ಚೆನ್ನೈ – ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸುವುದಕ್ಕಾಗಿ ಹಿಂದೂತ್ವನಿಷ್ಠ ಸಂಘಟನೆಗೆ ನ್ಯಾಯಾಲಯದಿಂದ ಅನುಮತಿ ನೀಡಿದ್ದರು ಕೂಡ ಪೊಲೀಸರು ಅನುಮತಿ ನಿರಾಕರಿಸಿದರು. ಅದರಿಂದ ಹಿಂದೂಗಳಲ್ಲಿ ಅಸಮಾಧಾನದ ಭಾವನೆ ಮೂಡಿದೆ.
The Madras High Court on Thursday directed the Bharat Hindu Munnani to conduct the Ram Navami procession via alternate route.#MadrasHighCourt #RamNavmi #ramnavami2023 #BharatHinduMunnani #Chennaipolice #Chennai https://t.co/ET3I3DwT1X
— DT Next (@dt_next) March 29, 2023
ನಗರದಲ್ಲಿ ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸುವುದಕ್ಕಾಗಿ ‘ಭಾರತ ಹಿಂದೂ ಮುನ್ನಾನಿ ‘ ಈ ಹಿಂದುತ್ವನಿಷ್ಠ ಸಂಘಟನೆಯಿಂದ ಫೆಬ್ರುವರಿ ೨೮ ರಂದು ಚೆನ್ನೈ ಪೋಲಿಸ ಆಯುಕ್ತರ ಕಾರ್ಯಾಲಯದಲ್ಲಿ ಒಂದು ಮನವಿ ಅರ್ಜಿ ನೀಡಲಾಗಿತ್ತು. ಇದರ ಬಗ್ಗೆ ೧೫ ದಿನ ಕಳೆದರೂ ಯಾವುದೇ ಉತ್ತರ ಸಿಗಲಿಲ್ಲ. ಆದ್ದರಿಂದ ‘ಭಾರತ ಹಿಂದೂ ಮುನ್ನಾನಿ ‘ ಸಂಘಟನೆಯು ಅನುಮತಿಗಾಗಿ ನ್ಯಾಯಾಲಯದಲ್ಲಿ ಮನವಿ ದಾಖಲಿಸಿತು. ಮಾರ್ಚ್ ೨೮.೨೦೨೩ ರಂದು ಇದರ ಬಗ್ಗೆ ವಿಚಾರಣೆ ನಡೆಯಿತು.’ಮೆರವಣಿಗೆಯ ಮಾರ್ಗವು ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹೋಗುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಬಹುದು. ಆದ್ದರಿಂದ ಮೆರವಣಿಗೆಗೆ ಅನುಮತಿ ನೀಡಬಾರದೆಂದು , ಪೊಲೀಸರ ವತಿಯಿಂದ ನ್ಯಾಯಾಲಯದಲ್ಲಿ ವಾದ ಮಂಡಿಸಲಾಯಿತು. ನ್ಯಾಯಾಲಯವು ಈ ವಾದ ಸ್ವೀಕರಿಸಿತು ; ಆದರೆ ಮೆರವಣಿಗೆಗಾಗಿ ಪರ್ಯಾಯ ಮಾರ್ಗಕ್ಕೆ ಅನುಮತಿ ನೀಡುವ ಆದೇಶ ನೀಡಿತು. ಇದನ್ನು ‘ಭಾರತ ಹಿಂದೂ ಮುನ್ನಾನಿ ‘ ಸಂಘಟನೆಯು ಈ ಪರ್ಯಾಯವನ್ನು ಸ್ವೀಕರಿಸಿತು ಮತ್ತು ಅದರ ಬಗ್ಗೆ ಅನುಮತಿ ನೀಡಲು ಚೆನ್ನೈ ಪೋಲಿಸ್ ಆಯುಕ್ತರ ಬಳಿ ಸುಧಾರಿತ ಅರ್ಜಿಯ ಮೂಲಕ ವಿನಂತಿಯ ಅರ್ಜಿ ಸಲ್ಲಿಸಿತು. ಆದರೂ ಕೂಡ ಮಾರ್ಚ್ ೩೦.೨೦೨೩ ರಂದು ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಲಾಯಿತು. ತಮಿಳುನಾಡಿನ ದ್ರಮುಕ್ ಸರಕಾರದ ರಾಜಕೀಯ ಒತ್ತಡದಿಂದ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಚೆನ್ನೈ ಪೋಲಿಸರು ನಿರಾಕರಿಸಿದರು, ಎಂದು ಹೇಳಲಾಗುತ್ತಿದೆ. (ಸರಕಾರದ ಕೈ ಗೊಂಬೆ ಆಗಿರುವ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಕಾಪಾಡುವರು ? – ಸಂಪಾದಕರು ) ಈ ಪ್ರಕರಣದ ಬಗ್ಗೆ ಮತ್ತೊಮ್ಮೆ ನ್ಯಾಯಾಲಯಕ್ಕೆ ಹೋಗುವ ನಿರ್ಣಯ’ಭಾರತ ಹಿಂದೂ ಮುನ್ನಾನಿ ‘ ತೆಗೆದುಕೊಂಡಿದೆ. ಹಾಗೂ ಮಾರ್ಚ್ ೩೦.೨೦೨೩ ರಂದು ‘ಭಾರತ ಹಿಂದೂ ಮುನ್ನಾನಿ ‘ಇಂದ ಸರಕಾರ ಮತ್ತು ಪೊಲೀಸ.
ಸಂಪಾದಕರ ನಿಲುವು
|