ಕೇರಳದಲ್ಲಿನ ಹಿಂದೂತ್ವನಿಷ್ಠ ನ್ಯಾಯವಾದಿ ಗೋವಿಂದ ಭರತನ್ ಇವರ ನಿಧನ

ಹೈಕೋರ್ಟ್ ಹಿರಿಯ ವಕೀಲ ಮತ್ತು ಕೇಂದ್ರ ಸರ್ಕಾರದ ವಕೀಲ ಕೆ ಗೋವಿಂದ್ ಭರತನ್

ಕೊಚ್ಚಿ (ಕೇರಳ) – ಕೇರಳ ಉಚ್ಚ ನ್ಯಾಯಾಲಯದ ಹಾಗೂ ಕೇಂದ್ರ ಸರಕಾರದ ಹಿರಿಯ ನ್ಯಾಯವಾದಿ ಗೋವಿಂದ ಭರತನ್ ಇವರು ಏಪ್ರಿಲ್ ೧ ರಂದು ನಿಧನರಾದರು. ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿರುವಾಗ ಅವರು ನಿಧನರಾದರು. ಗೋವಿಂದ ಭರತನ ಇವರು ‘ಭಾರತೀಯ ವಾಕ್ಯ ಪರಿಷತ್ತಿ’ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ದೇವಸ್ಥಾನಕ್ಕೆ ಸಂಬಂಧ ಪಟ್ಟ ಅನೇಕ ಮೊಕ್ಕದ್ದಮೆ ಅವರು ನಡೆಸಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿವರ್ಷ ಗೋವಾದಲ್ಲಿ ಆಯೋಜಿಸಲಾಗುವ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಅವರು ನಿಯಮಿತವಾಗಿ ಸಹಭಾಗಿ ಆಗುತ್ತಿದ್ದರು.