ಸಾಧಕರೇ, ವಿವಿಧ ಘಟನೆಗಳ ಕುರಿತು ದೊರಕುವ ಮುನ್ಸೂಚನೆಗಳು ಮತ್ತು ಕಾಣಿಸುವ ದೃಶ್ಯಗಳ ಬಗ್ಗೆ ಮುಂದಿನ ದೃಷ್ಟಿಕೋನವನ್ನು ಇಟ್ಟುಕೊಂಡು ಸಾಧನೆಯ ದೃಷ್ಟಿಯಿಂದ ಅವುಗಳ ಲಾಭವನ್ನು ಮಾಡಿಕೊಳ್ಳಿರಿ !

(ಸದ್ಗುರು) ಡಾ. ಮುಕುಲ ಗಾಡಗೀಳ

‘ಕೆಲವು ಸಾಧಕರಿಗೆ ಜಾಗೃತಾವಸ್ಥೆಯಲ್ಲಿ ವಿವಿಧ ದೃಶ್ಯಗಳು ಕಾಣಿಸುತ್ತವೆ ಮತ್ತು ಮುನ್ಸೂಚನೆಗಳು ಸಿಗುತ್ತವೆ. ಅವುಗಳಲ್ಲಿನ ಕೆಲವು ದೃಶ್ಯಗಳು ಒಳ್ಳೆಯ ಮತ್ತು ಕೆಲವು ಕೆಟ್ಟ ಘಟನೆಗಳಿಗೆ ಸಂಬಂಧಿಸಿರುತ್ತವೆ. ‘ಅನಿಷ್ಟ (ಕೆಟ್ಟ) ಶಕ್ತಿಗಳು ದೃಶ್ಯಗಳನ್ನು ತೋರಿಸುತ್ತಿವೆ ಅಥವಾ ಮುನ್ಸೂಚನೆಗಳನ್ನು ಕೊಡುತ್ತಿವೆ’, ಎಂದೆನಿಸಿ ಸಾಧಕರು ಅವುಗಳ ಕಡೆಗೆ ದುರ್ಲಕ್ಷ ಮಾಡಬಾರದು. ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಇಂತಹ ಘಟನೆಗಳ ಕಡೆಗೆ ನೋಡುವುದು ಆವಶ್ಯಕವಾಗಿದೆ.

೧. ಕಾಣಿಸಿದ ದೃಶ್ಯಗಳಿಂದ ಭಗವಂತನು ನಮ್ಮನ್ನು ಜಾಗೃತಗೊಳಿಸುತ್ತಿದ್ದಾನೆ’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಕೆಲವೊಮ್ಮೆ ಮುನ್ಸೂಚನೆಗಳಿಗೆ ೧೦೦ ರಷ್ಟು ಹೊಂದಿಕೆ ಆಗುವ ಘಟನೆಗಳು ಪ್ರತ್ಯಕ್ಷ ಜೀವನದಲ್ಲಿಯೂ ಘಟಿಸುತ್ತವೆ. ‘ಭಗವಂತನು ಆ ಮುನ್ಸೂಚನೆಗಳನ್ನು ಕೊಟ್ಟು ಅಥವಾ ದೃಶ್ಯಗಳನ್ನು ತೋರಿಸಿ ನಮ್ಮನ್ನು ಮೊದಲೇ ಜಾಗೃತಗೊಳಿಸುತ್ತಿದ್ದಾನೆ’, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.

ಓರ್ವ ಸಾಧಕಿಗೆ ‘ಮರುದಿನ ಮಾಡುವ ಸೇವೆಯಲ್ಲಿ ಅಡಚಣೆಗಳು ಬರುವವು. ಅದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತಗಲುವುದರಿಂದ ಸಾಧಕರ ಸಮಯ ವ್ಯರ್ಥವಾಗುವುದು’, ಎಂಬ ದೃಶ್ಯ ಕಾಣಿಸಿತು, ಆದರೆ ಅವಳು ಅದರ ಕಡೆಗೆ ದುರ್ಲಕ್ಷ ಮಾಡಿದಳು. ಪ್ರತ್ಯಕ್ಷದಲ್ಲಿಯೂ ಮರುದಿನ ಸೇವೆಯಲ್ಲಿ ಅಂತಹ ಅಡಚಣೆಗಳೇ ಬಂದವು ಮತ್ತು ಸಾಧಕರ ಸಮಯ ವ್ಯರ್ಥವಾಯಿತು. ಈ ಪ್ರಸಂಗದಲ್ಲಿ ಸಾಧಕಿಯು ತನಗೆ ಕಾಣಿಸಿದ ದೃಶ್ಯದ ಬಗ್ಗೆ ಸಾಧಕರಿಗೆ ಹೇಳಿ ಅವರನ್ನು ಎಚ್ಚರಿಸಬಹುದಾಗಿತ್ತು. ಇದರಿಂದ ಸಾಧಕರ ಸಮಯ ಉಳಿಯುತ್ತಿತ್ತು.

೨. ಈ ಮುನ್ಸೂಚನೆಗಳಿಂದ ಸೇವೆಗಳು ಪರಿಣಾಮಕಾರಿಯಾಗಲು ಲಾಭವಾಗುತ್ತದೆ !

ಓರ್ವ ಸಾಧಕನಿಗೆ ‘ಗುರುಪೂರ್ಣಿಮೆಯ ಸೇವೆಯ ಅಂತರ್ಗತ ತಾವು ಭೇಟಿಯಾಗಲಿರುವ ಮಹಿಳೆಯು ದೇವಿ ಭಕ್ತಳಾಗಿದ್ದು ಅವಳ ಕಛೇರಿಯಲ್ಲಿ ನಾಮಜಪ ಯಂತ್ರದಲ್ಲಿ ನಾಮಜಪವನ್ನು ಹಾಕಿದ್ದಾಳೆ’, ಎಂಬುದು ಕಾಣಿಸಿತು. ಪ್ರತ್ಯಕ್ಷದಲ್ಲಿಯೂ ನಂತರ ಆ ಮಹಿಳೆಯನ್ನು ಭೇಟಿಯಾದಾಗ ಅವಳು ದೇವಿಭಕ್ತಳಾಗಿದ್ದು ಅವಳ ಕಛೇರಿಯಲ್ಲಿ ನಾಮಜಪ ಹಾಕಿರುವುದು ಅವರ ಗಮನಕ್ಕೆ ಬಂದಿತು. ಈ ದೃಶ್ಯದಿಂದ ದೇವರು ಆ ಮಹಿಳೆ ದೇವಿಭಕ್ತಳಾಗಿದ್ದಾಳೆ ಮತ್ತು ಅವಳಿಗೆ ಸನಾತನದ ಕಾರ್ಯವನ್ನು ತಲುಪಿಸುವ ಪೂರ್ವಸೂಚನೆಯನ್ನು ಕೊಟ್ಟಿದ್ದನು. ಅದಕ್ಕನುಸಾರ ಅವಳನ್ನು ಭೇಟಿಯಾಗಲು ಹೋದಾಗ ದೇವಿಯ ಮಾಹಿತಿಯನ್ನು ನೀಡುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ತೆಗೆದುಕೊಂಡು ಹೋಗಿ ಹೆಚ್ಚು ಪರಿಣಾಮಕಾರಿ ಸೇವೆಯನ್ನು ಮಾಡಬಹುದಾಗಿತ್ತು.

೩. ಪೂರ್ವಸೂಚನೆಗಳು ಮತ್ತು ದೃಶ್ಯಗಳನ್ನು ಸಾಧನೆಯ ದೃಷ್ಟಿಕೋನದಿಂದ ನೋಡಬೇಕು !

ಮೇಲಿನ ಎರಡೂ ಘಟನೆಗಳಿಂದ ‘ಈ ಪೂರ್ವಸೂಚನೆ ಮತ್ತು ದೃಶ್ಯಗಳ ಕಡೆಗೆ ಸಾಧನೆಯ ದೃಷ್ಟಿಕೋನದಿಂದ ಹೇಗೆ ನೋಡ ಬೇಕು ?’, ಎಂಬುದು ಗಮನಕ್ಕೆ ಬರುತ್ತದೆ. ‘ಈಶ್ವರನು ನಮ್ಮ ಒಳ್ಳೆಯದಕ್ಕಾಗಿ, ಅಂದರೆ ಸಾಧನೆಗಾಗಿ ಇವುಗಳನ್ನು ಮಾಡುತ್ತಿದ್ದಾನೆ’, ಎಂಬ ಭಾವವನ್ನಿಟ್ಟರೆ ಸಾಧನೆಗಾಗಿ ಈ ಘಟನೆಗಳಿಂದ ಲಾಭ ಪಡೆಯುವ ದೃಷ್ಟಿ ಸಿಗುತ್ತದೆ. ‘ನಮ್ಮ ಜೀವನದಲ್ಲಿ ಏನೆಲ್ಲ ಘಟಿಸುತ್ತದೆಯೋ, ಅದರಲ್ಲಿ ಅನಾವಶ್ಯಕವೆಂದೇನೂ ಇರುವುದಿಲ್ಲ’, ಎಂದು ಗಮನದಲ್ಲಿ ಇಟ್ಟುಕೊಳ್ಳಬೇಕು.

೪. ಕೆಟ್ಟ ವಿಷಯಗಳ ಸಂದರ್ಭದಲ್ಲಿ ಮುನ್ಸೂಚನೆಗಳು ದೊರಕುತ್ತಿದ್ದರೆ ಏನು ಮಾಡಬೇಕು ?

ಕೆಟ್ಟ ವಿಷಯಗಳ ಸಂದರ್ಭದಲ್ಲಿ ಮುನ್ಸೂಚನೆಗಳು ದೊರಕುತ್ತಿದ್ದರೆ ಅಥವಾ ದೃಶ್ಯಗಳು ಕಾಣಿಸುತ್ತಿದ್ದರೆ, ಅದರ ಬಗ್ಗೆ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡಬೇಕು. ದೊರಕಿದ ಕೆಟ್ಟ ಮುನ್ಸೂಚನೆಯನ್ನು ಶ್ರಿಕೃಷ್ಣನ ನಾಮಜಪದ ಮಂಡಲದಲ್ಲಿ ಬರೆದು ‘ಅವು ಘಟಿಸಬಾರದು’, ಎಂದು ಪ್ರಾರ್ಥನೆಯನ್ನು ಬರೆಯಬೇಕು. ಮಂಡಲವನ್ನು ಹಾಕಿದ ಕಾಗದವನ್ನು ದೇವರ ಕೋಣೆಯಲ್ಲಿ ಅಥವಾ ಸನಾತನದ ಗ್ರಂಥದಲ್ಲಿಡಬೇಕು. ಕೆಟ್ಟ ದೃಶ್ಯಗಳು ಕಾಣಿಸುತ್ತಿದ್ದರೆ ‘ತಮ್ಮ ಸುತ್ತಲೂ ವಿಭೂತಿಯನ್ನು ಊದುವುದು, ಉದಬತ್ತಿಯನ್ನು ಹಚ್ಚುವುದು ಮತ್ತು ನಾಮಜಪ ಮಾಡುವುದು’, ಇಂತಹ ಉಪಾಯಗಳನ್ನು ಮಾಡಬೇಕು. ಸರ್ವಶಕ್ತಿಶಾಲಿ ಈಶ್ವರನು ಯಾವಾಗಲೂ ನಮ್ಮ ಜೊತೆಗೆ ಇರುವುದರಿಂದ ಇಂತಹ ದೃಶ್ಯಗಳಿಗೆ ಭಯಪಡಬಾರದು.

೫. ಒಳ್ಳೆಯ ಮುನ್ಸೂಚನೆಗಳು ದೊರಕಿದರೆ ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !

ಒಳ್ಳೆಯ ಮುನ್ಸೂಚನೆಗಳು ಅಥವಾ ದೃಶ್ಯಗಳು ಕಾಣಿಸಿದರೆ ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ‘ನನಗೆ ಮುನ್ಸೂಚನೆಗಳು ದೊರಕುತ್ತವೆ’, ಎಂಬ ಅಹಂಕಾರವಾಗಲು ಬಿಡಬಾರದು. ಅದಕ್ಕೆ ಬದಲಾಗಿ ‘ಆ ಮುನ್ಸೂಚನೆಗಳಿಂದ ಈಶ್ವರನಿಗೆ ನನಗೆ ಏನು ಕಲಿಸಬೇಕಾಗಿದೆ ?’ ಎಂಬುದರ ಅಧ್ಯಯನವನ್ನು ಮಾಡಬೇಕು; ಹಾಗೆಯೇ ಮುನ್ಸೂಚನೆಗಳು ದೊರಕುವ ಬಗ್ಗೆ ಅಪೇಕ್ಷೆಯನ್ನೂ ಇಟ್ಟುಕೊಳ್ಳಬಾರದು. ಈಶ್ವರನ ಇಚ್ಛೆಯಿಂದ ಏನೆಲ್ಲ ಆಗುವುದೋ ಅದನ್ನು ಎದುರಿಸಬೇಕು.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೨.೨೦೨೩)