ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮಧುಮೇಹ, ಅಧಿಕ ರಕ್ತದೊತ್ತಡ (ಬ್ಲಡ್‌ಪ್ರೇಶರ್), ಥೈರಾಯಿಡ್ ಗ್ರಂಥಿಗಳ ರೋಗ, ಮಲಬದ್ಧತೆ ಇತ್ಯಾದಿ ಅನೇಕ ರೋಗಗಳು ವಾಸಿಯಾಗಲು ಸಹಾಯವಾಗುತ್ತದೆ. ‘ಅನೇಕ ರೋಗಗಳಿಗೆ ಉಚಿತ ಔಷಧಿಯಾಗಿರುವ ವ್ಯಾಯಾಮವನ್ನು ಮಾಡದೇ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಔಷಧಿಗಳನ್ನು ತೆಗೆದುಕೊಳ್ಳದರಲ್ಲೇ ಜನರಿಗೆ ಧನ್ಯತೆ ಎನಿಸುತ್ತದೆ’, ಇದಕ್ಕೇನು ಹೇಳಬೇಕು ?’
ಶಾಂತ ನಿದ್ರೆಗಾಗಿ, ಹಾಗೆಯೇ ಕೂದಲುಗಳ ಆರೈಕೆಗಾಗಿ ಪ್ರತಿದಿನ ಮಲಗುವಾಗ ತಲೆಗೆ ಎಣ್ಣೆ ಹಚ್ಚಿ !
ಅನೇಕರಿಗೆ ರಾತ್ರಿ ಬೇಗ ನಿದ್ರೆ ಬರದಿರುವುದು, ಹಾಗೆಯೇ ಮಧ್ಯದಲ್ಲಿ ಎಚ್ಚರವಾದರೆ, ಪುನಃ ನಿದ್ರೆ ಬರದಿರುವುದು ಇಂತಹ ತೊಂದರೆಗಳಿರುತ್ತವೆ. ಪ್ರತಿದಿನ ರಾತ್ರಿ ಮಲಗುವಾಗ ತಲೆಗೆ ಎಣ್ಣೆಯನ್ನು ಹಚ್ಚಿದರೆ ಈ ತೊಂದರೆ ಕಡಿಮೆಯಾಗಲು ಸಹಾಯವಾಗುತ್ತದೆ. ೨೦೦ ಮಿ.ಲೀ. ಕೊಬ್ಬರಿ ಎಣ್ಣೆಯಲ್ಲಿ ಸುಮಾರು ೧೦ ಗ್ರಾಮ್ ಭೀಮಸೇನಿ ಕರ್ಪೂರವನ್ನು ಹಾಕ ಬೇಕು. ಪ್ರತಿದಿನ ರಾತ್ರಿ ಮಲಗುವಾಗ ಬಲ ಅಂಗೈ ಮೇಲೆ ಈ ಎಣ್ಣೆಯ ೨ ಹನಿಗಳಷ್ಟು ತೆಗೆದುಕೊಳ್ಳಬೇಕು. ಎಡ ಕಿರು ಬೆರಳಿನಿಂದ ಈ ಎಣ್ಣೆಯನ್ನು ಎರಡು ಕಿವಿಗಳಲ್ಲಿ ಒಳಗಿನಿಂದ ಹಚ್ಚಬೇಕು. ಆಗ ಎಡ ಅಂಗೈ ಮೇಲೆ ಸ್ವಲ್ಪ ಎಣ್ಣೆಯನ್ನು ತೆಗೆದು ಕೊಳ್ಳಬೇಕು. ಅದರಲ್ಲಿ ಬಲ ಕಿರುಬೆರಳನ್ನು ಅದ್ದಿ ಎರಡೂ ಮೂಗಿನ ಹೊಳ್ಳೆಗಳಿಗೆ ಒಳಗಿನಿಂದ ಎಣ್ಣೆಯನ್ನು ಹಚ್ಚಬೇಕು. ಉಳಿದ ಎಣ್ಣೆಯನ್ನು ತಲೆಗೆ, ಅಂದರೆ ಕೂದಲುಗಳ ಬೇರುಗಳಿಗೆ ಹಚ್ಚಬೇಕು. ಹೀಗೆ ಮಾಡಿದರೆ ಶಾಂತ ನಿದ್ರೆ ಬರುತ್ತದೆ, ಹಾಗೆಯೇ ಕೂದಲುಗಳಿಗೂ ಒಳ್ಳೆಯ ಪೋಷಣೆಯಾಗಿ ಕೂದಲುಗಳು ಉದುರುವುದಿಲ್ಲ. (ತಲೆಯ ಎಣ್ಣೆಯು ಹಾಸಿಗೆಗೆ ತಾಗದಂತೆ ಅಗತ್ಯ ವಾಗಿ ಕಾಳಜಿ ವಹಿಸಬೇಕು.)’
ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋದಾಗ ಬಿಸಿಲಿನಿಂದ ರಕ್ಷಣೆಯಾಗಲು ಹೀಗೆ ಮಾಡಿ !
‘ಈ ದಿನಗಳಲ್ಲಿ ಮಧ್ಯಾಹ್ನ ಸಮಯದಲ್ಲಿ ಬಿಸಿಲಿನ ತೀವ್ರತೆ ಬಹಳ ಹೆಚ್ಚಿರುತ್ತದೆ. ಅದರಿಂದ ಮಧ್ಯಾಹ್ನದ ಸಮಯ ಹೊರಗೆ ಹೋಗಲಿಕ್ಕಿದ್ದರೆ ಬಿಸಿಲಿನಿಂದ ರಕ್ಷಣೆಯಾಗಲು ಛತ್ರಿ, ಗಾಗಲ್ ಇತ್ಯಾದಿಗಳನ್ನು ಬಳಸಬೇಕು. ಅವಶ್ಯಕತೆಗನುಸಾರ ಒಂದು ಒದ್ದೆ ಬಟ್ಟೆ ತಲೆಯ ಮೇಲಿಡಬೇಕು. ಬಾಯಾರಿಕೆಯಾದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಬಿಸಿಲಿನ ತೊಂದರೆ ಯಾಗುವುದಿಲ್ಲ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೨.೨೦೨೩)
ಆಯುರ್ವೇದದ ಬಗ್ಗೆ ಸಂದೇಹವಿದ್ದರೆ ಮುಂದಿನ ವಿ-ಅಂಚೆ ವಿಳಾಸಕ್ಕೆ ಕಳುಹಿಸಿ a[email protected]