ಭಾರತದಲ್ಲಿ ಕ್ರೈಸ್ತರು ಬೃಹತ್ ಪ್ರಮಾಣದಲ್ಲಿ ಬಲವಂತವಾಗಿ, ಪ್ರಲೋಭನೆಗಳನ್ನು ನೀಡಿ ಮತ್ತು ಇತರ ಮಾರ್ಗಗಳಿಂದ ಹಿಂದೂಗಳನ್ನು ಮತಾಂತರಿಸುತ್ತಿದ್ದಾರೆ. ಅವುಗಳ ವಿರುದ್ಧ ಜಾಗರೂಕ ಹಿಂದೂಗಳು ಕೆಲವು ಕಡೆಗಳಲ್ಲಿ ಅಪರಾಧಗಳನ್ನು ದಾಖಲಿಸುತ್ತಾರೆ; ಆದರೆ ಕ್ರಿಮಿನಲ್ ಖಟ್ಲೆಯನ್ನು ದಾಖಲಿಸಿದರೂ ಭಾರತದ ದಂಡಸಂಹಿತೆಯ ಪರಿಚ್ಛೇದ ೨೯೫ (ಅ) ದ ಅಂತರ್ಗತ ಕೆಲವು ಅಪರಾಧಗಳಲ್ಲಿ ಕ್ರಿಮಿನಲ್ ಖಟ್ಲೆಯನ್ನು ನಡೆಸಲು ಸರಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಂತಹ ಅನುಮತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಸರಕಾರಕ್ಕೆ ಅನೇಕ ಆಡಳಿತಾತ್ಮಕ ತೊಡಕುಗಳಿಂದಾಗಿ ಕೆಲವು ವರ್ಷಗಳ ವಿಳಂಬವಾಗುತ್ತದೆ. ಈ ವಿಳಂಬ ಕ್ಷಮಿಸುವಂತಹದ್ದಾಗಿಲ್ಲ. ಕ್ರಿಮಿನಲ್ ಸಂಹಿತೆಯ ಪರಿಚ್ಛೇದ ೪೬೮ ಕ್ಕನುಸಾರ ಯಾವುದೇ ಅಪರಾಧವನ್ನು ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ಅದರ ಕ್ರಿಮಿನಲ್ ಪ್ರಕ್ರಿಯೆ ಆರಂಭವಾಗಲು ಸಮಯಮಿತಿಯನ್ನು ನೀಡಲಾಗಿರುತ್ತದೆ. ಈ ಮಿತಿ ಭಂಗವಾದರೆ ಅಥವಾ ವಿಳಂಬವಾದರೆ, ಆ ಕ್ರಿಮಿನಲ್ ಅಪರಾಧವನ್ನು ರದ್ದುಪಡಿಸಬೇಕು, ಎಂದು ಆರೋಪಿಯು ಅರ್ಜಿಯನ್ನು ಸಲ್ಲಿಸಬಹುದು. ಇದೇ ಪದ್ದತಿಯ ಒಂದು ಅರ್ಜಿಯನ್ನು ೪ ಜನ ಕ್ರೈಸ್ತರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಿಲಿಸಿದ್ದರು. ೩.೨.೨೦೨೩ ರಂದು ಬೆಂಗಳೂರು ಉಚ್ಚ ನ್ಯಾಯಾಲಯವು ಅದರ ತೀರ್ಪನ್ನು ನೀಡಿತು.
೧. ಬಲವಂತವಾಗಿ ಮತಾಂತರಿಸಿದ ಬಗ್ಗೆ ಸಂತ್ರಸ್ತ ಹಿಂದೂವು ಕ್ರೈಸ್ತ ಪ್ರಚಾರಕರ ವಿರುದ್ಧ ಅಪರಾಧವನ್ನು ದಾಖಲಿಸುವುದು
೨೮.೮.೨೦೧೧ ರಂದು ಪ್ರವೀಣ ಇವರು ಮುಂದಿನಂತೆ ಹೇಳಿದರು, ಆರೋಪಿಗಳು (ಉಚ್ಚ ನ್ಯಾಯಾಲಯದಲ್ಲಿನ ಅರ್ಜಿದಾರರು) ನನ್ನ ಮನೆಗೆ ಬಂದರು, ಅವರು ತಮ್ಮ ಜೊತೆಗೆ ಯೇಸುವಿನ ಚಿತ್ರ ಮತ್ತು ಕ್ರೈಸ್ತರ ಕೆಲವು ಸಾಹಿತ್ಯಗಳನ್ನು ತಂದಿದ್ದರು. ಅವರು ಪ್ರವೀಣನಿಗೆ ಯೇಸುವಿನ ಛಾಯಾಚಿತ್ರ ವನ್ನು ಎದೆಗೆ ಹಚ್ಚಿಕೊಳ್ಳಲು ಹೇಳಿ ಅದರ ಛಾಯಾಚಿತ್ರವನ್ನು ತೆಗೆದರು. ಅನಂತರ ಅವರು ನಿಮ್ಮ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ದೇವರು ಏನೂ ಕೆಲಸಕ್ಕೆ ಬಾರದವರು. ಯೇಸು ಮಾತ್ರ ಎಲ್ಲ ಮನುಕುಲದ ಕಲ್ಯಾಣವನ್ನು ಮಾಡುತ್ತಾನೆ ಮತ್ತು ಪೃಥ್ವಿಯ ಮೇಲೆ ಜನಿಸುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತಾನೆ ಎಂದು ಹೇಳಿದರು. ಈ ರೀತಿಯಲ್ಲಿ ಅವರು ಬಲವಂತವಾಗಿ ಮತ್ತು ೨೫ ಸಾವಿರ ರೂಪಾಯಿಗಳನ್ನು ನೀಡಿ ಪ್ರವೀಣನನ್ನು ಮತಾಂತರವಾಗಲು ಉತ್ತೇಜಿಸಿದರು. ಈ ಪ್ರಕರಣದಲ್ಲಿ ಸಂತ್ರಸ್ತ ಪ್ರವೀಣ ಕ್ರೈಸ್ತ ಪ್ರಚಾರಕರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಿದನು. ಅನಂತರ ಪ್ರವೀಣ ಇವರು ತಮಗೆ ಹೊಡೆದಿದ್ದಾರೆಂದು ಧೂರ್ತ ಪಾದ್ರಿಗಳು ಉಲ್ಟಾ ಅವರ ಮೇಲೆ ಆರೋಪವನ್ನು ದಾಖಲಿಸಿದರು.
೨. ಅಪರಾಧವನ್ನು ರದ್ದುಪಡಿಸಲು ಕ್ರೈಸ್ತ ಪ್ರಚಾರಕರಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ
ಹಿಂದೂಗಳು ದಾಖಲಿಸಿದ ದೂರಿನ ಪರಿಚ್ಛೇದ ೨೯೫ (ಅ) ಕ್ಕನುಸಾರ ಅಪರಾಧವನ್ನು ಅವಲೋಕಿಸಬೇಕಾದರೆ ಸರಕಾರದ ಪೂರ್ವಾನುಮತಿಯನ್ನು ಪಡೆಯುವ ಆವಶ್ಯಕತೆ ಇರುತ್ತದೆ. ಅದಕ್ಕನುಸಾರ ಪೊಲೀಸರು ಇದರ ಬಗ್ಗೆ ಸರಕಾರಕ್ಕೆ ವಿನಂತಿ ಯನ್ನು ಕಳುಹಿಸಿದರು. ಸರಕಾರ ಈ ವಿನಂತಿಯನ್ನು ಸಮ್ಮತಿಸಲು ೪ ವರ್ಷ ತೆಗೆದುಕೊಂಡಿತು. ಆದ್ದರಿಂದ ಕ್ರೈಸ್ತರು ತಮ್ಮ ವಿರುದ್ಧದ ಅಪರಾಧವನ್ನು ರದ್ದುಪಡಿಸಬೇಕೆಂದು ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಅದಕ್ಕೆ ಅವರು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಿನ ಪರಿಚ್ಛೇದ ೪೬೮ ರ ಆಧಾರ ಪಡೆದುಕೊಂಡರು. ಅದಕ್ಕೆ ಅವರು ಹಿಂದಿನ ಕೆಲವು ತೀರ್ಪುಗಳ ಸಂದರ್ಭಗಳನ್ನು ಜೋಡಿಸಿದರು. ಅವರ ಅಭಿಪ್ರಾಯದಲ್ಲಿ ಪ್ರಕರಣ ಸಮಯ ಮೀರಿ ಹೋಗಿರುವುದರಿಂದ ೨೦೧೭ ರಲ್ಲಿ ದಾಖಲಿಸಿದ ಆರೋಪಪತ್ರ ರದ್ದಾಗಬೇಕು. ಅವರ ಹೇಳಿಕೆಗನುಸಾರ ಭಾರತೀಯ ಸಂವಿಧಾನದ ಪರಿಚ್ಛೇದ ೨೫ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಧರ್ಮದ ಪ್ರಚಾರ ಮಾಡಲು ಅನುಮತಿಯನ್ನು ನೀಡುತ್ತದೆ. ಆದ್ದರಿಂದ ಅಂತಹ ಪ್ರಯತ್ನ ಮಾಡುವವರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ಹೇಗೆ ದಾಖಲಿಸಬಹುದು ?
೩. ಉಚ್ಚ ನ್ಯಾಯಾಲಯವು ಕ್ರೈಸ್ತ ಪ್ರಚಾರಕರ ಅರ್ಜಿಯನ್ನು ತಿರಸ್ಕರಿಸುವುದು
ಆದರೆ ಇದನ್ನು ಸರಕಾರಿ ಪಕ್ಷ ವಿರೋಧಿಸಿತು. ಸರಕಾರದ ಅಭಿಪ್ರಾಯದಲ್ಲಿ ಪರಿಚ್ಛೇದ ೪೭೦ ಕ್ಕನುಸಾರ (ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ) ಈ ಪರಿಚ್ಛೇದ ೪೬೮ ರ ಸಮಯ ಮಿತಿ ಯನ್ನು ನೀಡುವ ಪರಿಚ್ಛೇದವನ್ನು ಸ್ಪಷ್ಟಪಡಿಸುತ್ತದೆ. ಅದರಲ್ಲಿ ಸರಕಾರ ಅಪರಾಧವನ್ನು ಅವಲೋಕಿಸಲು ತೆಗೆದುಕೊಂಡ ಸಮಯವನ್ನು ಕ್ಷಮಿಸಬಹುದು. ಇಂತಹ ಒಂದು ನಿರ್ಣಯ ವನ್ನು ೨೦೧೪ ರಲ್ಲಿ ಸರ್ವೋಚ್ಚ ನ್ಯಾಯಾಲಯ ಸರಾಹ ಮ್ಯಥ್ಯು ವಿರುದ್ಧ ಕಾರ್ಡಿಯೊ ವ್ಯಾಸ್ಕ್ಯುಲರ್ ಎಂಡ್ ಅದರ್ಸ್ ಈ ಪ್ರಕರಣದಲ್ಲಿ ನೀಡಿದೆ. ಈ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ ಮುಂದಿನಂತೆ ಹೇಳಿದೆ, ಕ್ರಿಮಿನಲ್ ಸಂಹಿತೆಯ ಪರಿಚ್ಛೇದ ೪೭೦ ಕ್ಕನುಸಾರ ಸರಕಾರ ಅನುಮತಿ ನೀಡಲು ತೆಗೆದುಕೊಂಡ ಸಮಯವನ್ನು ನ್ಯಾಯಾಲಯ ಕ್ಷಮಿಸಬಹುದು, ಈ ರೀತಿಯ ತೀರ್ಪುಪತ್ರವಿದೆ. ಆದುದರಿಂದ ಕೇವಲ ೪ ವರ್ಷಗಳ ನಂತರ ಆರೋಪಪತ್ರ ದಾಖಲಾಯಿತೆಂದು ನೋಂದಾಯಿಸಿದ ಅಪರಾಧ ರದ್ದಾಗಲು ಸಾಧ್ಯವಿಲ್ಲ. ಅನಂತರ ಕ್ರೈಸ್ತರು ದಾಖಲಿಸಿದ ಅರ್ಜಿಯನ್ನು ಉಚ್ಚ ನ್ಯಾಯಾಲಯ ತಳ್ಳಿ ಹಾಕಿತು ಮತ್ತು ಈ ಪ್ರಕರಣದ ವಿಚಾರಣೆಗೆ ತಾಲೂಕು ದಂಡಾಧಿಕಾರಿಗಳಿಗೆ ವರ್ಗಾವಣೆ ಮಾಡಿತು.
ಈ ಪ್ರಕರಣದಿಂದ ಗಮನಕ್ಕೆ ಬರುವ ವಿಷಯವೆಂದರೆ, ಕ್ರೈಸ್ತರಿಂದ ಬಲವಂತದಿಂದ ಮತ್ತು ಪ್ರಲೋಭನೆಗಳನ್ನು ನೀಡಿ ಮತಾಂತರ ಮಾಡಲಾಗುತ್ತದೆ. ಅನಂತರ ಯಾರಾದರೂ ಇಂತಹ ಮತಾಂತರದ ವಿರುದ್ಧ ಅಪರಾಧವನ್ನು ದಾಖಲಿಸಲು ಧೈರ್ಯ ಮಾಡಿದರೆ, ಉಲ್ಟಾ ಕ್ರೈಸ್ತರಿಂದ ಸಂತ್ರಸ್ತರ ವಿರುದ್ಧವೇ ಕ್ರಿಮಿನಲ್ ಅಪರಾಧವನ್ನು ದಾಖಲಿಸಲಾಗುತ್ತದೆ, ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಸಂಯಮದ ಭೂಮಿಕೆಯನ್ನು ತೆಗೆದುಕೊಂಡಿತು. ನ್ಯಾಯಾಲಯ ಇಲ್ಲಿ ಪರಸ್ಪರರ ವಿರುದ್ಧ ಎರಡು ಕ್ರಿಮಿನಲ್ ಅಪರಾಧಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಸಿಕ್ಕಿದ ಪುರಾವೆಗಳಿಗನುಸಾರ ಕನಿಷ್ಠ ಸ್ತರದಲ್ಲಿನ ನ್ಯಾಯಾಧೀಶರು ಗಮನಹರಿಸುವರು. ಇದರ ವಿಚಾರಣೆಯಾಗುವುದು ಆವಶ್ಯಕ ವಾಗಿದೆ ಎಂದು ಹೇಳಿತು. ಈ ರೀತಿ ನ್ಯಾಯ ನೀಡಿ ಉಚ್ಚ ನ್ಯಾಯಾಲಯ ಕ್ರೈಸ್ತರ ಅರ್ಜಿಯನ್ನು ತಳ್ಳಿಹಾಕಿತು.
೫. ಶಕ್ತಿಶಾಲಿ ಕ್ರೈಸ್ತ ಪ್ರಚಾರಕರ ವಿರುದ್ಧ ಹೋರಾಡಲು ಧರ್ಮಾಭಿಮಾನಿ ನ್ಯಾಯವಾದಿಗಳು ಸಂತ್ರಸ್ತ ಹಿಂದೂಗಳಿಗೆ ಸಹಾಯ ಮಾಡಲು ಮುಂದೆ ಬರಬೇಕು !
ಇಂತಹ ಪ್ರಸಂಗಗಳಲ್ಲಿ ಹಿಂದೂಗಳಿಗೆ ಕಾನೂನಿನ ಸಹಾಯದ ತೀವ್ರ ಅವಶ್ಯಕತೆಯಿರುತ್ತದೆ. ಮತಾಂತರಿಸುವವರಿಗೆ ದೊಡ್ಡ ಪ್ರಮಾಣದಲ್ಲಿ ಹಣದ ಸಹಾಯ ಇರುತ್ತದೆ. ಆದ್ದರಿಂದ ಅವರ ಹಿಂದೆ ದೊಡ್ಡ ದೊಡ್ಡ ನ್ಯಾಯವಾದಿಗಳು ಹೋರಾಡುತ್ತಾರೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಹಿಂದೂಗಳಿಗೆ ಸಹಾಯ ಮಾಡಲು ಧರ್ಮಾಭಿಮಾನಿ ನ್ಯಾಯವಾದಿಗಳು ಸ್ವಲ್ಪ ಸಮಯ ನೀಡಿದರೆ ಒಳ್ಳೆಯದಾಗುತ್ತದೆ; ಇಲ್ಲಿ ಕಾನೂನಿನ ಕಲಂಗಳನ್ನು, ಅವುಗಳ ವ್ಯಾಖ್ಯೆ, ನ್ಯಾಯಾಲಯಗಳ ಹಳೆಯ ನಿರ್ಣಯ ಇವೆಲ್ಲವುಗಳನ್ನು ನೋಡುವುದು ಆವಶ್ಯಕವಾಗಿರುತ್ತದೆ.
೫. ಕ್ರೈಸ್ತರಿಂದಾಗುವ ಮತಾಂತರದ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯು ವೇಗದಿಂದಾಗಲು ಪ್ರಯತ್ನಿಸುವುದು ಆವಶ್ಯಕ !
ಇದರಲ್ಲಿ ಇವೆಲ್ಲ ಕ್ರಿಮಿನಲ್ ಪ್ರಕ್ರಿಯೆಯನ್ನು ವೇಗದಿಂದಾಗಲು ಏನು ಮಾಡಬಹುದು ಎಂಬುದನ್ನು ನೋಡುವುದು ಬಹಳ ಆವಶ್ಯಕವಾಗಿದೆ. ಸದ್ಯದ ಉದಾಹರಣೆಯನ್ನು ನೋಡಿದರೆ, ಅಪರಾಧ ೨೦೧೧ ರಲ್ಲಿ ದಾಖಲಾಗಿದೆ, ೨೦೧೩ ರಲ್ಲಿ ಪೊಲೀಸರು ಸರಕಾರದಿಂದ ಅನುಮತಿಯನ್ನು ಕೇಳಿದರು ಮತ್ತು ಸರಕಾರ ೪ ವರ್ಷಗಳ ನಂತರ ಅನುಮತಿಯನ್ನು ನೀಡಿತು. ಆಮೇಲೆ ಈಗ ವಿಚಾರಣೆಯಾಗುವುದಿತ್ತು, ಆದರೆ ಅಷ್ಟರಲ್ಲಿ ಅಪರಾಧವನ್ನು ರದ್ದು ಪಡಿಸಲು ರಿಟ್ ಅರ್ಜಿಯನ್ನು ದಾಖಲಿಸಲಾಯಿತು. ದೇವರ ದಯೆಯಿಂದ ಈ ಅರ್ಜಿಯ ತೀರ್ಪು ಬಂದು ಅದನ್ನು ತಳ್ಳಿ ಹಾಕಲಾಯಿತು. ಈ ವಿಷಯ ೧೨ ವರ್ಷಗಳ ನಂತರ ಸಾಕ್ಷಿದಾರರಿಗೆ ಹೇಗೆ ನೆನಪಿರಬಹುದು ? ಇದ್ದರೂ ಈಗ ಅವರನ್ನು ಹೇಗೆ ಸಿದ್ಧಪಡಿಸಬೇಕು ? ಎಂಬುದು ಒಂದು ಬಿಕ್ಕಟ್ಟಿನ ಪ್ರಶ್ನೆಯಾಗಿದೆ. ಇಂತಹ ಅಪರಾಧಗಳಿಗೆ ಸರಕಾರ ಕೆಲವು ವಾರಗಳಲ್ಲಿಯೆ ಮನ್ನಣೆ ನೀಡಿದರೆ ಮಾತ್ರ ನಿಜವಾದ ಅರ್ಥದಲ್ಲಿ ಅಪರಾಧದ ತೀರ್ಪು ಬರಬಹುದು. ಇಲ್ಲದಿದ್ದರೆ, ಹಳೆಯ ಕಾಲದ ಬುರುಸು ಹಿಡಿದ ಕಾನೂನುಗಳು, ಸೋಮಾರಿ ಆಡಳಿತ, ಧೂರ್ತ ಕ್ರೈಸ್ತರು, ಅವರಲ್ಲಿರುವ ತುಂಬಾ ಹಣ ಮತ್ತು ಪ್ರಾಪಂಚಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಸೋತು ಹೋದ ನಿದ್ರಿಸ್ತ ಹಿಂದೂಗಳಿಂದಾಗಿ ಮತಾಂತರಕ್ಕೆ ಕಡಿವಾಣ ಬೀಳುವುದು ಅಸಾಧ್ಯವೇ ಆಗಿದೆ.
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೬.೨.೨೦೨೩)