‘ಸ್ತ್ರೀಯರ ಋತುಸ್ರಾವವು (ಮುಟ್ಟು) ಅಶೌಚದ (ಮೈಲಿಗೆಯ) ಒಂದು ವಿಧವಾಗಿದೆ, ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ಅವಸ್ಥೆಯು ನಿತ್ಯದ ಅವಸ್ಥೆಗಿಂತ ಬೇರೆ ಆಗಿರುತ್ತದೆ, ಎಂಬುದನ್ನು ಪಾಶ್ಚಿಮಾತ್ಯ ವಿಜ್ಞಾನಿಗಳು ಅನೇಕ ಪ್ರಯೋಗಗಳಿಂದ ಸಿದ್ಧಪಡಿಸಿದ್ದಾರೆ. ಹಿಂದಿನ ಕಾಲದಲ್ಲಿ ಋತುಸ್ರಾವದ ಸಮಯದಲ್ಲಿ ಸ್ತ್ರೀಯರು ದೇವರು-ಧರ್ಮಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಹೋಗದಿರುವುದು, ಸಂಪೂರ್ಣ ವರ್ಷಕ್ಕಾಗಿ ಸಂಗ್ರಹಿಸಿದ ವಸ್ತುಗಳನ್ನು ಮುಟ್ಟದಿರುವುದು, (ಉದಾ. ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಇತ್ಯಾದಿ), ಅಡುಗೆಯನ್ನು ಮಾಡದೇ ವಿಶ್ರಾಂತಿ ಪಡೆಯುವುದು ಇತ್ಯಾದಿ ಆಚಾರಧರ್ಮಗಳನ್ನು ಪಾಲಿಸುತ್ತಿದ್ದರು. ಇಂದಿನ ಕಾಲದಲ್ಲಿನ ಜಾಗದ ಸಮಸ್ಯೆ, ನೌಕರಿಯ ಬಂಧನ ಇತ್ಯಾದಿ ಕಾರಣಗಳಿಂದ ಸ್ತ್ರೀಯರಿಗೆ ಋತುಸ್ರಾವವನ್ನು ಪಾಲಿಸುವುದು ಅಡಚಣೆಯ ಮತ್ತು ತೊಂದರೆದಾಯಕವಾಗಿದೆ ಎಂದು ಹೇಳಲಾಗುತ್ತದೆ. ಋತುಸ್ರಾವಿಗೆ ಸಂಬಂಧಿಸಿದ ಸ್ತ್ರೀಯರ ಮೇಲೆ ಮತ್ತು ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಲು ‘ಯು.ಎ.ಎಸ್.’ ಈ ಉಪಕರಣದಿಂದ ಕೆಲವು ಪರೀಕ್ಷಣೆಗಳನ್ನು ಮಾಡಲಾಯಿತು. ಈ ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಓರ್ವ ಸ್ತ್ರೀಯ ಋತುಸ್ರಾವ ನಡೆಯುತ್ತಿರುವಾಗ ಮತ್ತು ಇಲ್ಲದಿರುವಾಗ (ಋತುಸ್ರಾವ ಮುಗಿದು ೪-೫ ದಿನಗಳ ನಂತರ) ಅವಳ, ಹಾಗೆಯೇ ಅವಳು ಸ್ಪರ್ಶ ಮಾಡಿದ ಆಹಾರ ಮತ್ತು ನೀರನ್ನು ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆ ಮಾಡಲಾಯಿತು. ಅವಳ ಋತುಸ್ರಾವ ನಡೆಯುತ್ತಿರುವಾಗ ಅವಳು ನಾಮಜಪವನ್ನು ಮಾಡಿದರೆ ಅವಳ ಮೇಲೆ ಏನು ಪರಿಣಾಮವಾಗುತ್ತದೆ ? ಎಂಬುದನ್ನೂ ಅಧ್ಯಯನ ಮಾಡಲಾಯಿತು. ಹಾಗೆಯೇ ಅವಳ ಋತುಸ್ರಾವ ಇಲ್ಲದಿರುವಾಗ ಅವಳು ಮುಟ್ಟಿದ ಆಹಾರ ಮತ್ತು ನೀರಿನ ಮೇಲೆ ಏನು ಪರಿಣಾಮವಾಗುತ್ತದೆ, ಎಂಬುದನ್ನೂ ಅಧ್ಯಯನ ಮಾಡಲಾಯಿತು. ಇದನ್ನು ಕೆಳಗೆ ನೀಡಿದ ಕೋಷ್ಟಕದಲ್ಲಿ ಕೊಡಲಾಗಿದೆ.
ಮೇಲಿನ ನಿರೀಕ್ಷಣೆಯಿಂದ ಗಮನಕ್ಕೆ ಬಂದ ವಿಷಯಗಳು
೧. ಸ್ತ್ರೀಯ ಋತುಸ್ರಾವ ಪ್ರಾರಂಭವಿರುವಾಗ ಅವಳಲ್ಲಿ ಸ್ವಲ್ಪವೂ ಸಕಾರಾತ್ಮಕ ಊರ್ಜೆ ಇರಲಿಲ್ಲ ಕೇವಲ ನಕಾರಾತ್ಮಕ ಊರ್ಜೆ ಕಂಡುಬಂದಿತು.
೨. ಋತುಸ್ರಾವ ಪ್ರಾರಂಭವಿರುವಾಗ ಅವಳು ೨೦ ನಿಮಿಷಗಳ ವರೆಗೆ ನಾಮಜಪ ಮಾಡಿದಾಗ ಅವಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದು ವೈಶಿಷ್ಟ್ಯಪೂರ್ಣವಾಗಿದೆ.
೩. ಋತುಸ್ರಾವ ಮುಗಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿ ಅವಳಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.
೪. ಋತುಸ್ರಾವ ಪ್ರಾರಂಭವಿರುವಾಗ ಅವಳು ಆಹಾರ ಮತ್ತು ನೀರನ್ನು ಸ್ಪರ್ಶಿಸಿದಾಗ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿ ನಕಾರಾತ್ಮಕ ಊರ್ಜೆ ಉತ್ಪನ್ನವಾಯಿತು. ತದ್ವಿರುದ್ಧ ಅವಳು ಋತುಸ್ರಾವ ಇಲ್ಲದಿರುವಾಗ ಆಹಾರ ಮತ್ತು ನೀರನ್ನು ಸ್ಪರ್ಶ ಮಾಡಿದಾಗ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.
೨. ನಿಷ್ಕರ್ಷ
ಋತುಸ್ರಾವದ ಸಮಯದಲ್ಲಿ ಸ್ತ್ರೀಯರ ಮೇಲೆ, ಹಾಗೆಯೇ ಅವರು ಸ್ಪರ್ಶಿಸಿದ ವಸ್ತುಗಳ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ. ಋತುಸ್ರಾವದ ಸಮಯದಲ್ಲಿ ಅವಳು ನಾಮಜಪ ಮಾಡಿದಾಗ ಅವಳ ಮೇಲಿನ ನಕಾರಾತ್ಮಕ ಪರಿಣಾಮ ಕಡಿಮೆ ಅಥವಾ ಇಲ್ಲವಾಗಿ ಅವಳ ಸಾತ್ತ್ವಿಕತೆ ಹೆಚ್ಚಾಗುತ್ತದೆ.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಋತುಸ್ರಾವ ಪ್ರಾರಂಭವಿರುವಾಗ ಸ್ತ್ರೀಯರಲ್ಲಿನ ರಜೋ ಗುಣ ಹೆಚ್ಚಾಗಿ ಅವರ ಸಾತ್ತ್ವಿಕತೆ ಕಡಿಮೆಯಾಗುತ್ತದೆ : ಸ್ತ್ರೀಯರ ಋತುಸ್ರಾವಕ್ಕೆ ‘ರಜಸ್ವಲಾಧರ್ಮ, ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಸ್ತ್ರೀಯರಲ್ಲಿನ ರಜೋಗುಣ ಹೆಚ್ಚಾಗುತ್ತದೆ. ರಜೋ ಗುಣ ಹೆಚ್ಚಾದುದರಿಂದ ಸ್ತ್ರೀಯರ ಮೇಲೆ ವಾತಾವರಣದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅವರಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ.
೩ ಆ. ಋತುಸ್ರಾವ ಪ್ರಾರಂಭವಿರುವಾಗ ಸ್ತ್ರೀಯರಿಂದ ಪ್ರಕ್ಷೇಪಿಸುವ ತೊಂದರೆದಾಯಕ ಸ್ಪಂದನಗಳಿಂದ ಅವಳು ಸ್ಪರ್ಶಿಸಿದ ಆಹಾರ ಮತ್ತು ನೀರು ದೂಷಿತವಾಗುವುದು : ಪರೀಕ್ಷಣೆಯಲ್ಲಿನ ಸ್ತ್ರೀಯ ಋತುಸ್ರಾವ ಪ್ರಾರಂಭವಿರುವಾಗ ಆಹಾರ ಮತ್ತು ನೀರನ್ನು ಸ್ಪರ್ಶ ಮಾಡಿದಾಗ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದು ಋತುಸ್ರಾವ ಪ್ರಾರಂಭವಿರುವಾಗ ಸ್ತ್ರೀಯಿಂದ ಪ್ರಕ್ಷೇಪಿಸುವ ತೊಂದರೆದಾಯಕ ಸ್ಪಂದನಗಳ ಪರಿಣಾಮವಾಗಿದೆ.
ಈ ಅವಧಿಯಲ್ಲಿ ಅವಳಿಂದ ಪ್ರಕ್ಷೇಪಿಸುವ ತೊಂದರೆದಾಯಕ ಸ್ಪಂದನಗಳಿಂದ ಸುತ್ತಮುತ್ತಲಿನ ವಾತಾವರಣ ದೂಷಿತವಾಗುತ್ತದೆ.
೩ ಇ. ಪರೀಕ್ಷಣೆಯಲ್ಲಿನ ಸ್ತ್ರೀಯು ಋತುಸ್ರಾವ ಪ್ರಾರಂಭವಿರುವಾಗ ನಾಮಜಪ ಮಾಡಿದ್ದರಿಂದ ಅವಳ ಸುತ್ತಲೂ ನಾಮಜಪದ ಸಂರಕ್ಷಣ-ಕವಚ ನಿರ್ಮಾಣವಾಗುವುದು : ಮುಟ್ಟಿನ ಸಮಯದಲ್ಲಿ ಸ್ತ್ರೀಯರಲ್ಲಿನ ರಜ-ತಮ ಹೆಚ್ಚಾಗುವುದರಿಂದ ಇಂತಹ ಸ್ಥಿತಿಯಲ್ಲಿ ಅನಿಷ್ಟ (ಕೆಟ್ಟ) ಶಕ್ತಿಗಳಿಂದ ಅವರ ಮೇಲೆ ಆಕ್ರಮಣ ವಾಗುವ ಸಾಧ್ಯತೆಯಿದೆ; ಆದ್ದರಿಂದ ಮುಟ್ಟಿನ ೪-೫ ದಿನಗಳಲ್ಲಿ ಸ್ತ್ರೀಯರು ಹೆಚ್ಚೆಚ್ಚು ಪ್ರಾರ್ಥನೆ, ಕೃತಜ್ಞತೆ ಮತ್ತು ನಾಮಜಪ ಮಾಡಲು ಪ್ರಯತ್ನಿಸಬೇಕು. ಇದರಿಂದ ಅವರ ಸುತ್ತಲೂ ಸಂರಕ್ಷಣ-ಕವಚ ನಿರ್ಮಾಣವಾಗಿ ತೊಂದರೆದಾಯಕ ಶಕ್ತಿಗಳಿಂದ ಅವರ ರಕ್ಷಣೆಯಾಗುವುದು. ಪರೀಕ್ಷಣೆಯಲ್ಲಿನ ಸ್ತ್ರೀಯ ಮುಟ್ಟು ಪ್ರಾರಂಭವಿರುವಾಗ ನಾಮಜಪ ಮಾಡಿದುದರಿಂದ ಅವಳಿಗೆ ಚೈತನ್ಯ ದೊರಕಿ ಅವಳ ಸುತ್ತಲೂ ಸಂರಕ್ಷಣ- ಕವಚ ನಿರ್ಮಾಣವಾಯಿತು, ಹಾಗೆಯೇ ಅವಳ ಸಾತ್ತ್ವಿಕತೆ ಸಹ ಹೆಚ್ಚಾಯಿತು. ಸ್ವಲ್ಪದರಲ್ಲಿ ಹಿಂದಿನ ಕಾಲದಲ್ಲಿ ಸ್ತ್ರೀಯರು ಸಂಪೂರ್ಣ ವರ್ಷಕ್ಕಾಗಿ ಸಂಗ್ರಹಿಸಿದ (ಉದಾ. ಉಪ್ಪಿನಕಾಯಿ, ಹಪ್ಪಳ, ಸೆಂಡಿಗೆ ಇತ್ಯಾದಿ)ವಸ್ತುಗಳನ್ನು ಸ್ಪರ್ಶಿಸದಿರುವುದು, ಅಡುಗೆಯನ್ನು ಮಾಡದೇ ವಿಶ್ರಾಂತಿ ಪಡೆಯುವುದು ಇತ್ಯಾದಿ ಆಚಾರಧರ್ಮಗಳನ್ನು ಪಾಲಿಸುತ್ತಿದ್ದರು, ಇದು ಎಷ್ಟು ಯೋಗ್ಯವಾಗಿತ್ತು, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಹಿಂದಿನಂತೆ ಎಲ್ಲವನ್ನೂ ಪಾಲಿಸುವುದು ಸಾಧ್ಯವಾಗದಿದ್ದರೂ, ಕನಿಷ್ಟಪಕ್ಷ ಮುಟ್ಟಿನ ಸಮಯದಲ್ಲಿ ಹೆಚ್ಚೆಚ್ಚು ನಾಮಜಪ ಮಾಡಿದರೆ ತೊಂದರೆದಾಯಕ ಸ್ಪಂದನಗಳಿಂದ ಸ್ತ್ರೀಯರ ರಕ್ಷಣೆಯಾಗುವುದು. ನಾಮಜಪವನ್ನು ಮನಸ್ಸಿನಿಂದ ಮಾಡುವಂತಹದ್ದಾಗಿರುವುದರಿಂದ ಅದಕ್ಕೆ ಸ್ಥಳ-ಕಾಲ, ಶೌಚ-ಅಶೌಚ ಇತ್ಯಾದಿಗಳ ಯಾವುದೇ ಬಂಧನವಿಲ್ಲ.’’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ವಿ-ಅಂಚೆ : [email protected]