ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !

ಬಂಗಾಲದಲ್ಲಿ ಶ್ರೀರಾಮನವಮಿಯಂದು ಮತಾಂಧ ಮುಸ್ಲಿಮರು ನಡೆಸಿದ ಗಲಭೆ ಪ್ರಕರಣ

ಹೂಗ್ಲಿಯಲ್ಲಿ ಹನುಮಾನ್ ಜಯಂತಿಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿ ಗುರುವಾರ ರಿಶ್ರಾ ಪ್ರದೇಶದಲ್ಲಿ ಮಾರ್ಗ ಮೆರವಣಿಗೆ ನಡೆಸಿದರು.

ಕೋಲಕಾತಾ (ಬಂಗಾಲ) – ಬಂಗಾಲದ ಹುಗ್ಲಿಯಲ್ಲಿ ಶ್ರೀರಾಮ ನವಮಿ ವೇಳೆ ನಡೆದ ಹಿಂಸಾಚಾರದ ಬಗ್ಗೆ ತಿಳಿದುಕೊಳ್ಳಲು ತೆರಳಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಸತ್ಯಶೋಧನಾ ಸಮಿತಿಯ `ಫೆಕ್ಟ್ ಫಂಡಿಂಗ್ ಕಮಿಟಿ`ಗೆ ಹಿಂದೂ ಸಂತ್ರಸ್ತರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಲಿಲ್ಲ. ಈ ಕುರಿತು ಕಮಿಟಿಯು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರ ಏನನ್ನು ಮರೆಮಾಚಲು ಯತ್ನಿಸುತ್ತಿದೆ ? ಒಬ್ಬರಿಗೆ ಸಂತ್ರಸ್ತರನ್ನು ಭೇಟಿ ಮಾಡಲು ಮಾತ್ರ ಕರ್ಫ್ಯೂ ವಿಧಿಸಲಾಗುತ್ತಿದೆ ಎಂದು ಹೇಳಿದೆ.

ಕಮಿಟಿಯ ಸದಸ್ಯೆ ಭಾವನಾ ಬಜಾಜ್ ಇವರು, ‘ನಾವು ಸಂತ್ರಸ್ತರನ್ನು ಭೇಟಿ ಮಾಡಲು ಹೋದಾಗ ಪೊಲೀಸರು ತಡೆದರು. ನಾವು ಕೇವಲ ಸಂತ್ರಸ್ತರನ್ನು ಭೇಟಿಯಾಗಲು ಬಯಸಿದ್ದೇವು; ಆದರೆ ಅವರ ತನಕ ತಲುಪಲು ನಮಗೆ ಅವಕಾಶವಿರಲಿಲ್ಲ. ‘ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲವೇ ?’, ಎಂದು ಪ್ರಶ್ನಿಸಿದರು.

ಸಂಪಾದಕರ ನಿಲುವು

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !