ಅಸಂಖ್ಯಾತ ರಾಷ್ಟ್ರಪ್ರೇಮಿ ಕ್ರಾಂತಿಕಾರಿಗಳು ಇಂದಿನವರೆಗೂ ನೀಡಿರುವ ಕ್ರಾಂತಿಕಾರಿ ಹೋರಾಟದಿಂದ ಇಂದು ನಾವು ಸ್ವತಂತ್ರ ಭಾರತದಲ್ಲಿ ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಕ್ರಾಂತಿಕಾರಿಗಳು ಸಶಸ್ತ್ರ ಮತ್ತು ಅತ್ಯಾಚಾರಿ ಆಡಳಿತಗಾರರಾಗಿರುವ ಬ್ರಿಟಿಷರನ್ನು ಸಾಕುಬೇಕು ಮಾಡಿಬಿಟ್ಟಿದ್ದರು.
೧೯೧೯ ರಲ್ಲಿ ಪಂಜಾಬನ ಅಮೃತಸರದಲ್ಲಿನ ಜಲಿಯನವಾಲಾ ಉದ್ಯಾನದಲ್ಲಿ ಬ್ರಿಟಿಷರ ವಿರುದ್ಧದ ಸಭೆಗೆ ಸಾವಿರಾರು ರಾಷ್ಟ್ರಪ್ರೇಮಿಗಳು ಒಂದಾಗಿದ್ದರು. ಸಭೆ ಪ್ರಾರಂಭವಾಯಿತು ಮತ್ತು ಅಕಸ್ಮಾತ್ತಾಗಿ ಕ್ರೂರ ಬ್ರಿಟಿಷ ಅಧಿಕಾರಿ ಜನರಲ್ ಡಾಯರ್‌ನು ಸೈನಿಕರಿಗೆ ಗುಂಡು ಹಾರಿಸಲು ಆದೇಶಿಸಿದನು. ಮೈದಾನದಲ್ಲಿ ನಾಲ್ಕು ದಿಕ್ಕಿಗೂ ಗೋಡೆಗಳಿದ್ದವು. ಭಾರತೀಯರು ಈ ರೀತಿ ಒಟ್ಟಾಗಿ ಸೇರಿ ಕ್ರಾಂತಿ ಮಾಡಬಾರದು, ಎಂಬ ದುರುದ್ದೇಶದಿಂದ ಡಾಯರ್‌ನು ೨ ಸಾವಿರ ಭಾರತೀಯರ ಭಯಾನಕ ನರಸಂಹಾರ ಮಾಡಿದನು. ನರಸಂಹಾರದ ಸಮಯದಲ್ಲಿ ಬ್ರಿಟಿಷರು ನಡೆಸಿರುವ ಗೋಲಿಬಾರ್‌ನ ಗುರುತು ಜಾಲಿಯನವಾಲಾ ಉದ್ಯಾನದ ಗೋಡೆಗಳ ಮೇಲೆ ಇಂದಿಗೂ ಕಾಣುತ್ತವೆ. ಆ ಸಮಯದಲ್ಲಿ ಅನೇಕ ರಾಷ್ಟ್ರಪ್ರೇಮಿಗಳು ಬ್ರಿಟಿಷರ ಕೈಯಿಂದ ಹತರಾಗಬಾರದೆಂದು, ಅವರು ಉದ್ಯಾನವನದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಜಲಿಯನವಾಲಾ ಉದ್ಯಾನವನದಲ್ಲಿನ ರಕ್ತ ರಂಜಿತ ಇತಿಹಾಸವನ್ನು ಪ್ರತಿಯೊಬ್ಬ ಭಾರತೀಯನು ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು, ಇದು ಈ ಕಾಲಕ್ಕೆ ಅತ್ಯಂತ ಅವಶ್ಯಕವಾಗಿದೆ !