ಭಜರಂಗದಳದ ಕಾರ್ಯಕರ್ತರಿಂದ ಸಿಬ್ಬಂದಿಗೆ ತಕ್ಕಶಾಸ್ತಿ
ರಾಯಗಡ – ಶ್ರೀರಾಮನವಮಿಯ ದಿನದಂದು ಇಲ್ಲಿನ ’ಕರ್ಜತ್ ಡಿ ಮಾರ್ಟ್’ ನಲ್ಲಿ ಖರಿದಿಗಾಗಿ ಹೋಗಿದ್ದ ಹಿಂದೂ ಗ್ರಾಹಕರೊಬ್ಬರ ತಿಲಕವನ್ನು ಒರೆಸಲು ಅಲ್ಲಿಯ ಸಿಬ್ಬಂದಿ ಅನಿವಾರ್ಯಗೊಳಿಸಿದರು. ಈ ಆಘಾತಕಾರಿ ಘಟನೆಯನ್ನು ಅರಿತ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ‘ಕರ್ಜತ್ ಡಿ ಮಾರ್ಟ್’ಗೆ ತೆರಳಿ ತಿಲಕವನ್ನು ಒರೆಸಲು ಹೇಳಿದ ಸಿಬ್ಬಂದಿಯ ತಕ್ಕಶಾಸ್ತಿ ಮಾಡಿದರು. ‘ಯಾವ ಕಾರಣಕ್ಕೆ ತಿಲಕವನ್ನು ಒರೆಸುವಂತೆ ಹೇಳಿದರು?’, ಎಂದು ಬಜರಂಗದಳದವರು ಕೇಳಿದಾಗ ಸಿಬ್ಬಂದಿಯ ಮಾತು ನಿಂತು ಹೋಯಿತು. ’ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಧರ್ಮದಲ್ಲಿ ತಾರತಮ್ಯ ಬೇಡ; ಅದಕ್ಕೇ ತಿಲಕ ಒರೆಸುವಂತೆ ಹೇಳಿದ್ದು’ ಎಂದು ಸಿಬ್ಬಂದಿಯು ತಡವರಿಸುತ್ತಾ ಉತ್ತರಿಸಿದ. ಅದಕ್ಕೆ ಅಲ್ಲಿದ್ದ ಮುಸ್ಲಿಂ ಗ್ರಾಹಕರೊಬ್ಬರು ಹಾಕಿಕೊಂಡಿದ್ದ ಟೋಪಿ ತೆಗೆಯಲು ಏಕೆ ಹೇಳಲಿಲ್ಲ?’,ಎಂದು ಭಜರಂಗದಳದ ಕಾರ್ಯಕರ್ತರು ಸಿಬ್ಬಂದಿಯನ್ನು ಕೇಳಿದಾಗ ಸಿಬ್ಬಂದಿಯ ಮಾತು ನಿಂತುಹೋಯಿತು. ಈ ರೀತಿ ತಿಲಕ ಒರೆಸಲು ಮತ್ತೊಮ್ಮೆ ಯಾವುದೇ ಹಿಂದೂಗೆ ಹೇಳಿದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದಾಗಿ ಗದರಿಸಿದರು. (ಹಿಂದೂಗಳ ಧರ್ಮಾಚರಣೆಯ ಮೇಲೆ ಪ್ರಶ್ನಿಸುವವರಿಗೆ ಉತ್ತರ ಕೊಡುವ ಭಜರಂಗದಳದ ಕಾರ್ಯಕರ್ತರಿಗೆ ಅಭಿನಂದನೆಗಳು ! – ಸಂಪಾದಕರು)
ಸಂಪಾದಕರ ನಿಲುವುಹಿಂದೂ ಬಹುಸಂಖ್ಯಾತ ಭಾರತದಲ್ಲಿ, ಹಿಂದೂಗಳಿಗೆ ಇಂತಹ ಸಮಯ ಬರುತ್ತದೆ, ಇದು ಖೇದಕರ ! |