ ಸಮುದಾಯದ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮಗಳು ಖಲಿಸ್ತಾನಿ ಚಳವಳಿಯನ್ನು ಕುಂಠಿತಗೊಂಡಿದೆ ಎಂದು ಸಿಖ್ಕ ಅಮೆರಿಕಾದ ಜನರ ನಿಯೋಗವು ಹೇಳಿದೆ. ಅಮೆರಿಕಾ ಪ್ರವಾಸದಲ್ಲಿರುವ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಿಯೋಗ ಭೇಟಿಯಾಗಿ ಚರ್ಚಿಸಿತು. ಈ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಜಸ್ ದೀಪ್ ಸಿಂಹ ಮತ್ತು ಕನ್ವಾಲ್ಜಿತ್ ಸಿಂಹ್ ಸೋನಿ ನೇತೃತ್ವದ ನಿಯೋಗವು ಸೀತಾರಾಮನ್ ಅವರನ್ನು ಸ್ವಾಗತಿಸಿತು. ಸಿಖ್ಕ ಸಮುದಾಯವರದು ಕೆಲವು ಬೇಡಿಕೆಗಳಿದ್ದವು; ಆದರೆ ಕಳೆದ ೯ ವರ್ಷಗಳ ಮೋದಿ ಅಧಿಕಾರಾವಧಿಯಲ್ಲಿ ಈ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅಮೆರಿಕದಲ್ಲಿ ಬೆರಳೆಣಿಕೆಯಷ್ಟು ಖಲಿಸ್ತಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದಾಗಿ ಇಡೀ ಸಿಖ್ಕ ಸಮುದಾಯಕ್ಕೆ ಅಪಖ್ಯಾತಿ ಬರುತ್ತಿದೆ,” ಎಂದು ನಿಯೋಗ ಹೇಳಿದೆ.