ಸುಳ್ಳು ಹಾಜರಾತಿ ತೋರಿಸಿ ಸರಕಾರಿ ಅನುದಾನ ಲೂಟಿ !
ದಾವಣಗೆರೆ – ಇಲ್ಲಿಯ ಒಂದು ಉರ್ದು ಶಾಲೆಯಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕಿಯ ಮೇಲೆ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ರೂಮಿನಾಜ್ ಇವರು ‘ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ ಅವರಿಗೆ ಹಾಜರಾತಿ ನೀಡಲು ಒತ್ತಡ ಹೇರುತ್ತಿದ್ದರು. ಅದಕ್ಕೆ ಹಿಂದೂ ಶಿಕ್ಷಕಿ ಈ ರೀತಿ ಸುಳ್ಳು ಹಾಜರಾತಿ ತೋರಿಸುವುದಿಲ್ಲ ಎಂದು ಹೇಳಿದ್ದರಿಂದ ಕಳೆದ ೩ ತಿಂಗಳಿಂದ ರುಮಿನಾಜ್ ಇವರು ಹಿಂದೂ ಶಿಕ್ಷಕಿಗೆ ವೇತನ ನೀಡಿರಲಿಲ್ಲ. ಆದ್ದರಿಂದ ಈ ಶಿಕ್ಷಕಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದರು. ‘ವಿದ್ಯಾರ್ಥಿಗಳು ತರಗತಿಯಲ್ಲಿ ಇಲ್ಲದಿರುವಾಗ ಹಾಜರಾತಿ ತೋರಿಸಿ ಸರಕಾರಕ್ಕೆ ಸುಳ್ಳು ವರದಿ ಪ್ರಸ್ತುತಪಡಿಸಿ ಅನುದಾನ ಪಡೆಯುತ್ತಿದ್ದಾರೆ, ಇದರ ಬಗ್ಗೆ ವಿಚಾರಣೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು’ ಈ ಶಿಕ್ಷಕಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸುಳ್ಳು ವರದಿ ಪ್ರಸ್ತುತಪಡಿಸಿ ಸರಕಾರಿ ಅನುದಾನ ಲೂಟಿ ಮಾಡುವ ಶಾಲೆಯ ಅನುಮತಿ ರದ್ದು ಪಡಿಸಿ ! – ಹಿಂದೂ ಜನಜಾಗೃತಿ ಸಮಿತಿ
ಈ ಘಟನೆಯ ಬಗ್ಗೆ ಮಾಧ್ಯಮದೆದುರು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, ”ರಾಜ್ಯದಲ್ಲಿ ಸಾವಿರಾರು ಉರ್ದು ಶಾಲೆಗಳಿದ್ದು, ‘ಶಾಲೆಯಲ್ಲಿ ವಿದ್ಯಾರ್ಥಿ ಹಾಜರು ಇಲ್ಲದಿದ್ದರೂ ಸುಳ್ಳು ವರದಿ ಪ್ರಸ್ತುತಪಡಿಸಿ ಸರಕಾರಿ ಅನುದಾನ ಪಡೆಯಲಾಗುತ್ತದೆ’, ಇಂತಹ ಅನೇಕ ದೂರಗಳು ಶಿಕ್ಷಣ ಇಲಾಖೆ ಕಡೆ ಬಂದಿವೆ. ಸಂಪೂರ್ಣ ರಾಜ್ಯದಲ್ಲಿ ಉರ್ದು-ಅರಬಿ ಶಾಲೆ, ಹಾಗೂ ಮದರಸಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವಿಚಾರಣೆ ನಡೆಸಿ ಸರಕಾರ ಇಂತಹ ಶಾಲೆಗಳ ಮಾನ್ಯತೆ ತಕ್ಷಣ ರದ್ದು ಪಡಿಸಬೇಕು.” ಎಂದು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಕರ್ನಾಟಕದಲ್ಲಿನ ಭಾಜಪದ ಸರಕಾರವು ಉರ್ದು ಶಾಲೆಗಳಲ್ಲಿ ನಡೆಯುವ ಈ ರೀತಿ ಭ್ರಷ್ಟಾಚಾರ ಹುಡುಕಿ ಸಂಬಂಧಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! |