ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ
‘ಸನಾತನದ ‘ಮನೆಮನೆಗಳಲ್ಲಿ ಕೈತೋಟ’ ಅಭಿಯಾನದ ಅಡಿಯಲ್ಲಿ ನಿಯಮಿತ ಚೌಕಟ್ಟುಗಳನ್ನು ಮುದ್ರಿಸಲಾಗುತ್ತಿದ್ದು ಅನೇಕ ಜನರು ಸಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅನೇಕ ಜನರು ತಮ್ಮ ಮನೆಯ ಹತ್ತಿರ ಜಾಗದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ಮತ್ತು ತರಕಾರಿಗಳನ್ನು ಬೆಳೆಸಲು ಆರಂಭಿಸಿದ್ದಾರೆ. ‘ಇಂದಿನ ಕಾಲದಲ್ಲಿ ಮನೆಯಲ್ಲಿ ತರಕಾರಿಗಳನ್ನು ಬೆಳೆಸುವುದು, ಅಗತ್ಯವಾಗಿದೆ’, ಎಂಬುದನ್ನು ಇದು ವರೆಗಿನ ಲೇಖನಗಳಿಂದ ನಾವು ತಿಳಿದುಕೊಂಡಿದ್ದೇವೆ.
ಸಮಾಜದಲ್ಲಿ ಹವ್ಯಾಸವೆಂದು ತೋಟಗಾರಿಕೆ ಮಾಡುವವರು ಅನೇಕ ಜನರಿದ್ದಾರೆ; ಆದರೆ ಭಾವೀ ಭೀಕರ ಆಪತ್ಕಾಲದ ಪೂರ್ವಸಿದ್ಧತೆ ಎಂದು ಈ ಅಭಿಯಾನವನ್ನು ಸನಾತನ ಸಂಸ್ಥೆಯಿಂದ ಆರಂಭಿಸಲಾಗಿದ್ದು ಇದರ ಹಿಂದೆ ಸಂತರ ಸಂಕಲ್ಪವು ಕಾರ್ಯನಿರತವಾಗಿದೆ. ಎಲ್ಲರೂ ಈ ತೋಟದ ಸೇವೆಯಲ್ಲಿ ಕೃತಜ್ಞತಾಭಾವವನ್ನಿಟ್ಟು ನಿಸರ್ಗರೂಪಿ ಭಗವಂತನಿಂದ ಕಲಿಯುವ ಮತ್ತು ಚೈತನ್ಯವನ್ನು ಗ್ರಹಿಸುವ ಆನಂದವನ್ನು ಅನುಭವಿಸಬೇಕು. ‘ತಾತ್ತ್ವಿಕ ಮಾಹಿತಿಗಿಂತ ಪ್ರತ್ಯಕ್ಷ ಕೃತಿಯಲ್ಲಿನ ಆನಂದ ಹೆಚ್ಚಿರುತ್ತದೆ’, ಹಾಗಾಗಿ ಇದುವರೆಗೆ ಮನೆಯಲ್ಲಿ ಕೈತೋಟ ಮಾಡದಿರುವವರು ಇಂದಿನಿಂದಲೇ ಕೃತಿ ಮಾಡಲು ಆರಂಭಿಸಬೇಕು. ಕೈತೋಟದ ಬಗ್ಗೆಗಿನ ತಮ್ಮ ಪ್ರಶ್ನೆ, ಹಾಗೆಯೇ ವೈಶಿಷ್ಟ್ಯಪೂರ್ಣ ಅನುಭವಗಳನ್ನು ನಮಗೆ [email protected] ಈ ವಿಳಾಸಕ್ಕೆ ಕಳುಹಿಸಬೇಕು.
– ಸೌ. ರಾಘವಿ ಮಯೂರೇಶ್ವರ ಕೊನೆಕರ, ಗೋವಾ. (೬.೧೨.೨೦೨೨)