ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಲಕ್ಷ್ಮೇಶ್ವರದಲ್ಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಉಪಸ್ಥಿತ ಹಿಂದೂ ಧರ್ಮಪ್ರೇಮಿಗಳು

ಆಯನೂರು (ಶಿವಮೊಗ್ಗ)

೧೯ ಮಾರ್ಚ್ ರಂದು ನಡೆದ ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಸುಬ್ರಮಣ್ಯರವರು ‘ಇಂದು ದೇಶದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್ ನಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ. ಹಿಂದೂ ದೇವತೆಗಳ ಅವಮಾನ ಮಾಡುತ್ತಿದ್ದಾರೆ ಹಾಗಾಗಿ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ’, ಎಂದು ಕರೆ ನೀಡಿದರು. ಈ ವೇಳೆ  ಸನಾತನ ಸಂಸ್ಥೆಯ ಸೌ. ಕಾವೇರಿ ರಾಯ್ಕರ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ್ ಇವರು ಮಾರ್ಗದರ್ಶನ ಮಾಡಿದರು.

ಲಕ್ಷ್ಮೇಶ್ವರ

ಇಲ್ಲಿನ ಸರಕಾರಿ ಶಾಲಾ ಮೈದಾನದಲ್ಲಿ ಮಾರ್ಚ್ ೧೯ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಶ್ರೀ. ಶ್ರೀಧರ ಕುಲಕರ್ಣಿ, ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಮಾರ್ಗದರ್ಶನ ಮಾಡಿದರು.

 ಚಿಕ್ಕಬಳ್ಳಾಪುರ

ಮಾರ್ಚ್ ೨೬ ರಂದು ಇಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಜಿ.ಎಮ್ ನಟರಾಜ್ ಮಾತನಾಡುತ್ತಾ, ‘ಹಿಂದೂ ಧರ್ಮದವರಿಗೆ ಮಾತ್ರ ಶಾಲಾ-ಕಾಲೇಜುಗಳಲ್ಲಿ ನಮ್ಮ ಧರ್ಮದ ಬಗ್ಗೆ ಕಲಿಸಲು ಅವಕಾಶವಿಲ್ಲ, ಆದರೆ ಅನ್ಯಧರ್ಮೀಯರಿಗೆ ಮುಕ್ತಾವಕಾಶವನ್ನು ಭಾರತದ ಸಂವಿಧಾನದಲ್ಲಿ ಕಲ್ಪಿಸಿದ್ದಾರೆ. ಸರ್ವಧರ್ಮ ಸಮಾನತೆಯ ಬಗ್ಗೆ ಮಾತನಾಡುವವರು, ಇದರ ಬಗ್ಗೆ ಯಾಕೆ ಉಲ್ಲೇಖಿಸುವುದಿಲ್ಲ ?, ಎಂದು ಪ್ರಶ್ನಿಸಿದರು. ಈ ವೇಳೆ  ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರೂ ಮಾರ್ಗದರ್ಶನ ಮಾಡಿದರು.

ಗೋಣಿಕೊಪ್ಪ (ಮೈಸೂರು)

ಮಾರ್ಚ್ ೨೫ ರಂದು ಇಲ್ಲಿ ಆರ್.ಎಂ.ಸಿ. ಸಭಾಗೃಹದಲ್ಲಿ ನಡೆದ ಸಭೆಯಲ್ಲಿ ಮೇಜರ್ ಬಿಎ ನಂಜಪ್ಪ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವರಾಮ ಇವರು ಮಾರ್ಗದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಮೇಜರ್ ಬಿಎ ನಂಜಪ್ಪನವರು, ‘ಇಂದು ಅನೇಕ ರಾಜ್ಯಗಳು ಭಾರತದಿಂದ ಹೊರಗೆ ಹೋಗುವ ಪ್ರಯತ್ನಗಳನ್ನು ಮಾಡುತ್ತಿವೆ. ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಅತಿ ಹೆಚ್ಚು ದೇಶಭಕ್ತರನ್ನು ನೀಡಿದ ಮತ್ತು ಅತ್ಯಂತ ಆಧ್ಯಾತ್ಮಿಕ ಪ್ರಗತಿಯನ್ನು ಕಂಡಂತಹ ರಾಜ್ಯಗಳು ಇಂದು  ಪ್ರತ್ಯೇಕತೆಯನ್ನು ಕೇಳುತ್ತಿವೆ. ಇದಕ್ಕೆ ಕಾರಣ ಭಾರತವನ್ನು ವಿಭಜಿಸಲು ಹೊರಗಿ ನಿಂದ ನಡೆಯುವ ಪಿತೂರಿ ಆಗಿದೆ. ಇದನ್ನು ಅರಿತು ಪ್ರತಿಯೊಬ್ಬರು ರಾಷ್ಟ್ರ ಮತ್ತು ಧರ್ಮಕ್ಕಾಗಿ ವಿಚಾರ ಮಾಡಬೇಕೆಂದು’ ಕರೆ ನೀಡಿದರು.

ಚನ್ನಹಳ್ಳಿ (ಶಿಕಾರಿಪುರ)

ಮಾರ್ಚ್ ೨೪ ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಬಳಿಯ ಚನ್ನಹಳ್ಳಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯನ್ನು ವಕ್ತಾರರಾಗಿ ಆಗಮಿಸಿದ ಸಮಿತಿಯ ಸೌ. ಕಾವೇರಿ ರಾಯ್ಕರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀ. ಶಿವಲಿಂಗಪ್ಪ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಅನಂತರ ರಾಷ್ಟ್ರ-ಧರ್ಮದ ಬಗ್ಗೆ ಮಾರ್ಗದರ್ಶನ ಮಾಡಿದರು.