ಮತಾಂಧರಿಂದ 3 ನೇ ಬಾರಿ ಬೆಂಗಳೂರಿನ ಬಾಪೂಜಿನಗರದಲ್ಲಿರುವ ಮುನೇಶ್ವರ ದೇವಸ್ಥಾನದ ನಾಗರಕಟ್ಟೆ ಕಲ್ಲುಗಳು ದ್ವಂಸ

ವಿ. ಹಿಂ. ಪ. ದಿಂದ ದೂರು ನೀಡಿ, ಘಟನೆ ನಡೆದು ಹತ್ತು ದಿನಗಳಾದರೂ ಇದುವರೆಗೆ ಮತಾಂಧರನ್ನು ಬಂಧಿಸದ ಪೊಲೀಸರು

ನಾಗದೇವತೆಯ ಕಟ್ಟೆಯನ್ನು ಧ್ವಂಸಗೊಳಿಸಿದ ದಿಶ್ಕರ್ಮಿಗಳು
ಈ ಚಿತ್ರವನ್ನು ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು

ಬೆಂಗಳೂರು : ನಗರದ ಬಾಪೂಜಿ ನಗರದಲ್ಲಿರುವ ಶ್ರೀ ಮುನೇಶ್ವರ ದೇವಸ್ಥಾನದಲ್ಲಿ ಮಾರ್ಚ್ 24 ರ ಶುಕ್ರವಾರದಂದು ಮತಾಂಧರು ದಾಳಿ ಮಾಡಿ ದೇವಸ್ಥಾನದ ನಾಗನಕಟ್ಟೆಯ ಮೂರ್ತಿಗಳನ್ನು ದ್ವಂಸ ಮಾಡಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿರುವ ನಾಲ್ಕು ನಾಗರ ಕಲ್ಲಿನ ಮೂರ್ತಿಗಳಲ್ಲಿ ಎರಡು ಮೂರ್ತಿಗಳನ್ನು ಸಂಪೂರ್ಣವಾಗಿ ಒಡೆದು ಹಾಕಿದ್ದು, ಉಳಿದ ಎರಡು ವಿಗ್ರಹಗಳನ್ನು ಜಜ್ಜಿ ವಿರೂಪ ಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಜಯನಗರದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರಾದ ಶ್ರೀ. ಎಮ್.ಎಲ್. ಶಿವಕುಮಾರ್ ನೇತೃತ್ವದಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

(ಸೌಜನ್ಯ : Tv9 Kannada)

1. ಈ ದೇವಸ್ಥಾನದಲ್ಲಿ ಸತತ 3ನೇ ಬಾರಿ ಈ ರೀತಿ ದಾಳಿ ಮಾಡಲಾಗಿದೆ, ಈ ಮೊದಲು 2020 ರಲ್ಲಿ ಮಂದಿರದ ಮುಂಭಾಗಲ್ಲಿ ಕಟ್ಟಿದ ಭಗವಾ ಧ್ವಜವನ್ನು ಕಿತ್ತು ಸುಡಲಾಗಿತ್ತು. ಈ ಕುರಿತು ಅನೇಕ ಬಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಸಹ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿರಲ್ಲ. ಈ ಕೃತ್ಯವು ಉದ್ದೇಶಪೂರ್ವಕವಾಗಿದ್ದು ಘಟನೆಯ ಹಿಂದೆ ಲ್ಯಾಂಡ್ ಜಿಹಾದ್ ಸಂಚು ಇರುವುದರ ಬಗ್ಗೆ ಸಂಶಯವಿದೆ. ಹಾಗಾಗಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಅಗ್ರಹಿಸಲಾಗಿದೆ.

2. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರು, ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮತಾಂಧ ಮುಸಲ್ಮಾನ ಪುಂಡರ ಹಾವಳಿ ಹೆಚ್ಚಾಗಿದ್ದು, ಸಂಜೆಯ ನಂತರ ಹೆಣ್ಣುಮಕ್ಕಳು ಓಡಾಡುವುದೂ ಸಹ ಕಠಿಣವಾಗಿದೆ, ಇಂತಹ ಕೃತ್ಯಗಳ ಬಗ್ಗೆ ಪ್ರಶ್ನಿಸಿದರೆ ಆ ದುಷ್ಕರ್ಮಿಗಳು ಕಲ್ಲಿನಿಂದ ಒಡೆಯುತ್ತಾರೆ.

ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತಾಂಧರನ್ನು ಕೂಡಲೇ ಬಂಧನ ಮಾಡಬೇಕು ! – ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ

ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಇವರು, ಘಟನೆ ಕುರಿತು ದೂರು ನೀಡಿ 10 ದಿನಗಳಾದರೂ ಇದುವರೆಗೂ ಯಾವುದೇ ದುಷ್ಕರ್ಮಿಗಳ ಬಂಧನವಾಗದಿರುವುದು ದುರಾದೃಷ್ಟಕರವಾಗಿದೆ, ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತಾಂಧರನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಸಿಸಿಟಿವಿಗಳನ್ನು ಅಳವಡಿಸಿ ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ದೇವಾಲಯಗಳ ಬಗ್ಗೆ ಇಷ್ಟೊಂದು ನಿಷ್ಕ್ರಿಯತೆ ಅಪೇಕ್ಷಿತವಿಲ್ಲ ! ದಾಳಿಗೆ ಕಾರಣರಾದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯದ ಪ್ರತಿಯೊಂದು ದೇವಾಲಯವನ್ನು ರಕ್ಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !