ಮಹಾಲಿಂಗಪುರದಲ್ಲಿ ಸನಾತನ ಸಂಸ್ಥೆ ಆಯೋಜಿಸಿದ್ದ ಸಂತರ ವಿಶೇಷ ಮಾರ್ಗದರ್ಶನ ಸಂಪನ್ನ !
ಮಹಾಲಿಂಗಪುರ – ಸೋಮವಾರ, 10 ಏಪ್ರಿಲ್ 2023 ರಂದು ಸನಾತನ ಸಂಸ್ಥೆಯು ಮಹಾಲಿಂಗಪುರದ ಬನಶಂಕರಿ ದೇವಾಲಯದಲ್ಲಿ ಆಯೋಜಿಸಿದ್ದ ಸಂತರ ವಿಶೇಷ ಮಾರ್ಗದರ್ಶನದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರೂ ಉಪಸ್ಥಿತರಿದ್ದರು.
ಪೂಜ್ಯ ರಮಾನಂದ ಗೌಡ ಇವರು ಮಾತನಾಡಿ ಧರ್ಮವೇ ನಮ್ಮ ದೇಶದ ಮೂಲವಾಗಿದೆ, ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಲಭಿಸದೆ, ಸಮಾಜವು ಅದೋಗತಿಯೆಡೆಗೆ ಸಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂವೂ ಧರ್ಮಶಿಕ್ಷಣ ಪಡೆದು ಧರ್ಮಚರಣೆಯನ್ನು ಮಾಡುವ ಮೂಲಕ ಆಧ್ಯಾತ್ಮಿಕ ಬಲ ಹೆಚ್ಚಿಸಿ ರಾಮರಾಜ್ಯದಂತಹ ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಕಟಿಬದ್ಧರಾಗಬೇಕಿದೆ, ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕ ಬುಕ್ಕರು ಸಹ ತಮ್ಮ ರಾಜ್ಯ ಸ್ಥಾಪನೆಯನ್ನು ಮಾಡುವಾಗ ಗುರುಗಳ ಮಾರ್ಗದರ್ಶನ ಪಡೆದು ಮಾಡಿದರು. ಇದರಿಂದಾಗಿ ಅವರ ಧರ್ಮಸಂಸ್ಥಾಪನೆಯ ಕಾರ್ಯವು ಪೂರ್ಣವಾಯಿತು. ಹಾಗಾಗಿ ನಾವು ಸಹ ರಾಮರಾಜ್ಯದಂತಹ ಆದರ್ಶ ಸಮಾಜ ನಿರ್ಮಾಣದ ಕಾರ್ಯವನ್ನು ಗುರುಗಳ ಮಾರ್ಗದರ್ಶನ ಪಡೆದು ಮಾಡಿದರೆ ಯಶಸ್ಸು ಖಂಡಿತ ಸಿಗುವುದು ಎಂದರು. ಕೊನೆಗೆ ಅವರು “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ಧರ್ಮ ಉಳಿಯಬೇಕಾದರೆ ನಾವೆಲ್ಲ ಹಿಂದೂಗಳು ಧರ್ಮಚರಣೆಯನ್ನು ಮಾಡಬೇಕು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು.