ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !’ದಿನವಿಡೀ ಕುಳಿತುಕೊಂಡು ಕೆಲಸ ಮಾಡುವವರು, ಹಾಗೆಯೇ ಅಗತ್ಯಗಿಂತ ಹೆಚ್ಚು ದಪ್ಪವಾಗಿರುವವರು ದಿನಕ್ಕೆ ಕೇವಲ ೨ ಬಾರಿಯೇ ಆಹಾರವನ್ನು ಸೇವಿಸುವುದರಿಂದ ತುಂಬಾ ಲಾಭವಾಗುತ್ತವೆ; ಆದರೆ ಕೆಲವೊಮ್ಮೆ ತೂಕ ಕಡಿಮೆ ಇರುವವರಿಗೆ, ಹಾಗೆಯೇ ತುಂಬಾ ಪರಿಶ್ರಮ ಪಡುವವರಿಗೆ ಕೇವಲ ೨ ಬಾರಿ ಆಹಾರ ಸೇವಿಸಿದರೆ ಸಾಕಾಗುವುದಿಲ್ಲ. ಆಹಾರವು ಕಡಿಮೆ ಬೀಳುವುದರಿಂದ ಕೆಲವರ ತೂಕವು ಇನ್ನೂ ಕಡಿಮೆಯಾಗತೊಡಗುತ್ತದೆ ಮತ್ತು ನಿತ್ರಾಣ ಬರುತ್ತದೆ. (೨ ಬಾರಿ ಆಹಾರವನ್ನು ಸೇವಿಸುವ ಎಲ್ಲರಿಗೂ ಹೀಗೆ ಆಗುತ್ತದೆ ಎಂದೇನಿಲ್ಲ. ಕೆಲವೊಮ್ಮೆ ಕೆಲವೊಬ್ಬರ ಪ್ರಕೃತಿಗನುಸಾರ ಹೀಗೆ ಆಗಬಹುದು.) ಹೀಗೆ ಆಗುತ್ತಿದ್ದರೆ ಅಗತ್ಯಗನುಸಾರ ಮೂರನೇ ಸಲ ಆಹಾರವನ್ನು ಸೇವಿಸಬೇಕು.’
ಒಬ್ಬರೇ ವ್ಯಾಯಾಮ ಮಾಡುವುದಕ್ಕಿಂತ ಎಲ್ಲರೂ ಒಟ್ಟಿಗೆ ಸೇರಿ ಮಾಡಬೇಕು !
ಯಾವುದೇ ವಿಷಯವನ್ನು ಸತತವಾಗಿ ಮಾಡುವ ಅಭ್ಯಾಸ ಇಲ್ಲದಿರುವುದರಿಂದ ಒಬ್ಬರೇ ವ್ಯಾಯಾಮ ಮಾಡಿದರೆ ಅದು ಕೆಲವೇ ದಿನಗಳಲ್ಲಿ ನಿಲ್ಲಬಹುದು. ವ್ಯಾಯಾಮದಲ್ಲಿ ವ್ಯತ್ಯಯವಾಗಬಾರದೆಂದು ಮನೆಯವರೆಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನೋಡಿ ಒಂದು ಸಮಯವನ್ನು ನಿಗದಿಪಡಿಸಿ ಒಟ್ಟು ಸೇರಿ ವ್ಯಾಯಾಮ ಮಾಡಬೇಕು. ಹೀಗೆ ಮಾಡುವುದರಿಂದ ವ್ಯಾಯಾಮದಲ್ಲಿ ಸಾತತ್ಯವಿರುತ್ತದೆ. ಆಶ್ರಮ ದಲ್ಲಿರುವ ಪೂರ್ಣಕಾಲಿನ ಸಾಧಕರು ಸಹ ವ್ಯಾಯಾಮದ ಸಮಯವನ್ನು ನಿರ್ಧರಿಸಿಕೊಂಡು ಒಟ್ಟಾಗಿ ವ್ಯಾಯಾಮ ಮಾಡಿದರೆ ಅವರಿಗೂ ‘ಸಂಘಟಿತವೃತ್ತಿ’ ಈ ಗುಣವನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ.’
ಜ್ವರದಿಂದ ಚೇತರಿಸಿಕೊಳ್ಳಲು ಸೇವಿಸಬೇಕಾದ ಆಹಾರಗಳು !
‘ಜ್ವರ ಬಂದಿರುವಾಗ ಶರೀರದ ಎಲ್ಲ ವ್ಯವಸ್ಥೆಗಳು ಜ್ವರದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇಂತಹ ಸಮಯದಲ್ಲಿ ಹಾಲು, ಮೊಸರು, ಚಪಾತಿ, ಡ್ರೈಫ್ರುಟ್ಸ್, ಹಣ್ಣುಗಳು ಇವುಗಳಂಹ ಜೀರ್ಣವಾಗದ ಜಡ ಪದಾರ್ಥಗಳನ್ನು ತಿನ್ನಬಾರದು. ಜ್ವರದಿಂದ ಬೇಗ ಚೇತರಿಸಿಕೊಳ್ಳಲು ಹೆಸರುಬೇಳೆಸಾರು (ಹೆಸರುಬೇಳೆಯನ್ನು ಕುದಿಸಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಹಾಕಿ ಮಾಡಿದ ಪದಾರ್ಥ), ಹೆಸರುಬೇಳೆಯ ತೊವ್ವೆ, ತವ್ವೆಅನ್ನ, ತಿಳಿಗಂಜಿ, ಹೆಸರುಬೇಳೆಯನ್ನು ಹಾಕಿ ಮಾಡಿದ ಅಕ್ಕಿಯ ಖಿಚಡಿ, ರವೆಯ ಉಪ್ಪಿಟ್ಟು, ಹಾಲು ಹಾಕದೇ ಮಾಡಿದ ಶಿರಾ, ಅಕ್ಕಿಹಿಟ್ಟನ್ನು ಹುಳಿ ಮಾಡದೇ ತಯಾರಿಸಿದ ದೋಸೆ, ರಾಜಗಿರಿ ಲಡ್ಡು, ಹುರಿದ ಅವಲಕ್ಕಿ ಅಥವಾ ಅರಳು (ಭತ್ತರಳು) ಇವುಗಳಂತಹ ಜೀರ್ಣವಾಗುವ ಹಗುರವಾದ ಪದಾರ್ಥಗಳನ್ನು ತಿನ್ನಬೇಕು. ರುಚಿಗೆ ತಕ್ಕಂತೆ ಲಿಂಬೆಹಣ್ಣಿನ ಉಪ್ಪಿನಕಾಯಿಯನ್ನು ತೆಗೆದುಕೊಳ್ಳಬಹುದು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೩.೨೦೨೩)
ಆಯುರ್ವೇದದ ಬಗ್ಗೆ ಸಂದೇಹವಿದ್ದರೆ ಮುಂದಿನ ವಿ-ಅಂಚೆ ವಿಳಾಸಕ್ಕೆ ಕಳುಹಿಸಿ– [email protected]