ಕಳೆದ ಸಂಚಿಕೆಯಲ್ಲಿ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆರಂಭಿಸಿದ ಮೇಲೆ ಗಮನಕ್ಕೆ ಬಂದಿರುವ ಹಂತಗಳನ್ನು ನೋಡಿದೆವು. ಈಗ ನಾವು ಈ ಭಾಗದಲ್ಲಿ ‘ನನ್ನಿಂದಾದ ತಪ್ಪುಗಳು, ಅವುಗಳ ಹಿಂದಿನ ನನ್ನ ತಪ್ಪು ವಿಚಾರಪ್ರಕ್ರಿಯೆ ಮತ್ತು ಶೇ. ೬೭ ಆಧ್ಯಾತ್ಮಿಕ ಮಟ್ಟದ ವ್ಯಷ್ಟಿ ವರದಿಸೇವಕಿ ಸೌ. ಸುಪ್ರಿಯಾ ಸುರ್ಜಿತ್ ಮಾಥೂರ್ ಇವರು ಅದಕ್ಕೆ ನೀಡಿದ ದೃಷ್ಟಿಕೋನ’ವನ್ನು ನೋಡೊಣ.
(ಭಾಗ ೨)
ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/84277.html |
೨. ವ್ಯಷ್ಟಿ ಸಾಧನೆಯ ವರದಿಯ ಸಮಯದಲ್ಲಿ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಸುರ್ಜಿತ್ ಮಾಥೂರ ಇವರು ನೀಡಿದ ದೃಷ್ಟಿಕೋನ !
೨ ಅ. ತಪ್ಪು : ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಆರಂಭಿಸಿದ ಮೂರನೇ ದಿನ ನನ್ನ ವ್ಯಷ್ಟಿ ಸಾಧನೆಯ ಮೊದಲ ವರದಿಯನ್ನು ತೆಗೆದುಕೊಳ್ಳಲಾಯಿತು. ಆಗ ನಾನು ೩ ದಿನ ಸ್ವಭಾವದೋಷ-ನಿರ್ಮೂಲನೆ ತಖ್ತೆ ಮತ್ತು ದೈನಂದಿನಿಯನ್ನು ತುಂಬಿದ್ದೇನೆ; ಆದರೆ ನಾನು ಚಿಂತನ ಕೋಷ್ಟಕ ವನ್ನು ತುಂಬಿಲ್ಲ, ಎಂದು ಹೇಳಿದೆ, ಆಗ ನಾನು ‘ನನಗೆ ಇನ್ನೂ ಚಿಂತನ ಕೋಷ್ಟವನ್ನು ಸರಿಯಾಗಿ ತುಂಬಿಸುವುದು ತಿಳಿದಿಲ್ಲ, ನಾನು ಕಲಿಯುತ್ತಿದ್ದೇನೆ’, ಎಂದು ಸ್ಪಷ್ಟೀಕರಣ ನೀಡಿದೆ, ಈ ತಪ್ಪು ನನಗೆ ವರದಿ ನಡೆಯುತ್ತಿರುವಾಗ ನನ್ನ ಗಮನಕ್ಕೆ ಬಂದಿತು.
೨ ಅ ೧. ಸ್ವಭಾವದೋಷಗಳು : ರಿಯಾಯಿತಿ ತೆಗೆದುಕೊಳ್ಳುವುದು, ಕೇಳುವವೃತ್ತಿ ಇಲ್ಲದಿರುವುದು ಮತ್ತು ಅಲ್ಪಸಂತುಷ್ಟತೆ
೨ ಆ ೨. ನನ್ನ ಅಯೋಗ್ಯ ವಿಚಾರಪ್ರಕ್ರಿಯೆ
ಅ. ನನಗೆ ಪ್ರಕ್ರಿಯೆಗಾಗಿ ಮಾಡಲು ಹೇಳಿರುವ ವಿಷಯಗಳಲ್ಲಿ ನಾನು ಚಿಂತನ ಕೋಷ್ಟಕವನ್ನು ಬಿಟ್ಟು ಎಲ್ಲವನ್ನೂ ಮಾಡಿದ್ದೇನೆ.
ಆ. ನಾನು ಚಿಂತನಕೋಷ್ಟಕವನ್ನು ನಿಧಾನವಾಗಿ ಕಲಿತುಕೊಳ್ಳುವೆನು.
ಇ. ಯಾವುದು ನನಗೆ ಸರಿಯಾಗಿ ಬರುವುದಿಲ್ಲವೋ, ಅದನ್ನು ತಪ್ಪಾಗಿ ಬರೆಯುವುದಕ್ಕಿಂತ ‘ಬೇರೆಯವರು ಏನು ಹೇಳುತ್ತಾರೆ ?’, ಎಂದು ಕೇಳಿ ಬರೆಯೋಣ ಎಂಬ ವಿಚಾರ ಬರುವುದು.
ಈ. ‘ನಾವು ಇಲ್ಲಿ ಕಲಿಯಲು ಬಂದಿದ್ದೇವೆ’, ಎಂಬ ವಿಚಾರ ಮನಸ್ಸಿನಲ್ಲಿ ಬಂದು ‘ಇದು ತಪ್ಪಾಗಿದೆ’, ಎಂದು ನನಗೆ ಅನಿಸಲಿಲ್ಲ.
ಉ. ನನಗೆ ಅನೇಕ ವಿಷಯಗಳು ಬರುತ್ತವೆ; ಸ್ವಲ್ಪವೇ ಕಲಿಯಲಿಕ್ಕಿದೆ ಎಂದೆನಿಸುವುದು.
೨ ಆ ೩. ಸೌ. ಸುಪ್ರಿಯಾ ಮಾಥುರ್ ಇವರ ಯೋಗ್ಯ ದೃಷ್ಟಿಕೋನ
೨ ಅ ೩ ಅ. ಕೇಳಿಕೊಳ್ಳದಿರುವುದು : ‘ಚಿಂತನಕೋಷ್ಟಕವನ್ನು ಹೇಗೆ ಬರೆಯಬೇಕು ?’, ಎಂಬುದು ನಿಮ್ಮ ಅಡಚಣೆಯಾಗಿದೆ. ಅದರ ಹಿಂದೆ ‘ಕೇಳಿಕೊಳ್ಳದಿರುವುದು’, ಇದು ನಿಮ್ಮಲ್ಲಿನ ತೀವ್ರ ಅಹಂನ ಲಕ್ಷಣವಾಗಿದೆ. ಚಿಂತನ ಕೋಷ್ಟಕವನ್ನು ಬರೆಯದೆ ನೀವು ಮೂರು ದಿನಗಳನ್ನು ವ್ಯರ್ಥಗೊಳಿಸಿದ್ದೀರಿ. ಅವು ಹಿಂತಿರುಗಿ ಬರುತ್ತದೆಯೇ ? ಎಂದು ಕೇಳಿದರು.
೨ ಅ ೩ ಆ. ಅಲ್ಪಸಂತುಷ್ಟಿ : ‘ಸ್ವಭಾವದೋಷ-ನಿರ್ಮೂಲನೆ ಕೋಷ್ಟಕವನ್ನು ಬರೆದಿದ್ದೇನೆ’, ಇದು ನಿಮ್ಮ ತೀವ್ರ ಅಲ್ಪಸಂತುಷ್ಟಿಯಾಗಿದೆ.
೨ ಅ ೩ ಆ ೧. ಸಾಧನೆಯ ವಿಷಯದಲ್ಲಿ ಅಲ್ಪಸಂತುಷ್ಟಿ ಇದ್ದರೆ ಸಾಧನೆಯ ವೇಗ ಕುಂಠಿತವಾಗುತ್ತದೆ, ಸಾಧನೆಯ ಅಂತಿಮ ಧ್ಯೇಯ ಈಶ್ವರಪ್ರಾಪ್ತಿಯಾಗಿದೆ; ಆದರೆ ಅಲ್ಪಸಂತುಷ್ಟಿಯಿದ್ದರೆ ಯಾವುದೇ ಪ್ರಯತ್ನ ಆಗುವುದಿಲ್ಲ ಎಂದು ಸುಪ್ರಿಯಾ ಮಾಥುರ್ ಇವರು ನನಗೆ ಹೇಳಿದರು, ‘ಸಾಧನೆಯಲ್ಲಿ ಅಡಚಣೆಗಳಿವೆ’, ಎನ್ನುವ ವಿಚಾರ ಯಾವಾಗಲಾದರೂ ಬಂದಿದೆಯೇ ?” ಅದಕ್ಕೆ ನಾನು ಇಲ್ಲ, ಎಂದು ಉತ್ತರ ನೀಡಿದೆ. ನಾನು ಪುಣೆಯಲ್ಲಿ ಸೇವೆಯನ್ನು ಮಾಡುತ್ತಿರುವಾಗ ಒಮ್ಮೆ ಅಲ್ಲಿ ಸದ್ಗುರು ಸ್ವಾತಿ ಖಾಡ್ಯೆಯವರು ಅವರಿಗೂ ನಾನು ನನಗೇನೂ ಅಡಚಣೆಗಳಿಲ್ಲ ಎಂದು ಹೇಳಿದ್ದೆ.
ಈ ವಿಷಯದಲ್ಲಿ ಸೌ. ಸುಪ್ರಿಯಾ ಮಾಥುರ್ ಇವರು, ‘ಎಷ್ಟು ಅಲ್ಪಸಂತುಷ್ಟಿ ಇದು ! ಅಡಚಣೆಯಿದ್ದರೂ ಅದರ ಬಗ್ಗೆ ಕೇಳದಿರುವುದು, ಇತರರ ಸಹಾಯ ತೆಗೆದುಕೊಳ್ಳದಿರುವುದು ಮತ್ತು ತನ್ನ ನಿಲುವಿಗೆ ಬದ್ಧವಾಗಿರುವುದು. ಆದ್ದರಿಂದ ಕ್ಷಮತೆ ಇದ್ದರೂ ನಿಮ್ಮ ಸಾಧನೆಯ ವೇಗ ಕುಸಿದಿದೆ. ನಮಗೆ ಅಡಚಣೆಗಳಿಲ್ಲ, ಅಂದರೆ ನಾವು ನಿಂತಿದ್ದೇವೆ. ನಿಂತುಕೊಂಡರೆ ಅಧೋಗತಿಯ ಕಡೆಗೆ ಹೋಗುವೆವು ! ಮೊಲ ಮತ್ತು ಆಮೆಯ ಕಥೆ ಗೊತ್ತಿದೆಯಲ್ಲವೇ ! ಆ ಕಥೆಯಲ್ಲಿನ ಮೊಲದ ಹಾಗೆ ನೀವು ಸಾಧನೆಯ ಒಂದು ಹಂತದಲ್ಲಿ ಬಂದು ನಿಂತಿದ್ದೀರಿ, ಸುಖಪಡುತ್ತಿದ್ದೀರಿ, ನಿಮ್ಮಲ್ಲಿ ಜಿಜ್ಞಾಸೆ ಇಲ್ಲ.
ಸಾಧಕನ ಅಂತಿಮ ಧ್ಯೇಯ ಈಶ್ವರಪ್ರಾಪ್ತಿಯಾಗಿದೆ. ಅದಕ್ಕಾಗಿ ಪ್ರಯತ್ನವಾಗುತ್ತಿದೆಯೇ ? ‘ನನಗೇನೂ ಅಡಚಣೆಗಳಿಲ್ಲ. ನನಗೆ ಏನೂ ವಿಚಾರಿಸಲಿಕ್ಕಿಲ್ಲ. ನನಗೆ ಹೆಚ್ಚು ತಿಳಿಯುತ್ತದೆ’, ಎಂದು ಅನಿಸುವುದು ಅಪಾಯದ ಗಂಟೆಯಾಗಿದೆ. ನಮ್ಮ ಸಾಧನೆ ಆಗಬೇಕೆಂದು ನಮಗಿಂತ ದೇವರಿಗೇ ಹೆಚ್ಚು ತಳಮಳವಿದೆ. ಇದು ದೇವರು ನೀಡಿರುವ ಕೊನೆಯ ಅವಕಾಶವಾಗಿದೆ. ಸಾಧನೆಯ ಪ್ರಯತ್ನ ತಳಮಳದಿಂದ ಅಂತರ್ಮನಸ್ಸಿನಿಂದ ಮತ್ತು ದೇವರಿಗೆ ಇಷ್ಟವಾಗುವ ಹಾಗೆಯೆ ಆಗಬೇಕು.”
೨ ಆ. ತಪ್ಪು : ಒಮ್ಮೆ ನಾನು ಭೋಜನಕಕ್ಷೆಯಲ್ಲಿ ಚಹಾ ಕುಡಿಯುತ್ತಿದ್ದೆ. ಆಗ ನನ್ನ ಪಕ್ಕದಲ್ಲಿ ಕುಳಿತಿರುವ ಓರ್ವ ಸಾಧಕಿ ನನಗೆ’ ‘ಕಾಕೂ ಅಲ್ಪಾಹಾರ ಮಾಡುವುದಿಲ್ಲವೇ ?’ ಎಂದು ಕೇಳಿದಾಗ ನಾನು ಇಲ್ಲ, ಎಂದೆ. ನಾನು ಅವಳಿಗೆ ನನಗೆ ಅಲ್ಪಾಹಾರ ತಿನ್ನದಿರುವ ಪ್ರಾಯಶ್ಚಿತ್ತವಿದೆ’, ಎಂಬ ಸತ್ಯವನ್ನು ಹೇಳಲಿಲ್ಲ.
೨ ಆ ೧. ಸ್ವಭಾವದೋಷ : ಸ್ಪಷ್ಟ ಮಾತನಾಡದಿರುವುದು, ಮನಮುಕ್ತತೆಯ ಅಭಾವ ಮತ್ತು ಪ್ರತಿಷ್ಠೆಯನ್ನು ಕಾಪಾಡುವುದು ಅಹಂನ ಲಕ್ಷಣವಾಗಿದೆ’, ಎಂಬುದು ನನಗೆ ವರದಿಯ ಸಮಯದಲ್ಲಿ ಅರಿವಾಯಿತು.
೨ ಆ ೨. ನನ್ನ ಅಯೋಗ್ಯ ವಿಚಾರಪ್ರಕ್ರಿಯೆ
ಅ. ನನಗೆ ಮೊದಲು ಅದರಲ್ಲೇನು ಹೇಳಲಿಕ್ಕಿದೆ ? ಎಂದೆನಿಸಿತು. ‘ನಾನು ಪ್ರಾಯಶ್ಚಿತ ತೆಗೆದುಕೊಂಡಿದ್ದೇನೆ’, ಎಂದು ಹೇಳುವುದು ಅಹಂನ ಲಕ್ಷಣವಾಗಿದೆ’, ಎಂಬುದು ಆ ಮೇಲೆ ತಿಳಿಯಿತು .
ಆ ೧. ಸೌ. ಸುಪ್ರಿಯಾ ಮಾಥುರ್ ಇವರ ದೃಷ್ಟಿಕೋನ
ಅ. ಈ ಪ್ರಸಂಗದಲ್ಲಿ ಈಶ್ವರನು ನಿಮ್ಮ ಅಹಂ ನಿರ್ಮೂಲನೆಗಾಗಿ ಯಾರನ್ನಾದರೂ ಮಾಧ್ಯಮವನ್ನಾಗಿ ಮಾಡಿದ್ದನು. ಆದರೆ ನಿಮಗೆ ‘ನನ್ನ ಇಂತಹ ತಪ್ಪಿಗಾಗಿ ನಾನು ಪ್ರಾಯಶ್ಚಿತ ತೆಗೆದು ಕೊಂಡಿದ್ದೇನೆ’, ಎಂಬುದನ್ನು ತೀವ್ರ ಅಹಂನಿಂದಾಗಿ ಹೇಳಲು ಸಾಧ್ಯವಾಗಲಿಲ್ಲ. ದೇವರು ನೀಡಿದ ಅಹಂ-ನಿರ್ಮೂಲನೆಯ ಅವಕಾಶವನ್ನು ನೀವು ಕಳೆದುಕೊಂಡಿರಿ.
ಆ. ನನಗೆ ‘ನನ್ನಿಂದ ತಪ್ಪಾಯಿತು’, ಎಂದು ತಿಳಿಯುತ್ತಿತ್ತು; ಆದರೆ’ನಿರ್ದಿಷ್ಟವಾಗಿ ತಪ್ಪು ಯಾವುದು ಎಂಬುದು ತಿಳಿಯುತ್ತಿರಲಿಲ್ಲ ಮತ್ತು ‘ತುಂಬಾ ಗಂಭೀರವಾದ ತಪ್ಪೆಂದೂ ಅನಿಸುತ್ತಿರಲಿಲ್ಲ.
ಆ ೧. ಸೌ. ಸುಪ್ರಿಯಾ ಮಾಥುರ್ ಇವರ ದೃಷ್ಟಿಕೋನ
ನಮ್ಮಲ್ಲಿನ ತೀವ್ರ ಅಹಂನಿಂದಾಗಿ ನಮಗೆ ಈಶ್ವರನ ಸಹಾಯ ಪಡೆಯಲು ಆಗುವುದಿಲ್ಲ. ಈ ಪ್ರಸಂಗದಿಂದ ನಿಮ್ಮಲ್ಲಿ ‘ಕಲಿಯುವ ಸ್ಥಿತಿ ಮತ್ತು ತಮ್ಮನ್ನು ಬದಲಾಯಿಸುವ ತಳಮಳ ಇಲ್ಲದಿರುವುದು, ಈ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣಗಳು ಗಮನಕ್ಕೆ ಬರುತ್ತವೆ.
ಆ. ದೇವರಿಗೆ ‘ನಮ್ಮ ಸಾಧನೆಯ ಸ್ಥಿತಿ ಹೇಗಿದೆ’, ಎಂಬುದು ತಿಳಿಯುತ್ತದೆ. ನಾವು ದೇವರಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ; ಆದರೆ ತೀವ್ರ ಅಹಂನಿಂದ ನಮ್ಮ ಚಿಂತನೆ ಆಗುವುದಿಲ್ಲ.
ಆ. ಮೊಲ ಮತ್ತು ಆಮೆಯ ಕಥೆಯಲ್ಲಿನ ಮೊಲದ ಹಾಗೆ ನಾವು ಸಾಧನೆಯಲ್ಲಿ ನಿಂತರೆ, ನಮ್ಮ ಅಧೋಗತಿ ಆರಂಭವಾಗುತ್ತದೆ. ನಾವು ಯಾವುದಾದರೊಂದು ಊರಿಗೆ ಹೋಗುವಾಗ ನಾವು ಪ್ರವಾಸ ಮಾಡುವ ವಾಹನ ಕೆಟ್ಟುಹೋದರೆ ನಾವು ನಮಗೆ ಹೋಗಬೇಕಾದ ಸ್ಥಳಕ್ಕೆ ಹೋಗುವುದನ್ನು ಬಿಡುತ್ತೇವೆಯೇ ? ನಾವು ಆ ಅಡಚಣೆಗೆ ಉಪಾಯವನ್ನು ಹುಡುಕುತ್ತೇವೆ. ‘ಮುಂದಿನ ಪ್ರವಾಸವನ್ನು ಹೇಗೆ ಮಾಡಬೇಕು ಎಂದು ಯಾರ ನ್ನಾದರೂ ಕೇಳಿಕೊಳ್ಳುತ್ತೇವೆ. ನಿರ್ದಿಷ್ಟ ಸ್ಥಳಕ್ಕೆ ಹೋಗಲು ಇತರರ ಸಹಾಯ ಪಡೆಯುತ್ತೇವೆ; ಏಕೆಂದರೆ ನಮ್ಮಲ್ಲಿ ಇಚ್ಛಿಸಿದ ಸ್ಥಳಕ್ಕೆ ಹೋಗುವ ಇಚ್ಛೆ ಮತ್ತು ತಳಮಳ ಇರುತ್ತದೆ. ಅದೇ ರೀತಿ ನಮಗೆ ನಿಜವಾಗಿಯೂ ಈಶ್ವರಪ್ರಾಪ್ತಿಯ ಇಚ್ಛೆ ಮತ್ತು ತಳಮಳ ಇದೆಯೇ ? ನಮ್ಮ ಧ್ಯೇಯದ ಧ್ಯಾಸವಿದೆಯೆ ? ಅದಕ್ಕಾಗಿ ನಮ್ಮ ಪ್ರಯತ್ನ ಪರಾಕಾಷ್ಠೆಯಿಂದ ಆಗುತ್ತದೆಯೇ ?
ಇ. ದೇವರು ನಮಗೆ ಸಹಾಯ ಮಾಡಲು ಯಾವುದನ್ನೂ ಕಡಿಮೆ ಮಾಡಿಲ್ಲ. ದೇವರು ನಮಗಾಗಿ ಎಷ್ಟು ಮಾಡಬೇಕು ? ನಾವು ಈಗ ಕೃತಿಯ ಸ್ತರದಲ್ಲಿ ಕಠೋರ ಪ್ರಯತ್ನವನ್ನು ಮಾಡಬೇಕು. ನಮ್ಮ ಸಾಧನೆ ಈಶ್ವರನಿಷ್ಠವಾಗಿರಬೇಕು.
ಈ. ನಾವು ನಮ್ಮ ವರದಿಯನ್ನು ನಾವೇ ತೆಗೆದುಕೊಂಡು ಸ್ವಯಂ ಪೂರ್ಣವಾಗುವುದು ಆವಶ್ಯಕವಾಗಿದೆ. ‘ಸಾಧನೆಯಲ್ಲಿ ಕೃತಿಗೆ ಶೇ. ೯೮ ರಷ್ಟು ಮಹತ್ವವಿದೆ’, ಎಂಬುದರ ಅರಿವಿರಬೇಕು, ಆಗ ನಮ್ಮ ಪ್ರಯತ್ನ ಅಂತರ್ಮನಸ್ಸಿನಿಂದ ಆಗುವುದು.
೩. ಭಾವವಿಶ್ವದಲ್ಲಿ ಕರೆದುಕೊಂಡು ಹೋಗುವ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅಂತರ್ಗತವಿರುವ ಭಾವವೃದ್ಧಿ ಸತ್ಸಂಗ !’
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅಂತರ್ಗತ ವರದಿ ತೆಗೆದುಕೊಳ್ಳುವುದು ಮತ್ತು ಭಾವವೃದ್ಧಿ ಈ ಎರಡು ಸತ್ಸಂಗಗಳು ಇರುತ್ತದೆ. ‘ಪ್ರತ್ಯಕ್ಷ ಕೃತಿಗಳನ್ನು ಮಾಡಿಸಿ ಸಾಧನೆ ಕಲಿಸುವ ಮತ್ತು ಚಿತ್ತದಲ್ಲಿ ಸಾಧನೆಯ ಸಂಸ್ಕಾರಗಳನ್ನು ಮಾಡುವ ಪ್ರಾಯೋಗಿಕ ಭಾಗವೇ ಭಾವವೃದ್ಧಿ ಸತ್ಸಂಗ ! ಅದು ನಮ್ಮನ್ನು ಭಾವವಿಶ್ವಕ್ಕೆ ಕರೆದೊಯ್ಯುತ್ತದೆ. ನಿರಂತರ ‘ಭಾವದ ಸ್ಥಿತಿಯಲ್ಲಿ ಹೇಗಿರಬೇಕು ? ಆನಂದವನ್ನು ಹೇಗೆ ಪಡೆಯಬೇಕು ? ಮನಸ್ಸಿನ ಪ್ರಶ್ನೆಗಳನ್ನು ಮತ್ತು ಒತ್ತಡದ ಪ್ರಸಂಗಗಳನ್ನು ಈಶ್ವರನೊಂದಿಗೆ ಮಾತನಾಡಿ ಅವುಗಳಿಗೆ ಉತ್ತರಗಳನ್ನು ಹೇಗೆ ಪಡೆಯಬೇಕು ?’, ಎಂಬುದನ್ನು ಕಲಿಸಿ ನಮ್ಮನ್ನು ಈಶ್ವರನೊಂದಿಗೆ ಜೋಡಿಸುವ ವಿಹಂಗಮ ಮಾರ್ಗವೇ ಭಾವಜಾಗೃತಿ ಸತ್ಸಂಗ !
ಸತತ ಕಲಿಯುವ ಸ್ಥಿತಿಯಲ್ಲಿರಲು ಕಲಿಸುವ ಈ ಪ್ರಕ್ರಿಯೆಯು ಬಹಳ ಆನಂದದಾಯಕವಾಗಿದೆ. ಈ ಪ್ರಕ್ರಿಯೆಯನ್ನು ಮಾಡಿಸಿಕೊಂಡಿದ್ದಕ್ಕಾಗಿ ಈಶ್ವರನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞಳಾಗಿದ್ದೇನೆ.’
– ಸೌ. ಅನುರಾಧಾ ಹರಿಶ್ಚಂದ್ರ ನಿಕಮ್, ಫೋಂಡಾ ಗೋವಾ. (೩೦.೫.೨೦೧೯)