ಗುಂಟೂರು (ಆಂಧ್ರಪ್ರದೇಶ) ಇಲ್ಲಿಯ ದುಷ್ಕರ್ಮಿಗಳಿಂದ ಶ್ರೀಗಣೇಶನ ಮೂರ್ತಿ ಧ್ವಂಸ !

ಈ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ

ಗುಂಟೂರು (ಆಂಧ್ರಪ್ರದೇಶ) – ಇಲ್ಲಿಯ ಪಿರಂಗಿಪುರದಲ್ಲಿರುವ ಹೌಸ್ ಗಣೇಶ ಹೆಸರಿನ ಗ್ರಾಮದಲ್ಲಿನ ಶ್ರೀಗಣೇಶ ದೇವಸ್ಥಾನದಲ್ಲಿನ ಶ್ರೀ ಗಣೇಶನ ಮೂರ್ತಿಯನ್ನು ಏಪ್ರಿಲ್ ೩ ರಂದು ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಇಲ್ಲಿಯವರೆಗೆ ಆರೋಪಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಆರೋಪಿಗಳು ದೇವಸ್ಥಾನದ ಶ್ರೀ ಗಣೇಶನ ಮೂರ್ತಿಯ ಅನೇಕ ತುಂಡುಗಳು ಮಾಡಿದ್ದಾರೆ. ಇದರಿಂದ ಅಲ್ಲಿಯ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹಿಂದೂಗಳಿಗೆ ತಾಳ್ಮೆಯಿಂದ ಇರಲು ಹೇಳಿದ್ದಾರೆ. (ಯಾವಾಗಲೂ ಹಿಂದೂಗಳೇ ತಾಳ್ಮೆಯಿಂದ ಇರುತ್ತಾರೆ ಹಾಗೂ ಮತಾಂಧರು ಅವರ ಧರ್ಮ ಗ್ರಂಥವನ್ನು ಬೆಂಕಿ ಅನಾಹುತವಾಗಿರುವ ಸುಳ್ಳು ಸುದ್ದಿ ಪಸರಿಸಿ ಗಲಭೆ ನಡೆಸುತ್ತಾರೆ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು) ಇದರ ಜೊತೆಗೆ ಪೊಲೀಸರು ’ಆರೋಪಿಗಳಿಗೆ ಬೇಗನೆ ಬಂಧಿಸುವೇವು’, ಎಂದು ಆಶ್ವಾಸನೆ ನೀಡಿದ್ದಾರೆ. (ರಾಜಕಾರಣಿಗಳ ಹಾಗೆ ಆಶ್ವಾಸನೆ ನೀಡಿ ಜನರಿಗೆ ದಾರಿ ತಪ್ಪಿಸುವ ಪೋಲಿಸರು ! – ಸಂಪಾದಕರು) ದೇವಸ್ಥಾನದಲ್ಲಿ ಹೊಸದಾದ ಮೂರ್ತಿ ಸ್ಥಾಪನೆ ಮಾಡಲಾಗುವುದು.

ಹಿಂದೂಗಳ ದೇವಸ್ಥಾನಗಳನ್ನು ನಿರಂತರವಾಗಿ ಗುರಿ ಮಾಡಲಾಗುತ್ತಿರುವಾಗ ಕ್ರಮ ಕೈಗೊಳ್ಳಲಾಗುವುದಿಲ್ಲ ! – ಭಾಜಪ

ಭಾಜಪದ ನಾಯಕ ಸುನಿಲ ದೇವಧರ

ಭಾಜಪದ ನಾಯಕ ಸುನಿಲ ದೇವಧರ ಇವರು, ರಾಜ್ಯದಲ್ಲಿನ ಸರಕಾರದ ಕಾಲಾವಧಿಯಲ್ಲಿ ಹಿಂದೂ ದೇವಸ್ಥಾನಗಳನ್ನು ನಿರಂತರವಾಗಿ ಗುರಿ ಮಾಡಲಾಗುತ್ತಿದೆ; ಆದರೆ ಈ ಪ್ರಕರಣದಲ್ಲಿ ಯಾರನ್ನು ಬಂಧಿಸಿಲ್ಲ. ರಾಜ್ಯದಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಆಗಿರುವುದರಿಂದ ಈ ರೀತಿ ಘಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಂಪಾದಕರ ನಿಲುವು

ಆಂಧ್ರಪ್ರದೇಶದಲ್ಲಿ ನಿರಂತರವಾಗಿ ಹಿಂದೂಗಳ ದೇವಸ್ಥಾನಗಳನ್ನು ಗುರಿ ಮಾಡಲಾಗುತ್ತಿರುವಾಗ ರಾಜ್ಯದಲ್ಲಿನ ಕ್ರೈಸ್ತ ಮುಖ್ಯಮಂತ್ರಿಯಾಗಿರುವ ವೈ. ಎಸ್. ಆರ್. ಕಾಂಗ್ರೆಸ್ ಸರಕಾರದಿಂದ ಕ್ರಮ ಕೈಗೊಳ್ಳುವ ಲಕ್ಷಣ ಕಾಣುತ್ತಿಲ್ಲ, ಇದರ ಬಗ್ಗೆ ತಮ್ಮನ್ನು ಕಾನೂನು ಪ್ರಿಯರು, ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವುದಿಲ್ಲ, ಇದನ್ನು ಗಮನಿಸಿ !